ನವದೆಹಲಿ: ಕೋವಿಡ್ 19 ಲಸಿಕೆ ಪಡೆದ ಗರ್ಭಿಣಿಯರಲ್ಲಿ ಸಿಸೇರಿಯನ್ ಸಂಬಂಧಿತ ಅಥವಾ ಅಧಿಕ ರಕ್ತದೊತ್ತಡ ತೊಡಕಿಗೆ ಒಳಗಾಗುವ ಅಪಾಯ ಕಡಿಮೆ ಇದೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.
ಬಿಎಂಜೆ ಗ್ಲೋಬಲ್ ಹೆಲ್ತ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಡಿಸೆಂಬರ್ 2019ರಿಂದ ಜನವರಿ 2023ರಲ್ಲಿ ದತ್ತಾಂಶವನ್ನು ಬಳಕೆ ಮಾಡಲಾಗಿದೆ. ಸೋಂಕಿನಿಂದ ಅನಾರೋಗ್ಯದ ಅಪಾಯವನ್ನು ತಡೆಯುವಲ್ಲಿ ಗರ್ಭಿಣಿಯರಲ್ಲಿ ಕೋವಿಡ್ ಲಸಿಕೆ ಪರಿಣಾಮಕಾರಿಯೇ ಎಂಬ ಕುರಿತು ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನದಲ್ಲಿ ಕೋವಿಡ್ ಲಸಿಕೆ ಪಡೆದ ಗರ್ಭಿಣಿಯರಲ್ಲಿ ಕೋವಿಡ್ಗೆ ತುತ್ತಾಗುವ ಅಪಾಯ 61ರಷ್ಟು ಕಡಿಮೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ 95ರಷ್ಟು ಎಂದು ತಿಳಿಸಲಾಗಿದೆ.
ಜಾಗತಿಕ ಅಧ್ಯಯನದಿಂದ ಆಧಾರದ ಮೇಲೆ ಸಂಶೋಧಕರು ಮೌಲ್ಯಮಾಪನ ಮಾಡಿದ್ದಾರೆ. 1.8 ಮಿಲಿಯನ್ ಮಹಿಳೆಯರು ಸೇರಿದಂತೆ 67 ಅಧ್ಯಯನಗಳ ಮೆಟಾ ವಿಶ್ಲೇಷಣೆ ಮಾಡಲಾಗಿದೆ. ಲಸಿಕೆ ಪಡೆದವರಲ್ಲಿ ಸೀಸೆರಿಯನ್ ಹೆರಿಗೆ ಅಪಾಯ ಶೇ 9ರಷ್ಟು ಕಡಿಮೆ ಇದೆ. ಇದೇ ವೇಳೆ ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಸಮಸ್ಯೆಗೆ ಶೇ 12ರಷ್ಟು ಕಡಿಮೆಯಾಗಿದೆ. ಹಾಗೇ ಲಸಿಕೆ ಪಡೆದ ಗರ್ಭಿಣಿಯರಿಗೆ ಜನಿಸಿದ ಶಿಶುಗಳು ತೀವ್ರ ನಿಗಾಘಟಕಕ್ಕೆ ದಾಖಲಾಗುವ ಅಪಾಯ ಶೇ 8ರಷ್ಟು ಕಡಿಮೆ ಇದೆ ಎಂದು ತಿಳಿಸಲಾಗಿದೆ.
ಕೋವಿಡ್ 19 ಸಂಪೂರ್ಣ ಲಸಿಕೆ ಪಡೆದವರು ಸೋಂಕು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ರಕ್ಷಣೆ ನೀಡುತ್ತದೆ. ಕನಿಷ್ಠ ಒಂದು ಡೋಸ್ ಲಸಿಕೆಯು ಗರ್ಭಿಣಿ ಸಂಬಂಧಿತ ಮತ್ತು ಶಿಶು ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮದ ಅಪಾಯ ಕಡಿಮೆ ಮಾಡುತ್ತದೆ.
ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮವು ಗರ್ಭಿಣಿಯರಿಗೆ ಎಷ್ಟು ಪ್ರಯೋಜನಕಾರಿಯಾಗಿದೆ ಎಂಬುದನ್ನು ಸಂಶೋಧನೆಯಲ್ಲಿ ತೋರಿಸುತ್ತವೆ. ಕಡಿಮೆಯಾದ ಸೋಂಕುಗಳಿಂದ ನಿರೀಕ್ಷಿತ ಪ್ರಯೋಜನಗಳ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಸಿಸೇರಿಯನ್ ಸೇರಿದಂತೆ ಗರ್ಭಾವಸ್ಥೆಯ ತೊಂದರೆಗಳನ್ನು ಕಡಿಮೆ ಮಾಡುವಲ್ಲಿ ಲಸಿಕೆ ಗಮಾರ್ಹವಾಗಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದ ಪ್ರೊ. ಶಕೀಲಾ ತಂಗರತಿನಮ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಲಸಿಕೆಗಳು ಮತ್ತು ಪುನರಾವರ್ತಿತ ಕೋವಿಡ್ ಸೋಂಕುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ: ಅಧ್ಯಯನ ವರದಿ