ಹೈದರಾಬಾದ್: ಮೆನೋಪಸ್ ಎಂಬುದು ಮಹಿಳೆಯ ಋತುಚಕ್ರ ನಿಲ್ಲುವ ಅವಧಿಯಾಗಿದೆ. ಮಹಿಳೆಯರು ತಮ್ಮ 45 ರಿಂದ 60 ವರ್ಷದಲ್ಲಿ ಈ ಲಕ್ಷಣವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಹಾಟ್ ಫ್ಲಾಷ್, ರಾತ್ರಿ ಬೆವರುವಿಕೆ, ಬ್ರೈನ್ ಫಾಗ್ನ ನಂತಹ ಅರಿವಿನ ಅಡೆತಡೆ, ಆತಂಕ, ನಿದ್ರೆ ತಡೆಯಂತಹ ಲಕ್ಷಣವನ್ನು ಸಾಮಾನ್ಯವಾಗಿ ಮಹಿಳೆಯರು ಅನುಭವಿಸುತ್ತಾರೆ.
ಕೆಲವರಲ್ಲಿ ಮೆನೋಪಸ್ ಲಕ್ಷಣಗಳು ಸಣ್ಣದಾಗಿದ್ದು, ಅಷ್ಟಾಗಿ ಸಮಸ್ಯೆಯಾಗುವುದಿಲ್ಲ. ಆದರೆ, ಶೇ 25ರಷ್ಟು ಮಹಿಳೆಯರಲ್ಲಿ ಈ ಮೆನೋಪಸ್ ಅವರ ದೈನಂದಿನ ಕೆಲಸದ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಇದರಿಂದ ಅವರ ವೃತ್ತಿ ಜೀವನ ಮೊಟಕಾಗುತ್ತಿದ್ದು, ಅವರ ಆದಾಯವೂ ಕುಂಠಿತವಾಗುತ್ತದೆ. ಮೆನೋಪಸ್ ಎಂಬುದು ಮಹಿಳೆಯರ ಕೆಲಸದ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ. ಇದಕ್ಕೆ ಉದ್ಯೋಗದಾತರು ಮಾಡಬೇಕಿರುವುದು ಏನು ಎಂಬುದರ ಕುರಿತು ಆಸ್ಟ್ರೇಲಿಯಾದ ಪತ್ರಕರ್ತೆ ಇಮೋಜೆನ್ ಕ್ರಂಪ್ ಮಾತನಾಡಿದ್ದಾರೆ.
ಸರ್ಕಾರವೂ ಕೂಡ ಮೆನೋಪಸ್ ಅವಧಿಯಲ್ಲಿ ಮಹಿಳೆಯರ ಕೆಲಸದಲ್ಲಿ ಹೆಚ್ಚಿನ ಭಾಗಿತ್ವದ ಗುರಿಯನ್ನು ಹೊಂದಬೇಕಿದೆ ಎಂದಿದ್ದಾರೆ. ಇತ್ತೀಚಿನ ಆಸ್ಟ್ರೇಲಿಯನ್ ಸಂಶೋಧನೆಯಲ್ಲಿ 45 ರಿಂದ 64 ವರ್ಷದ ಶೇ 17ರಷ್ಟು ಮಹಿಳೆಯರು ಕೆಲಸದಿಂದ ವಿರಾಮವನ್ನು ಪಡೆಯುತ್ತಿದ್ದಾರೆ.
ಮೆನೋಪಸ್ ಎಂಬುದು ಅನೇಕ ಮಹಿಳೆಯರ ಅವಧಿ ಪೂರ್ವವಾಗಿ ನಿವೃತ್ತಿ ಹೊಂದಿವ ಪ್ರಮುಖ ಅಂಶವೂ ಆಗಿದೆ. ಮಹಿಳೆಯರು ಪುರಷರಿಗಿಂತ ಮೊದಲೇ 7.4 ವರ್ಷ ಮೊದಲು ನಿವೃತ್ತಿಯನ್ನು ಪಡೆಯುತ್ತಾರೆ. ಇದರಿಂದ ಪ್ರತಿ ಮಹಿಳೆ 577.512 ಡಾಲರ್ ಸಂಪಾದನೆಯನ್ನು ನಷ್ಟವನ್ನು ಹೊಂದುತ್ತಾರೆ. ಇದರಿಂದ ಆಗುವ ಆರ್ಥಿಕ ಪರಿಣಾಮವೂ ಹೆಚ್ಚು. ಮೆನೋಪಸ್ನಿಂದಾಗಿ ಪ್ರತಿ ವರ್ಷ ಅವಧಿ ಪೂರ್ವ ನಿವೃತ್ತಿಯಿಂದಾಗಿ 15.2 ಬಿಲಿಯನ್ ಡಾಲರ್ ಆದಾಯ ನಷ್ಟವನ್ನು ಹೊಂದುತ್ತಿದೆ.