Morning Breakfast:ಆಹಾರವು ಆರೋಗ್ಯ ಮತ್ತು ಅನಾರೋಗ್ಯದ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತದೆ. ನಾವು ಏನನ್ನು ಸೇವಿಸುತ್ತೇವೆ? ನಾವು ಎಷ್ಟು ಪ್ರಯಾಣದಲ್ಲಿ ಆಹಾರ ಸೇವನೆ ಮಾಡುತ್ತಿದ್ದೇವೆ? ನಾವು ಯಾವಾಗ ತಿನ್ನುತ್ತೇವೆ? ತಜ್ಞರ ಪ್ರಕಾರ, ಈ ವಿಷಯಗಳು ಬಹಳ ಮುಖ್ಯ. ಇದರಲ್ಲಿ ಎಲ್ಲಿ ವ್ಯತ್ಯಾಸವಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ. ಆದರೆ, ಕೆಲವರಿಗೆ ಇವೆಲ್ಲದರ ಅರಿವು ಕೂಡ ಇರುವುದಿಲ್ಲ.
ಕೆಲವರು ಬೇಕೆಂದಾಗ ಏನಾದರೂ ತಿನ್ನುತ್ತಾರೆ. ತಮ್ಮ ಹಸಿವು ನೀಗಿಸಿಕೊಳ್ಳಲು ಸಿಕ್ಕಿದ್ದನ್ನೆಲ್ಲ ಸೇವಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಟಿಫಿನ್ ಸೆಂಟರ್ಗಳಲ್ಲಿ ಬಾಯಿಗೆ ರುಚಿಕರಯಾಗಿರುವ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತಾರೆ. ಈ ರೀತಿ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ. ಬೆಳಗಿನ ಊಟದಲ್ಲಿ ಒಳ್ಳೆಯ ಆಹಾರ ಪದಾರ್ಥಗಳು ಇರುವಂತೆ ನೋಡಿಕೊಳ್ಳಬೇಕು ಎಂದು ಹಾರ್ವರ್ಡ್ ಪೌಷ್ಟಿಕತಜ್ಞ ಡೇವಿಡ್ ಲುಡ್ವಿಗ್ ಎಚ್ಚರಿಕೆ ನೀಡುತ್ತಾರೆ.
ರಾತ್ರಿ 8 ರಿಂದ 9 ಗಂಟೆಯ ಸುಮಾರಿಗೆ ನೀವು ಊಟ ಮಾಡಿದರೆ, ಅನೇಕರು ಬೆಳಗ್ಗೆ 8 ಗಂಟೆಯ ನಂತರ ಮತ್ತೆ ಆಹಾರ ಸೇವನೆ ಮಾಡುತ್ತಾರೆ. ಅಂದರೆ, ಈ ಎರಡು ಊಟಗಳ ನಡುವೆ ಸುಮಾರು 12 ಗಂಟೆಗಳ ಅಂತರವಿದೆ. ಇಂತಹ ಗ್ಯಾಪ್ನಲ್ಲಿ ದೇಹಕ್ಕೆ ಶಕ್ತಿ ನೀಡುವಂತ ಹಾಗೂ ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಬೇಕೇ ಹೊರತು, ದೇಹಕ್ಕೆ ಹಾನಿಕಾರಕ ಆಹಾರ ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಫೈಬರ್ ಇರುವ ಆಹಾರ: ನಿಮ್ಮ ಬೆಳಗಿನ ಊಟದಲ್ಲಿ ಫೈಬರ್ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ.. ರಾಗಿ, ಬೇಳೆ ಹಾಗೂ ಸಜ್ಜೆಯನ್ನು ತಿನ್ನಬೇಕಾಗುತ್ತದೆ. ಇವುಗಳಿಂದ ತಯಾರಿಸಿದ ಬ್ರೆಡ್ ಮತ್ತು ಓಟ್ ಮೀಲ್ ಉತ್ತಮ ಆಯ್ಕೆಯಾಗಿವೆ ಎಂದು ಡೇವಿಡ್ ಲುಡ್ವಿಗ್ ಸಲಹೆ ನೀಡುತ್ತಾರೆ.
ಪ್ರೋಟೀನ್:ಫೈಬರ್ ಜೊತೆಗೆ ಪ್ರೋಟೀನ್ ಇರುವ ಆಹಾರ ಸೇವನೆ ಮಾಡಬೇಕಾಗುತ್ತದೆ. ಇದರ ಜೊತೆಗೆ ಬೇಯಿಸಿದ ಮೊಟ್ಟೆ ಹಾಗೂ ಮೊಸರು ಒಳಗೊಂಡಿರುವ ಉತ್ತಮ ಆಹಾರ ಸೇವಿಸಿ. ಈ ಪದಾರ್ಥಗಳಿಂದ ಪ್ರೋಟೀನ್‌ಗಳಲ್ಲದೆ ಖನಿಜಗಳು ಮತ್ತು ಅಗತ್ಯ ವಿಟಮಿನ್‌ಗಳು ಸಹ ಲಭ್ಯವಿವೆ ಎಂದು ತಜ್ಞರು ತಿಳಿಸುತ್ತಾರೆ.