ಹೈದರಾಬಾದ್:ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆಹಾರ ಶೈಲಿ ಕೂಡ ಬದಲಾಗಿದೆ. ದೇಹದ ಆರೋಗ್ಯ ವೃದ್ಧಿಗೆ ಬೇಕಾಗಿರುವ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳು ಈಗೀಗ ಸಿಗುತ್ತಿಲ್ಲ. ಇದರಿಂದ ಅನಾರೋಗ್ಯ ಸಮಸ್ಯೆಗೆ ಬೇಗ ತುತ್ತಾಗುವ ಸಾಧ್ಯತೆಗಳಿವೆ . ಈ ಹಿನ್ನೆಲೆ ದೇಹದ ಆರೋಗ್ಯವನ್ನು ವೃದ್ಧಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅಗತ್ಯವಾಗಿದೆ.
ಕೋವಿಡ್ ಬಳಿಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅವಶ್ಯ ಎಂಬುದು ಬಹುತೇಕರ ಅರಿವಿಗೆ ಬಂದಿದೆ. ಇದೇ ಕಾರಣದಿಂದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಈ ಸೂಪರ್ಫುಡ್ಗಳನ್ನು ನಿಮ್ಮ ಆರೋಗ್ಯದಲ್ಲಿ ಸೇರಿಸುವುದು ಅವಶ್ಯವಾಗಿದೆ. ಅವುಗಳ ಪಟ್ಟಿ ಇಲ್ಲಿದೆ.
ವಿಟಮಿನ್ ಸಿ: ಇದು ದೇಹಕ್ಕೆ ಅತ್ಯಗತ್ಯವಾಗಿದೆ. ಕೋಸು, ಸ್ಟ್ರಾಬೆರಿ, ಕಿವಿ ಹಣ್ಣು, ದ್ರಾಕ್ಷಿ, ಕಿತ್ತಳೆಯಂತಹ ಆಹಾರದಲ್ಲಿ ಇದನ್ನು ಯಥೇಚ್ಛವಾಗಿ ಪಡೆಯಬಹುದು. ವಿಟಮಿನ್ ಸಿ ದೇಹದಲ್ಲಿನ ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ನೀಡುತ್ತದೆ.
ವಿಟಮಿನ್ ಇ: ಇದು ಕೂಡ ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬೀಜಗಳು ಮತ್ತು ಸೊಪ್ಪಿನಿಂದ ನಾವು ವಿಟಮಿನ್ ಇ ಅನ್ನು ಹೇರಳವಾಗಿ ಪಡೆಯುತ್ತೇವೆ. ವಿಟಮಿನ್ ಇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.