ಕರ್ನಾಟಕ

karnataka

ETV Bharat / health

ನೀರಿನಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು? ಅಧ್ಯಯನ ವರದಿಯಲ್ಲಿ ಮಹತ್ವದ ಸಂಗತಿಗಳು - HEALTH BENEFITS OF WATER

What Happens to Body Without Water: ನೀರು ಕುಡಿಯುವುದರಿಂದ ಅನೇಕ ಕಾಯಿಲೆಗಳು ಬರದಂತೆ ತಡೆಯಲು ಸಾಧ್ಯವಿದೆ. ದೇಹದಲ್ಲಿ ನೀರಿನ ಪ್ರಮಾಣ ಸರಿಯಾಗಿ ಇಲ್ಲದಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ.

WHAT HAPPENS TO BODY WITHOUT WATER  WHY WE SHOULD DRINK WATER EVERYDAY  WHY YOU SHOULD DRINK WATER DAILY  WHY WE NEED DRINK WATER
ಸಾಂದರ್ಭಿಕ ಚಿತ್ರ (Getty Images)

By ETV Bharat Health Team

Published : Jan 30, 2025, 1:29 PM IST

What Happens to Body Without Water:ನಮ್ಮಲ್ಲಿ ಬಹುತೇಕರು ಕೆಲಸದಲ್ಲಿ ಮಗ್ನರಾಗುವುದರಿಂದ ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದನ್ನೇ ಮರೆತುಬಿಡುತ್ತಾರೆ. ಮತ್ತೆ ಕೆಲವು ಜನರಿಗೆ ಈ ಚಳಿಗಾಲದ ವಾತಾವರಣದಲ್ಲಿ ನೀರು ಕುಡಿಯಲು ಆಗುವುದಿಲ್ಲ. ದೇಹವು ತನ್ನ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಕಷ್ಟು ನೀರು ಸೇವಿಸಬೇಕಾಗುತ್ತದೆ. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಇಲ್ಲದಿದ್ದರೆ ವಿವಿಧ ಸಮಸ್ಯೆಗಳು ಕಾಡುತ್ತವೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇಲ್ಲದಿದ್ದರೆ ಏನಾಗುತ್ತದೆ. ಜೊತೆಗೆ ನೀರು ಕುಡಿಯುವುದರಿಂದ ದೇಹಕ್ಕೆ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.

ಸಂಶೋಧನೆ ಏನು ಹೇಳುತ್ತೆ?:ಬೆಳಿಗ್ಗೆ ಎದ್ದ ಕ್ಷಣದಿಂದ ಕಚೇರಿಗೆ ಹೊರಡುವವರೆಗೆ ನೀರು ಕುಡಿಯವುದನ್ನೇ ಮರೆತುಬಿಡುತ್ತೇವೆ. ಹೀಗೆ ಮಾಡುವುದರಿಂದ ದೇಹಕ್ಕೆ ಹೆಚ್ಚು ಆಯಾಸವಾಗುತ್ತದೆ. ಹೆಚ್ಚುವರಿಯಾಗಿ ನಿರ್ಜಲೀಕರಣವು ಆಯಾಸ, ತಲೆನೋವು ಹಾಗೂ ಶಕ್ತಿಯ ನಷ್ಟಕ್ಕೂ ಕಾರಣವಾಗುತ್ತದೆ. ನೀವು ಎದ್ದ ತಕ್ಷಣ ಕನಿಷ್ಠ ಒಂದು ಗ್ಲಾಸ್​ ನೀರು ಕುಡಿಯಬೇಕಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ತಲೆನೋವನ್ನು ನಿವಾರಿಸಲು ಕುಡಿಯುವ ನೀರನ್ನು ತಿಳಿಸಲಾಗುತ್ತದೆ.(ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು (Getty Images)

ವಿಷಕಾರಿ ತ್ಯಾಜ್ಯ ಹೊರಹಾಕಲು ನೀರು ಅವಶ್ಯ:ನಮ್ಮ ದೇಹದಿಂದ ನೀರು ಬೆವರಿನ ರೂಪದಲ್ಲಿ ಹೊರಹೋಗುತ್ತದೆ. ಹೊರಗಿನ ಪರಿಸರಕ್ಕೆ ಅನುಗುಣವಾಗಿ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ದೇಹದಿಂದ ವಿಷಕಾರಿ ತ್ಯಾಜ್ಯವನ್ನು ಹೊರಹಾಕಲು ಮೂತ್ರಪಿಂಡಗಳು ನೀರನ್ನು ಬಳಕೆ ಮಾಡುತ್ತವೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ನೀರು ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ಸಂಶೋಧಕರು ವಿವರಿಸುತ್ತಾರೆ.

ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು (Getty Images)

ಜೀರ್ಣಕ್ರಿಯೆಗೆ ಅನುಕೂಲ:ನೀವು ಖಾರವಿರುವ ಆಹಾರ ಸೇವಿಸಿದರೂ ಇಲ್ಲವೇ ತಡವಾಗಿ ಸೇವಿಸಿದರೂ ಸಹ ನಿಮ್ಮ ಹೊಟ್ಟೆ ಕೆಲವೊಮ್ಮೆ ಉಬ್ಬಿರುವಂತೆ ಅನುಭವ ಆಗುತ್ತದೆ. ಇಂತಹ ಸಂದರ್ಭದಲ್ಲಿ ಒಂದು ಗ್ಲಾಸ್​ ಬೆಚ್ಚಗಿನ ನೀರು ಕುಡಿಯುವುದರಿಂದ ಸಮಸ್ಯೆಗೆ ಪರಿಹಾರ ಲಭಿಸುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯಬೇಕಾದರೆ ನೀರು ಮುಖ್ಯವಾದ ಪಾತ್ರವಹಿಸುತ್ತದೆ. ಆಹಾರ ಜೀರ್ಣಿಸಿಕೊಳ್ಳುವಲ್ಲಿ ಹಾಗೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ತ್ವರಿತವಾಗಿ ಹೀರಿಕೊಳ್ಳಲು ನೀರು ತುಂಬಾ ಮುಖ್ಯವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.

ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು (Getty Images)

ಕೀಲು ನೋವಿಗೆ ಪರಿಹಾರ:ನಮ್ಮಲ್ಲಿರುವ ಅನೇಕರು ಕೀಲು ನೋವಿನಿಂದ ಬಳಲುತ್ತಿದ್ದಾರೆ. ಸ್ನಾಯು ದೌರ್ಬಲ್ಯದಿಂದ ಅವರು ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಿರ್ಜಲೀಕರಣವು ಈ ರೀತಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಈ ಸಮಯದಲ್ಲಿ ಒಂದು ಗ್ಲಾಸ್​ ನೀರು ಕುಡಿಯಬೇಕಾಗುತ್ತದೆ. ನೀರು ಕುಡಿಯುವುದರಿಂದ ನೋವು ಕಡಿಮೆಯಾಗುತ್ತದೆ. ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.

ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು (Getty Images)

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್ ವೀಕ್ಷಿಸಬಹುದು:https://pubmed.ncbi.nlm.nih.gov/32446809/#:~:text=Based%20on%20evidences%20dehydration%20is,migraine%20headcahe%20frequency%20and%20severity

ಓದುಗರಿಗೆ ಪ್ರಮುಖ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ABOUT THE AUTHOR

...view details