What is the Unlimited health insurance:ಈ ಕಾಲದರಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಪಾಲಿಸಿ ಅವಶ್ಯಕ. ಆದರೆ, ನಿರ್ದಿಷ್ಟ ಪ್ರಮಾಣದ ಕವರೇಜ್ ಒದಗಿಸುವ ಆರೋಗ್ಯ ವಿಮಾ ಪಾಲಿಸಿಗಳಿಗಿಂತ 'ಅನಿಯಮಿತ(ಅನ್ಲಿಮಿಟೆಡ್) ಕವರೇಜ್ ಒದಗಿಸುವ ಆರೋಗ್ಯ ವಿಮಾ ಪಾಲಿಸಿಗಳು ಉತ್ತಮವಾಗಿವೆ. ನಮ್ಮ ವೈದ್ಯಕೀಯ ಚಿಕಿತ್ಸೆಗಳಿಗೆ ಎಷ್ಟೇ ಖರ್ಚಾದರೂ ಈ ಪಾಲಸಿಗಳು ಕವರೇಜ್ ನೀಡುತ್ತವೆ.
ಹೀಗಾಗಿ ಇದು ನಮಗೆ ತುರ್ತು ಸಮಯದಲ್ಲಿ ಆರೋಗ್ಯ ಭದ್ರತೆಯ ಜೊತೆಗೆ ಆರ್ಥಿಕ ಭರವಸೆ ನೀಡುತ್ತವೆ. ಇದರಿಂದ ನಾವು ಅನಿರೀಕ್ಷಿತವಾಗಿ ಎದುರಾಗುವ ಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಹಾಗಾದರೆ ಅನ್ಲಿಮಿಟೆಡ್ ಆರೋಗ್ಯ ವಿಮಾ ಪಾಲಿಸಿಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ
ಆರೋಗ್ಯ ಸಮಸ್ಯೆಗಳು ನಮಗೆ ಹೇಳಿ ಕೇಳಿ ಬರುವುದಿಲ್ಲ. ಅದಕ್ಕಾಗಿಯೇ ಆರೋಗ್ಯ ವಿಮೆ ತೆಗೆದುಕೊಳ್ಳಬೇಕು. ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಎದುರಾದರೆ ವೈದ್ಯಕೀಯ ಚಿಕಿತ್ಸೆಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾಗುತ್ತದೆ. ಆರೋಗ್ಯ ವಿಮೆ ಇಲ್ಲದವರಿಗೆ ಈ ಪರಿಸ್ಥಿತಿ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆದರೆ, ಆರೋಗ್ಯ ವಿಮೆ ಇದ್ದವರಿಗೆ ಯಾವುದೇ ಚಿಂತೆ ಇರುವುದಿಲ್ಲ.
ಏಕೆಂದರೆ, ಆರೋಗ್ಯ ವಿಮಾ ಪಾಲಿಸಿಯನ್ನು ಒದಗಿಸಿದ ಕಂಪನಿಯು ಅವರ ವೈದ್ಯಕೀಯ ವೆಚ್ಚ ಭರಿಸಲು ಸಿದ್ಧವಿರುತ್ತದೆ. ಕಡಿಮೆ ವೈದ್ಯಕೀಯ ವೆಚ್ಚಗಳಿಗೆ ಸಾಮಾನ್ಯ ಆರೋಗ್ಯ ವಿಮಾ ಪಾಲಿಸಿಗಳು ಸೂಕ್ತವಾಗಿವೆ. ಆದರೆ ನೀವು ದುಬಾರಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾದರೆ 'ಅನ್ ಲಿಮಿಟೆಡ್' ಆರೋಗ್ಯ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವುದು ಉಪಯುಕ್ತವಾಗಿವೆ. ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು, ಈಗಾಗಲೇ ಕಾಯಿಲೆಗಳನ್ನು ಹೊಂದಿರುವವರು ಈ ರೀತಿಯ ಪಾಲಿಸಿಗಳನ್ನು ತೆಗೆದುಕೊಳ್ಳುವುದು ಉತ್ತಮ.
ಪ್ರಸ್ತುತ ವಿಮಾ ಮಾರುಕಟ್ಟೆಯಲ್ಲಿ ಅನ್ಲಿಮಿಟೆಡ್ ಕವರೇಜ್ ನೀಡುವ ಆರೋಗ್ಯ ವಿಮಾ ಪಾಲಿಸಿಗಳು ಕೆಲವೇ ಕೆಲವು ಮಾತ್ರ ಇವೆ. ಅವುಗಳಲ್ಲಿ ಉತ್ತಮವಾದದ್ದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಆರೋಗ್ಯ ವಿಮಾ ಪಾಲಿಸಿಗಳು 5 ಲಕ್ಷ, ರೂ.10 ಲಕ್ಷ, 25 ಲಕ್ಷ, ರೂ.1 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ಕವರೇಜ್‌ನೊಂದಿಗೆ ಬರುತ್ತವೆ. ಅನ್ ಲಿಮಿಟೆಡ್ ಕವರೇಜ್ ನೀಡುವ ಪಾಲಿಸಿಯನ್ನು ತೆಗೆದುಕೊಂಡರೇ, ನಾವು ಖರ್ಚಿನ ಬಗ್ಗೆ ಯೋಚಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಆರೋಗ್ಯ ವಿಮಾ ಕಂಪನಿಯು ಸಂಪೂರ್ಣ ಖರ್ಚು ಭರಿಸುತ್ತದೆ. ವೈದ್ಯರ ಸೂಚನೆಗಳ ಪ್ರಕಾರ, ವರ್ಷಕ್ಕೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಚಿಕಿತ್ಸೆ ಪಡೆಯಬಹುದು.