ಸ್ಯಾನ್ ಪ್ರಾನ್ಸಿಸ್ಕೊ: ತನ್ನ ಸ್ಮಾರ್ಟ್ವಾಚ್ನ ಆರೋಗ್ಯ ನಿರ್ವಹಣೆ ಆ್ಯಪ್ನಲ್ಲಿ ಸ್ಲೀಪ್ ಅಪ್ನಿಯಾ ಫೀಚರ್ ಅಳವಡಿಸಿಕೊಳ್ಳಲು ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮೋದನೆ ನೀಡಿದೆ ಎಂದು ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಪ್ರಕಟಿಸಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಮತ್ತು ಫೋನ್ ಬಳಕೆದಾರರು ತಮ್ಮ ಆರೋಗ್ಯ ನಿರ್ವಹಣೆ ಆ್ಯಪ್ನಲ್ಲಿ ಈ ಸ್ಲೀಪ್ ಅಪ್ನಿಯಾ ಲಕ್ಷಣವನ್ನು ಪತ್ತೆ ಮಾಡಬಹುದುದಾಗಿದೆ. ದಕ್ಷಿಣ ಕೊರಿಯಾದಲ್ಲಿ ಕಳೆದ ಅಕ್ಟೋಬರ್ನಲ್ಲಿ ಆಹಾರ ಮತ್ತು ಔಷಧ ಸುರಕ್ಷತಾ ಸಚಿವಾಲಯ ಈ ಫೀಚರ್ ಬಳಕೆಗೆ ಅನುಮತಿ ನೀಡಿತು.
22 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಬಳಕೆದಾರರಲ್ಲಿ ಈ ಸ್ಲೀಪ್ ಅಪ್ನಿಯಾ ಫೀಚರ್ ಬಳಕೆ ಲಭ್ಯವಿದೆ. ಈ ಲಕ್ಷಣವನ್ನು ಹೊಂದಿಲ್ಲದವರಲ್ಲಿ ಎರಡು ರಾತ್ರಿಗಳ ಅವಧಿಯ ನಿರ್ವಹಣೆಯನ್ನು ಮಾಡುವ ಮೂಲಕ ಸ್ಲೀಪ್ ಅಪ್ನಿಯಾ ಅವರಲ್ಲಿ ಸುಧಾರಿತ ಅಥವಾ ಗಂಭೀರವಾಗಿದೆಯೇ ಎಂಬುದನ್ನು ಇದು ಪತ್ತೆ ಮಾಡುತ್ತದೆ.
ಈ ಫೀಚರ್ ಬಳಕೆಗೆ ಬಳೆದಾರರು 10 ದಿನಗಳ ಅವಧಿಯಲ್ಲಿ ತಮ್ಮ ನಿದ್ದೆಯನ್ನು 4 ಗಂಟೆಗಳ ಕಾಲ ಎರಡು ಬಾರಿ ಟ್ರಾಕ್ ಮಾಡಲಿದೆ.
ಸ್ಲೀಪ್ ಅಪ್ನಿಯಾ ಟ್ರಾಕ್ ಮಾಡಲು ಕಾರಣ: ಸ್ಲೀಪ್ ಅಪ್ನಿಯಾ ಎಂಬುದು ಗಂಭೀರ ಸಮಸ್ಯೆಯಾಗಿದೆ. ಸೂಕ್ತ ಚಿಕಿತ್ಸೆ ರಹಿತ ಸ್ಲಿಪ್ ಅಪ್ನಿಯಾದಿಂದ ಹೃದಯದ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ, ಪಾರ್ಶ್ವವಾಯುನಂತಹ ಅಪಾಯವನ್ನು ಹೊಂದಿದೆ.
ಈ ಫೀಚರ್ ಗ್ಯಾಲಕ್ಸಿ ವಾಚ್ನ ಸರಣಿಯಲ್ಲಿ ಅಮೆರಿಕದಲ್ಲಿ ಸ್ಯಾಮ್ಸಂಗ್ ಹೆಲ್ತ್ ಮಾನಿಟರ್ ಆ್ಯಪ್ ಮೂಲಕ ಲಭ್ಯವಿದೆ. ಬಳಕೆದಾರರು ತಜ್ಞ ವೈದ್ಯರಿಂದ ಸಾಂಪ್ರದಾಯಿಕ ರೀತಿಯ ರೋಗ ಪತ್ತೆ ಬದಲಾಗಿ ಈ ಫೀಚರ್ ಅನ್ನು ಬಳಕೆ ಮಾಡಬಾರದು. ಈ ಫೀಚರ್ನಲ್ಲಿ ಲಭ್ಯವಾಗುವ ದತ್ತಾಂಶವೂ ವೈದ್ಯಕೀಯವಾಗಿ ನಿದ್ರೆಯ ತೊಂದರೆಯನ್ನು ಪತ್ತೆ ಮಾಡುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಏನಿದು ಸ್ಲೀಪ್ ಅಪ್ನಿಯಾ: ನಿದ್ರೆಯ ವೇಳೆ ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡುವುದು ಅಸ್ವಸ್ಥತೆಯ ಸಂಕೇತ. ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಹೈಪೋಥೈರಾಯ್ಡಿಸಮ್, ಚಯಾಪಚಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸ್ಲೀಪ್ ಅಪ್ನಿಯಾ ತೊಂದರೆ ಎದುರಿಸುತ್ತಾರೆ. ಉಚ್ವಾಸ, ನಿಶ್ವಾಸದ ವ್ಯತ್ಯಯದಿಂದ ಮೆದುಳು, ಹೃದಯ, ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ವೈದ್ಯರ ಎಚ್ಚರಿಕೆಯಾಗಿದೆ. ವೈದ್ಯಕೀಯವಾಗಿ ಪಾಲಿಸೋಮ್ನೋಗ್ರಫಿ ಎಂದು ಕರೆಯಲ್ಪಡುವ ನಿದ್ರೆಯ ಅಧ್ಯಯನದಿಂದ ಸ್ಲೀಪ್ ಅಪ್ನಿಯಾವನ್ನು ಪತ್ತೆ ಮಾಡಬಹುದು. (ಐಎಎನ್ಎಸ್)
ಇದನ್ನೂ ಓದಿ: ಕಳಪೆ ನಿದ್ರೆಯಿಂದ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ