ಕರ್ನಾಟಕ

karnataka

ETV Bharat / health

ಭರ್ಜರಿ ರುಚಿಯ 'ವೆಜ್ ಫ್ರೈಡ್ ರೈಸ್': ಮಕ್ಕಳಿಗಂತೂ ತುಂಬಾ ಇಷ್ಟವಾಗುತ್ತೆ! - VEG FRIED RICE

Street Style Veg Fried Rice: ಕೇವಲ 10 ನಿಮಿಷಗಳಲ್ಲಿ ಸವಿಯಾದ ಭರ್ಜರಿ ರುಚಿಯಾದ ರೈಸ್​ ರೆಸಿಪಿಯನ್ನು ಸಿದ್ಧಪಡಿಸಬಹುದು. ಅದುವೇ ವೆಜ್ ಫ್ರೈಡ್ ರೈಸ್. ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

STREET STYLE VEG FRIED RICE  HOW TO MAKE VEG FRIED RICE  VEGETABLE FRIED RICE  ವೆಜ್ ಫ್ರೈಡ್ ರೈಸ್
ವೆಜ್ ಫ್ರೈಡ್ ರೈಸ್ (ETV Bharat)

By ETV Bharat Lifestyle Team

Published : Dec 26, 2024, 6:13 PM IST

Street Style Veg Fried Rice:ಹಲವರು ಫ್ರೈಡ್ ರೈಸ್ ತುಂಬಾ ಇಷ್ಟಪಡುತ್ತಾರೆ. ಮನೆಯಲ್ಲಿ ಉಳಿದಿರುವ ಅನ್ನದಿಂದಲೂ ಕೆಲವೇ ನಿಮಿಷಗಳಲ್ಲಿ ಮಕ್ಕಳ ಲಂಚ್​ ಬಾಕ್ಸ್​ಗೆ ಸಿದ್ಧಪಡಿಸಬಹುದಾಗಿದೆ. ಹೆಚ್ಚಿನವರು ವಿವಿಧ ಪ್ರಕಾರದ ಫ್ರೈಡ್ ರೈಸ್ ಮಾಡುತ್ತಾರೆ. ಕೆಲವರು ಮನೆಯಲ್ಲಿ ಈ ರೈಸ್​ ಮಾಡಿದರೆ ಅಷ್ಟು ಟೇಸ್ಟಿಯಾಗಿರುವುದಿಲ್ಲ. ಆದ್ರೆ ನಾವು ತಿಳಿಸಿದಂತೆ 'ವೆಜಿಟೇಬಲ್ ಫ್ರೈಡ್ ರೈಸ್' ಸಿದ್ಧಪಡಿಸಿದರೆ ಮನೆ ಮಂದಿ ಎಲ್ಲರೂ ತುಂಬಾ ಇಷ್ಟಪಟ್ಟು ಸೇವಿಸುತ್ತಾರೆ. ಕೇವಲ 10 ನಿಮಿಷಗಳಲ್ಲಿ ಈ ಫ್ರೈಡ್ ರೈಸ್ ಅನ್ನು ರೆಡಿ ಮಾಡಬಹುದಾಗಿದೆ.

ಕಡಿಮೆ ಸಮಯದಲ್ಲಿ ಫಟಾ ಫಟ್​ ಅಂತ ಮಾಡಿದರೂ ರುಚಿಯು ಅಷ್ಟ ಸೂಪರ್​ ಆಗಿರುತ್ತದೆ. ಈ ರೈಸ್​ ಲಂಚ್​ ಬಾಕ್ಸ್​ಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಸಿಂಪಲ್ ವೆಜ್ ಫ್ರೈಡ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳೇನು? ಉತ್ಪಾದನಾ ಪ್ರಕ್ರಿಯೆ ಹೇಗೆ ಎಂಬುದನ್ನು ನೋಡೋಣ.

ವೆಜ್ ಫ್ರೈಡ್ ರೈಸ್​ಗೆ ಬೇಕಾಗುವ ಪದಾರ್ಥಗಳು:

  • ಅಕ್ಕಿ - ಒಂದೂವರೆ ಗ್ಲಾಸ್
  • ಕ್ಯಾರೆಟ್-1
  • ಈರುಳ್ಳಿ-1
  • ಹಸಿಮೆಣಸಿನಕಾಯಿ-2
  • ಎಣ್ಣೆ - ಅಗತ್ಯಕ್ಕೆ ತಕ್ಕಷ್ಟು
  • ರುಚಿಗೆ ತಕ್ಕಷ್ಟು ಉಪ್ಪು
  • ಬೀನ್ಸ್-5
  • ಖಾರದ ಪುಡಿ - ಟೀಸ್ಪೂನ್​
  • ಧನಿಯಾ ಪುಡಿ - ಟೀಸ್ಪೂನ್​
  • ಕಾಳುಮೆಣಸಿನ ಪುಡಿ - ಟೀಸ್ಪೂನ್​
  • ಸೋಯಾ ಸಾಸ್ - ಟೀಸ್ಪೂನ್​
  • ವಿನೆಗರ್ - ಟೀಸ್ಪೂನ್​
  • ಕೊತ್ತಂಬರಿ ಪುಡಿ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್​

ವೆಜ್ ಫ್ರೈಡ್ ರೈಸ್ ತಯಾರಿಸುವ ವಿಧಾನ:

  • ಮೊದಲು ಅಕ್ಕಿಯನ್ನು ಎರಡು ಬಾರಿ ತೊಳೆಯಿರಿ. ಬಳಿಕ ಅನ್ನವನ್ನು ಬೇಯಿಸಲು ಒಲೆಯ ಮೇಲೆ ಪಾತ್ರೆ ಇಡಿ. ಅದರಲ್ಲಿ 3 ಲೋಟ ನೀರು, ಸ್ವಲ್ಪ ಎಣ್ಣೆ ಮತ್ತು ಉಪ್ಪು ಸೇರಿಸಿ.
  • ನೀರು ಚೆನ್ನಾಗಿ ಕುದಿಯುತ್ತಿರುವಾಗ ಅಕ್ಕಿಯನ್ನು ಹಾಕಬೇಕು. ಸಂಪೂರ್ಣ ರೈಸ್​ ರೆಡಿಯಾಗಬೇಕು.
  • ಈಗ ಅಡುಗೆಗೆ ಬೇಕಾಗುವಂತಹ ಕ್ಯಾರೆಟ್, ಬೀನ್ಸ್, ಹಸಿಮೆಣಸಿನಕಾಯಿ ಹಾಗೂ ಈರುಳ್ಳಿ ಸೇರಿಸಿ.
  • ನಂತರ ವೆಜ್ ಫ್ರೈಡ್ ರೈಸ್ ಮಾಡಲು ಪ್ಯಾನ್ ಅನ್ನು ಒಲೆಯ ಮೇಲೆ ಇಡಿ. 3 ಚಮಚ ಎಣ್ಣೆಯನ್ನು ಸೇರಿಸಿ ಹಾಗೂ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಈರುಳ್ಳಿ, ಹಸಿಮೆಣಸಿನಕಾಯಿ ಪೀಸ್​​ಗಳನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕಾಗುತ್ತದೆ.
  • ನಂತರ ಸ್ಟೌನ್ನು ಮಧ್ಯಮ ಉರಿಯಲ್ಲಿ ಇಟ್ಟು ಕ್ಯಾರೆಟ್ ಮತ್ತು ಬೀನ್ಸ್ ತುಂಡುಗಳನ್ನು ಹಾಕಿ ಎರಡು ನಿಮಿಷ ಫ್ರೈ ಮಾಡಿ.
  • ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕಾಗುತ್ತದೆ. ನಂತರ ಈ ಮಿಶ್ರಣದೊಳಗೆ ಬೇಯಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
  • ಬಳಿಕ ಖಾರದ ಪುಡಿ, ಧನಿಯಾ ಪುಡಿ, ಕಾಳು ಮೆಣಸು ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
  • ಅನ್ನಕ್ಕೆ ಮಸಾಲೆ ಸೇರಿಸಿದ ಬಳಿಕ, ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ಟವ್ ಆಫ್ ಮಾಡುವ ಮೊದಲು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಿಂಪಡಿಸಿ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
  • ಹೀಗೆ ಮಾಡಿದರೆ ಟೇಸ್ಟಿ ವೆಜ್ ಫ್ರೈಡ್ ರೈಸ್ ಸಿದ್ಧವಾಗುತ್ತದೆ. ನೀವು ಬಯಸಿದರೆ, ಈ ಫ್ರೈಡ್ ರೈಸ್ ಅನ್ನು ಮನೆಯಲ್ಲಿ ಯಾವಾಗ ಬೇಕಾದರೂ ಟ್ರೈ ಮಾಡಬಹುದು.

ಇವುಗಳನ್ನೂ ಓದಿ:

ABOUT THE AUTHOR

...view details