White Tea Health Benefits:ಚಹಾ ಮತ್ತು ಕಾಫಿ ಅತ್ಯಂತ ಜನಪ್ರಿಯ ಪಾನೀಯಗಳಾಗಿವೆ. ಪ್ರಪಂಚದ ಯಾವುದೇ ಪ್ರದೇಶಗಳಲ್ಲಿ ಹೋದರೂ ಚಹಾ ಮತ್ತು ಕಾಫಿ ಲಭಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಕರು ಪರಸ್ಪರ ಕುಳಿತು ಮಾತನಾಡುವಾಗ ಚಹಾ ಅಥವಾ ಕಾಫಿ ಕುಡಿಯಬೇಕು. ಕೆಲವರು ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಕುಡಿಯುತ್ತಾರೆ. ಆದರೆ, ಕೆಲವರು ದಿನಕ್ಕೆ 5-6 ಬಾರಿ ಕುಡಿಯುತ್ತಾರೆ. ಆದಾಗ್ಯೂ, ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಅನೇಕ ಜನರು ಹರ್ಬಲ್ ಟೀಗಳತ್ತ ಮುಖ ಮಾಡುತ್ತಿದ್ದಾರೆ.
ಗಿಡಮೂಲಿಕೆಗಳಿಂದ ಸಿದ್ಧಪಡಿಸುವ ಚಹಾಗಳಲ್ಲಿ, ಪ್ರಮುಖವಾಗಿ ಗ್ರೀನ್ ಮತ್ತು ಲೆಮನ್ ಚಹಾವನ್ನು ಮಾತ್ರ ಹೆಚ್ಚು ಸೇವಿಸುತ್ತಾರೆ. ಇದಲ್ಲದೇ ವೈಟ್ ಟೀ ಸೇವನೆಯಿಂದಲೂ ಆರೋಗ್ಯಕ್ಕೆ ಹಲವು ಲಾಭಗಳಿವೆ ಎನ್ನುತ್ತಾರೆ ವೈದ್ಯರು. ಈ ಟೀ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.
ತೂಕ ಇಳಿಕೆ: ವೈಟ್ ಟೀ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಪರಿಣಾಮವಾಗಿ ಕೊಬ್ಬು ಕರಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ ಎಂದು ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ. 2018 ರಲ್ಲಿ ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬಿಳಿ ಚಹಾ ಸೇವನೆಯು ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಅಧಿಕ ತೂಕ ಹೊಂದಿರುವ ಜನರಲ್ಲಿ ಚಯಾಪಚಯ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಇದು ಕಂಡುಬಂದಿದೆ. ಪೋರ್ಟೊ ವಿಶ್ವವಿದ್ಯಾನಿಲಯದ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನಗಳ ಫ್ಯಾಕಲ್ಟಿಯಾಗಿರುವ ಡಾ. ಅನಾ ಸೌಸಾ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.
ಉತ್ಕರ್ಷಣ ನಿರೋಧಕ:ಬಿಳಿ ಚಹಾವು ಹೆಚ್ಚಿನ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇವು ಜೀವಕೋಶಗಳನ್ನು ಹಾನಿ, ಉರಿಯೂತ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ರಕ್ಷಿಸುತ್ತವೆ ಎಂದು ವೈದ್ಯರು ವಿವರಿಸುತ್ತಾರೆ.
ಹೃದಯದ ಆರೋಗ್ಯವನ್ನು ಸುಧಾರಿಸಿ: ಬಿಳಿ ಚಹಾದ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮತ್ತು ದೇಹದ ಆರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.
ಕ್ಯಾನ್ಸರ್ ಬರದಂತೆ ತಡೆಯುತ್ತೆ:ಇದರಲ್ಲಿ ಕ್ಯಾನ್ಸರ್ ತಡೆಗಟ್ಟುವ ಕೋಶಗಳಿವೆ ಎಂದು ಹೇಳಲಾಗುತ್ತದೆ. ಈ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಕರುಳಿನ, ಹೊಟ್ಟೆ ಮತ್ತು ಸ್ತನ ಕ್ಯಾನ್ಸರ್ ಅನ್ನು ತಡೆಯುತ್ತದೆ ಎನ್ನುತ್ತಾರೆ ವೈದ್ಯರು.
ಚಿಕ್ಕವರಂತೆ ಕಾಣಲು ಸಹಾಯ ಮಾಡುತ್ತೆ:ಬಿಳಿ ಚಹಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಸುಕ್ಕುಗಳು ಮತ್ತು ವಯಸ್ಸಿನ ಕಲೆಗಳನ್ನು ಕಡಿಮೆ ಮಾಡುತ್ತದೆ. ಈ ಚಹಾ ಸೇವನೆಯಿಂದ ಸದಾ ಯಂಗ್ ಆಗಿ ಕಾಣಿಸಿಕೊಳ್ಳುತ್ತೀರಿ ಅನ್ನುತ್ತೆ ಸಂಶೋಧನಾ ವರದಿ.