ನವದೆಹಲಿ:ರಾತ್ರಿ ಊಟವಾದ ಬಳಿಕ ಮಲಗುವ ಮುನ್ನ ಅನೇಕರಿಗೆ ಚಾಕೊಲೇಟ್ ಅಥವಾ ಐಸ್ಕ್ರೀಂ ತಿನ್ನಬೇಕು ಎಂಬ ಬಯಕೆ ಅತಿಯಾಗಿ ಕಾಡುತ್ತಿದ್ದರೆ ಇದಕ್ಕೆ ಪ್ರಮುಖ ಕಾರಣ ಏಕಾಂಗಿತನವೇ ಕಾರಣವಂತೆ. ಸಕ್ಕರೆ ಸಂಬಂಧಿ ಆಹಾರಗಳ ತಿನ್ನುವ ಕಡು ಬಯಕೆ ಅನೇಕರಲ್ಲಿ ಉಂಟಾಗಲು ಕಾರಣ ಈ ಒಬ್ಬಂಟಿತನ ಎಂದು ಸಂಶೋಧನೆಯಲ್ಲಿ ಇದೀಗ ಬಯಲಾಗಿದೆ.
ಜಾಮಾ ನೆಟ್ವರ್ಕ್ ಓಪನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಏಕಾಂಗಿತನ ಅನೇಕರಲ್ಲಿ ಸಕ್ಕರೆ ಆಹಾರ ತಿನ್ನುವ ಕಡು ಬಯಕೆಯನ್ನು ಉಂಟು ಮಾಡುತ್ತದೆ. ಈ ಅಧ್ಯಯನಕ್ಕಾಗಿ ಸಂಶೋಧಕರು, ಸಾಮಾಜಿಕವಾಗಿ ಪ್ರತ್ಯೇಕವಾಗಿರುವ ವ್ಯಕ್ತಿಗಳಿಂದ ಮೆದುಳಿನ ರಸಾಯನಶಾಸ್ತ್ರದ ಮೂಲಕ ಈ ಅಧ್ಯಯನ ನಡೆಸಿದ್ದಾರೆ. ಈ ವೇಳೆ ಕಳಪೆ ಮಾನಸಿಕ ಆರೋಗ್ಯ, ತೂಕ ಹೆಚ್ಚಾಗುವುದು, ಅರಿವಿನ ನಷ್ಟ ಮತ್ತು ಟೈಪ್ 2 ಮಧುಮೇಹ ಮತ್ತು ಸ್ಥೂಲಕಾಯದಂತಹ ದೀರ್ಘಕಾಲದ ಕಾಯಿಲೆಗಳು ಸಕ್ಕರೆ ತಿನ್ನುವ ಬಯಕೆಯೊಂದಿಗೆ ಸಂಬಂಧ ಹೊಂದಿರುವುದು ಕಂಡು ಬಂದಿದೆ.
ಸ್ಥೂಲಕಾಯ, ಖಿನ್ನತೆ ಮತ್ತು ಆತಂಕದ ಜೊತೆಗೆ ತಿನ್ನುವಿಕೆ ಅಭ್ಯಾಸವೂ ಏಕಾಂಗಿತದ ವಿರುದ್ಧದ ಯಾಂತ್ರಿಕರಣ ಸರಿದೂಗಿಸುವಿಕೆ ಜೊತೆಗೆ ಮಿದುಳಿನ ಗ್ರಹಿಕೆಯನ್ನು ಗಮನಿಸಲು ಬಯಸಿರುವುದಾಗಿ ಲಾಸ್ ಏಂಜಲೀಸ್ನ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಅರ್ಪಣಾ ಗುಪ್ತಾ ತಿಳಿಸಿದ್ದಾರೆ.