ಹೈದರಾಬಾದ್: ಗುಜರಾತ್ನ ಸಬರಕಾಂತ ಜಿಲ್ಲೆಯಲ್ಲಿ ಶಂಕಿತ ಚಂಡೀಪುರ ವೈರಸ್ ಸೋಂಕಿಗೆ ನಾಲ್ಕು ಮಕ್ಕಳು ಬಲಿಯಾಗಿದ್ದು, ಇಬ್ಬರು ಹಿಮ್ಮತ್‌ನಗರ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ. ಸೋಂಕು ಉಲ್ಬಣವಾಗಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಸೋಂಕಿನ ತಡೆಗೆ ಸೋಂಕಿತ ಪ್ರದೇಶದಲ್ಲಿ ಮರಳುನೊಣಗಳನ್ನು ತಡೆಗಟ್ಟಲು ಮುಂದಾಗಿದ್ದಾರೆ.
ಏನಿದು ಚಂಡೀಪುರ್ ವೈರಸ್: ರಾಬ್ಡೋವಿರಿಡೆ (Rhabdoviridae) ಹರಡುವ ಸೋಂಕಾಗಿದೆ. ಈ ಸೋಂಕು ತೀವ್ರವಾದ ಎನ್ಸೆಫಾಲಿಟಿಸ್, ಮೆದುಳಿನ ತೀವ್ರವಾದ ಉರಿಯೂತವನ್ನು ಉಂಟುಮಾಡಬಹುದು. ಮೊದಲಿಗೆ 1965 ರಲ್ಲಿ ಮಹಾರಾಷ್ಟ್ರದಲ್ಲಿ ಈ ಸೋಂಕು ಪತ್ತೆಯಾಗಿತ್ತು. ದೇಶದಲ್ಲಿ ಎನ್ಸೆಫಾಲಿಟಿಕ್ ಕಾಯಿಲೆಯ ವಿವಿಧ ಸಂಬಂಧವನ್ನು ಹೊಂದಿದೆ ಈ ಸೋಂಕು. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ 2003ರಲ್ಲಿ ಈ ಸೋಂಕು ಹರಡಿತು. 329 ಮಕ್ಕಳು ಸೋಂಕಿಗೆ ಗುರಿಯಾಗಿದ್ದು, 183 ಸಾವನ್ನಪ್ಪಿದ್ದರು. 2004 ರಲ್ಲಿ ಗುಜರಾತ್‌ನಲ್ಲಿ ಕೆಲವು ಪ್ರಕರಣ ಪತ್ತೆಯಾಗಿ, ಸಾವು ಸಂಭವಿಸಿತ್ತು.
ಇದೀಗ ಸೋಂಕಿಗೆ ಜುಲೈ 10 ರಂದು ಸಾವುಗಳು ಸಂಭವಿಸಿವೆ, ಮೃತರಲ್ಲಿ ಒಬ್ಬರು ಸಬರಕಾಂತ್ ಜಿಲ್ಲೆಯವರು. ಇನ್ನಿಬ್ಬರು ಅರಾವಳಿ ಜಿಲ್ಲೆಯವರು. ಈ ಸೋಂಕಿಗೆ ಇನ್ನಬ್ಬರು ರಾಜಸ್ಥಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಸ್ಥಾನದ ಆರೋಗ್ಯ ಅಧಿಕಾರಿಗಳು ಕೂಡ ಈ ಸೋಂಕು ಜೀವ ಹಾನಿಕಾರಕ ಸೋಂಕಾಗಿದೆ ಎಂದು ಎಚ್ಚರಿಸಿದ್ದಾರೆ.