ಕರ್ನಾಟಕ

karnataka

ETV Bharat / health

ಬೆಳ್ಳಗಾಗುವ ಬಯಕೆಯಿಂದ ತ್ವಚೆಗೆ ಬಿಳಿ ಕ್ರೀಂ ಹಚ್ಚುವ ಮುನ್ನ ಯೋಚಿಸಿ! - CHANGE THE SKIN COLOUR

ವೈದ್ಯರ ಹೊರತಾಗಿ ಅಂಗಡಿಗಳಲ್ಲಿ ಸಿಗುವ ಕ್ರೀಂಗಳು ಅನೇಕ ಬಾರಿ ನಿಮ್ಮ ತ್ವಚೆಗೆ ಸೂಕ್ತವಲ್ಲದೇ ಇದ್ದು, ಇವು ಅನೇಕ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತವೆ.

white-cream-will-not-change-the-skin-colour-it-causes-side-effects
ಸಾಂದರ್ಭಿಕ ಚಿತ್ರ (ಈಟಿವಿ ಭಾರತ್​​)

By ETV Bharat Karnataka Team

Published : Jul 24, 2024, 4:26 PM IST

ಹೈದರಾಬಾದ್​: ಸುಂದರ, ಹೊಳೆಯುವ, ಬಿಳಿಯಾದ ವರ್ಣಯುತ ತ್ವಚೆಯನ್ನು ಪಡೆಯಬೇಕು ಎಂಬುದು ಅನೇಕ ಮಂದಿ ಬಯಕೆ. ಇದೇ ಕಾರಣಕ್ಕೆ ಶ್ವೇತ ವರ್ಣದ ತ್ವಚೆ ಪಡೆಯುವ ಉದ್ದೇಶದಿಂದ ಭಿನ್ನ ವರ್ಣಿಯ ಮಂದಿ ಮಾರುಕಟ್ಟೆಯಲ್ಲಿರುವ ಹಲವಾರು ಕ್ರೀಮ್​ಗಳ ಬಳಕೆಗೆ ಮುಂದಾಗುತ್ತಾರೆ. ಆದರೆ, ಇಂತಹ ಕ್ರೀಮ್​ಗಳು ಮತ್ತು ಬ್ಲೀಚ್​​ಗಳು ಮುಖದ ಅಂದ ಹೆಚ್ಚಿಸುವಲ್ಲಿ ಪರಿಹಾರ ಮಾರ್ಗ ಅಲ್ಲ ಎನ್ನುವುದನ್ನು ಮರೆಯಬಾರದು.

ಸಾಮಾನ್ಯವಾಗಿ ಅನೇಕ ವೇಳೆ ತ್ವಚೆಯಲ್ಲಿರುವ ಕಪ್ಪು ವರ್ತುಲಗಳ ನಿವಾರಣೆಗೆ ವೈದ್ಯರು ಕೆಲವು ಕ್ರೀಂಗಳನ್ನು ಶಿಫಾರಸು ಮಾಡುತ್ತಾರೆ. ಅದನ್ನು ಹೊರತು ಸಂಪೂರ್ಣವಾಗಿ ನೈಜ ತ್ವಚೆಯ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ. ತ್ವಚೆಯ ಸಮಸ್ಯೆಗೆ ವೈದ್ಯರ ಸೂಚನೆ ಮೇರೆಗೆ ಮಾತ್ರ ಅವರು ನೀಡುವ ಕ್ರೀಂಗಳನ್ನು ದೀರ್ಘ ಕಾಲ ಬಳಕೆ ಮಾಡುವುದು ಅವಶ್ಯಕವಾಗುತ್ತದೆ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಕ್ರೀಂಗಳು ಎಂದಿಗೂ ತ್ವಚೆಯ ಬಣ್ಣಕ್ಕೆ ಸಹಾಯಕವಾಗುವುದಿಲ್ಲ.

ನೈಸರ್ಗಿಕ ಸೌಂದರ್ಯವೇ ಒಳ್ಳೆಯದು; ಇನ್ನು ವೈದ್ಯರ ಹೊರತಾಗಿ ಅಂಗಡಿಗಳಲ್ಲಿ ಸಿಗುವ ಕ್ರೀಂಗಳು ಅನೇಕ ಬಾರಿ ನಿಮ್ಮ ತ್ವಚೆಗೆ ಸೂಕ್ತವಲ್ಲದೇ ಇದ್ದು, ಇವು ಅನೇಕ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ. ಇಂತಹ ಬಣ್ಣ ಬಿಳುಪಾಗಿಸುವ ಕ್ರೀಂಗಳು ಪಾದರಸ ಅಂಶವನ್ನು ಹೆಚ್ಚಾಗಿ ಹೊಂದಿರುತ್ತವೆ. ಇವುಗಳ ಬಳಕೆಯು ದೇಹದಲ್ಲಿ ಭಾರೀ ಲೋಹದ ವಿಷಕಾರಿ ಅಂಶ ಮತ್ತು ಕಿಡ್ನಿ ವೈಫಲ್ಯದ ಸಮಸ್ಯೆಗೆ ಗುರಿಯಾಗಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇವು ಮುಖದಲ್ಲಿ ಮೊಡವೆ ಮತ್ತು ತ್ವಚೆಯ ಅಲರ್ಜಿಯಂತಹ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದು ತ್ವಚೆಯನ್ನು ಮತ್ತಷ್ಟು ಹಾನಿ ಮಾಡಿ, ಮತ್ತಷ್ಟು ಕಪ್ಪಾಗಿಸಬಹುದು. ನೈಸರ್ಗಿಕವಾಗಿ ತ್ವಚೆಯ ಬಿಳುಪು ಕಾಯ್ದುಕೊಳ್ಳುವುದು ಯಾವಾಗಲೂ ಉತ್ತಮ ಮತ್ತು ಸುರಕ್ಷಿತ ಮಾರ್ಗ.

ಹಾಗೇನಾದರೂ ಮಾಡಬಯಸಿದರೆ, ಮೊಸರಿಗೆ, ಕಡಲೆಹಿಟ್ಟು ಮತ್ತು ಒಂದೆರಡು ಹನಿ ನಿಂಬೆ ರಸವನ್ನು ಬೆರೆಸಿ, ಮುಖಕ್ಕೆ ಹಚ್ಚಿ. ಹತ್ತು ನಿಮಿಷದ ಬಳಿಕ ಮುಖ ತೊಳೆಯಿರಿ.

ಹಾಗೇ ಮುಖಕ್ಕೆ ಸಾಧ್ಯವಾದಷ್ಟು ಟಾಲ್ಕ್​ಮ್​ ಪೌಡರ್​​ ಮತ್ತು ಇತರೆ ಕ್ರೀಂ ಬಳಸುವುದನ್ನು ತಪ್ಪಿಸುವುದು ಸೂಕ್ತ. ಇದರಲ್ಲಿನ ರಾಸಾಯನಿಕ ಅಂಶಗಳು ಸೂರ್ಯನ ಕಿರಣದೊಂದಿಗಿನ ಪ್ರಕ್ರಿಯೆಯೊಂದಿಗೆ ತ್ವಚೆಯನ್ನು ಮತ್ತಷ್ಟು ಕಪ್ಪಾಗಿಸುತ್ತವೆ. ಮತ್ತೊಂದು ಮುಖ್ಯ ಅಂಶ ಎಂದರೆ, ಕೇವಲ ಬಿಳುಪಿನ ತ್ವಚೆ ಮಾತ್ರ ಸೌಂದರ್ಯದ ಪ್ರತೀಕ ಎಂದು ನಂಬಬೇಡಿ. ಸೌಂದರ್ಯ ಎಂಬುದು ಎಲ್ಲರಲ್ಲೂ ಇರುತ್ತದೆ. ಇದನ್ನು ಅರಿತು ನಮ್ಮ ಮೈಬಣ್ಣ ಒಪ್ಪಿ ಖುಷಿಯಾಗಿರುವುದು ಅಗತ್ಯ ಎಂಬುದು ಮರೆಯಬಾರದು.

ಇದನ್ನೂ ಓದಿ:ನೇರಳೆ ಅಂತಾ ಕನ್​​​ಫ್ಯೂಸ್​​ ಆಗಬೇಡಿ: ಇವು ಜಾಮೂನು ಹಣ್ಣಿನ ಬೀಜಗಳು, ಇವುಗಳನ್ನು ತಿನ್ನಿ ಮಧುಮೇಹಕ್ಕೆ ಹೇಳಿ ಟಾಟಾ - ಬೈಬೈ..!

ABOUT THE AUTHOR

...view details