ಹೈದರಾಬಾದ್:ರೇಷ್ಮೆ ಸೀರೆ ಎಂದರೆ ಮಹಿಳೆಯರಿಗೆ ಒಮ್ಮೆ ಕಣ್ಣು ಅರಳುವುದು ಸಹಜ. ಮನೆಯ ಸಣ್ಣ ಸಮಾರಂಭವಿರಲಿ ಅಥವಾ ಹಬ್ಬ, ಮದುವೆಯಂತಹ ಕಾರ್ಯಕ್ರಮ ಇರಲಿ ರೇಷ್ಮೆ ಸೀರೆಗೆ ಮಹಿಳೆಯರು ಮೊದಲ ಪ್ರಾಧಾನ್ಯತೆ ನೀಡುತ್ತಾರೆ. ರೇಷ್ಮೆ ಸೀರೆ ಕೊಳ್ಳಲು ಮಹಿಳೆಯರು ಸಾವಿರಾರು ರೂಪಾಯಿಗಳನ್ನು ವ್ಯಯ ಮಾಡುತ್ತಾರೆ. ಆದರೆ, ಅನೇಕ ಗ್ರಾಹಕರಿಗೆ ಸೀರೆಯಲ್ಲಿನ ನಕಲಿ ಮತ್ತು ಅಸಲಿ ರೇಷ್ಮೆ ಬಗ್ಗೆ ಮಾಹಿತಿ ಇರುವುದಿಲ್ಲ. ದುಬಾರಿ ಬೆಲೆ ಕೊಟ್ಟು ತಂದ ಸೀರೆಗಳು ಎರಡು ಮೂರು ಬಾರಿ ಉಟ್ಟ ಬಳಿಕ ನಿಧಾನವಾಗಿ ಕಳೆಕುಂದಿದಾಗ ಅದರ ಅಸಲಿ ಬಣ್ಣ ಬಯಲಾಗುತ್ತದೆ. ಇದೇ ಕಾರಣಕ್ಕೆ ಸೀರೆ ಕೊಳ್ಳಲು ಹೋದಾಗ ಅದರ ಜರಿ ಬಗ್ಗೆ ಜ್ಞಾನವಿರಬೇಕಾಗಿರುವುದು ಅಗತ್ಯವಾಗಿದೆ. ಅದಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು
ಸುಟ್ಟು ನೋಡಿ: ಸೀರೆಗಳಲ್ಲಿ ಜರಿ ಅಸಲಿಯೋ ಅಥವಾ ನಕಲಿ ಎಂದು ತಿಳಿಯಬೇಕಾದರೆ, ಸೀರೆಯ ರಾಶಿ ಮೇಲೆ ದೂರದಿಂದ ಲೈಟರ್ನಿಂದ ಸುಡಿ. ಸೀರೆಗಳಲ್ಲಿನ ದಾರಗಳು ಸುಡುತ್ತದೆ. ಹಾಗೇ ಅದರ ರೇಷ್ಮೆ ಕಂದು ಬಣ್ಣಕ್ಕೆ ತಿರುಗುತ್ತದೆ. ಇದೇ ರೀತಿ ಸಿಂಥೆಟಿಂಕ್ನಲ್ಲೂ ಪರೀಕ್ಷಿಸಬಹುದು. ಸಿಂಥೆಟಿಕ್ ಪ್ಲಾಸ್ಟಿಕ್ನಂತೆ ಸುಡುತ್ತದೆ.
ಕಡಿಮೆ ದರವಿದ್ದರೆ ಯೋಚಿಸಿ: ಶುದ್ದ ರೇಷ್ಮೆ ಸೀರೆ ತಯಾರಿಸಲು ನೇಕಾರರು ಕಷ್ಟ ಪಡಬೇಕಾಗುತ್ತದೆ. ಅಲ್ಲದೇ, ಇದನ್ನು ತಯಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಅಸಲಿ ರೇಷ್ಮೆ ಸೀರೆಗಳು ಕೊಂಚ ದುಬಾರಿಯಾಗಿರುತ್ತದೆ. ಯಾರಾದರೂ ಕಡಿಮೆ ದರದಲ್ಲಿ ರೇಷ್ಮೆ ಸೀರೆ ಎಂದರೆ ಒಮ್ಮೆ ಯೋಚಿಸಿ ಮುಂದುವರೆಯುವುದು ಅವಶ್ಯ.