Natural Tips To Get Rid Of Rats at Home: ಒಂದೇ ಒಂದು ಇಲಿ ಮನೆಗೆ ನುಗ್ಗಿದ್ರೆ, ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಸೈನ್ಯವೇ ರಚನೆಯಾಗಲಿದೆ ಎಂದರ್ಥ. ಅವುಗಳ ಅರಾಜಕತೆ ಇನ್ಮುಂದೆ ಸಹಜವಾಗಿ ಮಾರ್ಪಡುತ್ತದೆ. ನಿಧಾನವಾಗಿ ಅವು ಮನೆಯನ್ನೇ ಕಬ್ಜಾ ಮಾಡಿಕೊಳ್ಳುತ್ತವೆ. ಇದರಿಂದ ಇಲಿಗಳ ಕಾಟಕ್ಕೆ ನಾವು ಬೇಸತ್ತು ಹೋಗುತ್ತೇವೆ.
ಮನೆಯ ಬೇಸ್ಮೆಂಟ್ನಲ್ಲಿ ಗುಂಡಿಗಳನ್ನು ಅಗೆಯುವುದು, ವಸ್ತುಗಳನ್ನು ಹಾಳುಮಾಡುವುದು, ಬಟ್ಟೆ ಮತ್ತು ಧಾನ್ಯಗಳ ಚೀಲಗಳನ್ನು ಕಚ್ಚುವುದು ಸೇರಿದಂತೆ ಅನೇಕ ವಸ್ತುಗಳು ಇಲಿಗಳ ಹಾವಳಿಯಿಂದ ಹಾಳಾಗುತ್ತವೆ. ಅವುಗಳನ್ನು ಮನೆಯಿಂದ ಓಡಿಸಲು ಎಲ್ಲಾ ರೀತಿಯ ಪ್ರಯೋಗಗಳನ್ನು ಮಾಡುತ್ತೇವೆ. ಆದ್ರೂ ಯಾವುದೇ ಪ್ರಯೋಜನೆ ಆಗುವುದಿಲ್ಲ. ಹೀಗಾಗಿ ಇವುಗಳನ್ನು ಓಡಿಸಲು ತಜ್ಞರು ಕೆಲವು ಸಲಹೆಗಳನ್ನು ಸೂಚಿಸಿದ್ದು, ಅವು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ..
ಮಿಂಟ್ ಆಯಿಲ್: ಪುದೀನಾ ಎಣ್ಣೆಯ ವಾಸನೆಯು ಮನುಷ್ಯರಿಗೆ ಉಲ್ಲಾಸಕರವಾಗಿದ್ದರೂ, ಇದು ಇಲಿಗಳನ್ನು ಕೆರಳಿಸುತ್ತದೆ. ಹಾಗಾಗಿ ಇಲಿಗಳನ್ನು ಹಿಮ್ಮೆಟ್ಟಿಸಲು ಸಣ್ಣ ಬಟ್ಟೆಯ ಮೇಲೆ ಸ್ವಲ್ಪ ಪುದೀನಾ ಎಣ್ಣೆಯನ್ನು ಚಿಮುಕಿಸಿ ಇಲಿಗಳು ಓಡಾಡುವ ಸ್ಥಳಗಳಲ್ಲಿ ಇರಿಸಿ.. 2 ಅಥವಾ 3 ದಿನಕ್ಕೊಮ್ಮೆ ಬಟ್ಟೆಯನ್ನು ಬದಲಾಯಿಸುವುದರಿಂದ ಇಲಿಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ. ಇವುಗಳ ಜೊತೆಗೆ ಲವಂಗ ಮತ್ತು ಕರಿಮೆಣಸನ್ನು ಇಲಿಗಳು ಓಡಾಡುವ ಸ್ಥಳಗಳಲ್ಲಿ ಇಡುವುದರಿಂದ ಅವುಗಳ ಕಟುವಾದ ವಾಸನೆಯಿಂದ ಅವು ಸ್ಥಳಬಿಟ್ಟು ಕಾಲಿ ಮಾಡುತ್ತವೆ ಎಂದು ತಜ್ಞರ ಮಾತಾಗಿದೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಪೆಸ್ಟ್ ಕಂಟ್ರೋಲ್ ಅಂಡ್ ಮ್ಯಾನೇಜ್ಮೆಂಟ್ನಲ್ಲಿ ಪ್ರಕಟವಾದ 2012 ರ ಅಧ್ಯಯನದ ಪ್ರಕಾರ, ಮನೆಗಳಿಂದ ಇಲಿಗಳನ್ನು ಹಿಮ್ಮೆಟ್ಟಿಸಲು ಪುದೀನಾ ಎಣ್ಣೆಯು ಪರಿಣಾಮಕಾರಿಯಾಗಿದೆ ಎಂಬುದು ಸಂಶೋಧನೆ ಮೂಲಕ ತಿಳಿದುಬಂದಿದೆ. ಈ ಸಂಶೋಧನೆಯಲ್ಲಿ ಈಜಿಪ್ಟ್‌ನ ಕೈರೋದ ಐನ್ ಶಾಮ್ಸ್ ವಿಶ್ವವಿದ್ಯಾಲಯದಲ್ಲಿ ಕೀಟ ನಿಯಂತ್ರಣ ಮತ್ತು ಕೃಷಿ ಜೀವಶಾಸ್ತ್ರದ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.
ಅಡುಗೆ ಸೋಡಾ: ಅಡುಗೆಯಲ್ಲಿ ಬಳಸುವ ಅಡಿಗೆ ಸೋಡಾ ಇಲಿಗಳನ್ನು ಹಿಮ್ಮೆಟ್ಟಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ಮೊದಲು ಒಂದು ಕಪ್ ಮೈದಾ ತೆಗೆದುಕೊಳ್ಳಿ.. ಅದಕ್ಕೆ ಪುದೀನಾ ಎಣ್ಣೆ ಮತ್ತು ಅಡಿಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ. ಅದರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಮನೆಯಲ್ಲಿ ಇಲಿ ಬರುವ ಸ್ಥಳಗಳಲ್ಲಿ ಇಟ್ಟರೆ ಫಲ ಸಿಗುತ್ತದೆ ಎನ್ನುತ್ತಾರೆ ತಜ್ಞರು.