ಕರ್ನಾಟಕ

karnataka

ETV Bharat / health

ಸಸ್ಯದಿಂದಲೂ ಸಿಗಲಿದೆ ಎದೆ ಹಾಲಿನ ಪೋಷಕಾಂಶ; ಕ್ಯಾಲಿಫೋರ್ನಿಯಾ ಸಂಶೋಧಕರಿಂದ ಅಭಿವೃದ್ಧಿ - Breast milk from plants - BREAST MILK FROM PLANTS

ಎದೆ ಹಾಲಿನಲ್ಲಿರುವಂತಹ ಸಕ್ಕರೆ ಅಂಶ ಹೊಂದಿರುವ ಸಸ್ಯದ ಅಭಿವೃದ್ಧಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮುಂದಾಗಿದ್ದಾರೆ.

plant-engineered-to-pump-out-nutrients-found-in-breast-milk
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)

By ETV Bharat Karnataka Team

Published : Jul 16, 2024, 12:46 PM IST

ಹೈದರಾಬಾದ್​: ಜಗತ್ತಿನ ಶೇ 75ರಷ್ಟು ಮಕ್ಕಳು ಹುಟ್ಟಿದ ಆರು ತಿಂಗಳ ಕಾಲ ತಾಯಿಯಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಎದೆ ಹಾಲಿನ ಆಹಾರದ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಸ್ತನಪಾನ್ಯ ಲಭ್ಯವಾಗದ ಮಕ್ಕಳು ಪೂರಕ ಪೋಷಕಾಂಶಗಳ ಬಳಕೆ ಹೊಂದಿರುತ್ತಾರೆ. ಇಂತಹ ಪೂರಕ ಸೇವಿಸುವ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೌಷ್ಠಿಕಾಂಶ ಲಭ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಈ ಅಂತರ ನಿವಾರಿಸಲು ಸಂಶೋಧಕರು ಹೊಸ ಅಭಿವೃದ್ಧಿ ನಡೆಸಿದ್ದು, ಅದು ಉತ್ತಮ ಫಲಿತಾಂಶ ಕಂಡಿದೆ.

ಎದೆ ಹಾಲಿನಲ್ಲಿ 200 ಒಲಿಗೊಸಚ್ರೈಡ್ಸ್​(ಎಚ್​ಎಂಒ) ಎಂಬ ವಿಶೇಷ ಸಕ್ಕರೆ ಅಂಶ ಇರುತ್ತದೆ. ಎದೆ ಹಾಲಿನಲ್ಲಿ 200 ವಿವಿಧ ಎಚ್​ಎಂಇಗಳಿವೆ. ಇದು ರೋಗದಿಂದ ಮಗುವನ್ನು ರಕ್ಷಿಸಿ, ಅವರ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇಂತಹ ಸಕ್ಕರೆ ಅಂಶ ಹೊಂದಿರುವ ಸಸ್ಯದ ಅಭಿವೃದ್ಧಿಗೆ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮುಂದಾಗಿದ್ದಾರೆ. ತಂಬಾಕಿನ ಸಸ್ಯದ ತಳಿಯಾಗಿರುವ ನಿಕೋಟಿಯನ್​ ಬೆನಥಮಿಯನ್​ ಎಂಬ ಸಸ್ಯದಲ್ಲಿ ಎದೆ ಹಾಲಿನಲ್ಲಿರುವ ಎಚ್​ಎಂಒ ಅನ್ನು ಉತ್ಪಾದನೆ ಕಂಡು ಬಂದಿದೆ. ಈ ಸಸ್ಯಗಳು ಸೂರ್ಯನ ಬೆಳಕನ್ನು ಮತ್ತು ಕಾರ್ಬನ್​ ಡೈ ಆಕ್ಸೈಡ್​ ಹೀರಿ ಅನೇಕ ಸಕ್ಕರೆ ಅಂಶವನ್ನು ಉತ್ಪಾದಿಸುತ್ತದೆ ಎಂದಿದ್ದಾರೆ.

ಸಾಮಾನ್ಯವಾಗಿ ಸಕ್ಕರೆಯು ಅನೇಕ ಸಂಯೋಜನೆಗಳಿಂದ ಕೂಡಿರುತ್ತದೆ. ಅದೇ ರೀತಿ ಎದೆ ಹಾಲಿನಲ್ಲಿರುವ ಸಕ್ಕರೆ ಒಲಿಗೊಸಚ್ರೈಡ್ಸ್​​ ಕೂಡ ಸಕ್ಕರೆ ಅಂಶಗಳಿಂದ ಸಂಯೋಜಿತವಾಗಿದೆ. ಇಂತಹ ಅಂಶವನ್ನು ಉತ್ಪಾದಿಸಲು ಸಹಾಯ ಮಾಡುವ ಕಿಣ್ವಗಳನ್ನು ಬಿಡುಗಡೆ ಮಾಡುವ ತಳಿಯನ್ನು ಸಂಶೋಧಕರು ಅಭಿವೃದ್ಧಿ ಮಾಡಿದ್ದು, ಅದನ್ನು ಈ ಸಸ್ಯಕ್ಕೆ ಪರಿಚಯಿಸಿದ್ದಾರೆ. ಫಲಿತಾಂಶವಾಗಿ, ಇತರ ಸಕ್ಕರೆ ಸಂಯೋಜನೆ ಜೊತೆಗೆ 11 ಪರಿಚಿತ ಎಚ್​ಎಂಒಗಳನ್ನು ಉತ್ಪಾದಿಸಲಾಗಿದೆ. ಇದು ಆರೋಗ್ಯಯುತ, ಕಡಿಮೆ ವೆಚ್ಚದಾಯಕ ಕುಡಿಯುವ ಉತ್ಪನ್ನವಾಗಿದೆ. ವಯಸ್ಕರಿಗೆ ಅಗತ್ಯವಾದ ಹಾಲಿನ ಆಧಾರಿತ ಪೌಷ್ಟಿಕಾಂಶವೂ ಈ ಸಸ್ಯದಿಂದ ಲಭ್ಯವಾಗುವ ನಿರೀಕ್ಷೆ ಇದೆ ಎಂದಿದ್ದಾರೆ ಸಂಶೋಧಕರು.

ಈ ಕುರಿತು ಮಾತನಾಡಿರುವ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಮೈಕ್ರೋಬಯಲ್​ ಬಯೋಲಾಜಿಸ್ಟ್​​ ಡಾ ಪ್ಯಾಟ್ರಿಕ್​ ಶಿಹ್​, ಮಾನವನ ಹಾಲಿನಲ್ಲಿರುವ ಒಲಿಗೊಸಚ್ರೈಡ್ಸ್ ಅನ್ನು ಒಂದೇ ಸಸ್ಯದಲ್ಲಿ ಕಾಣಬಹುದಾಗಿದೆ. ಈ ಎಲೆಗಳನ್ನು ರುಬ್ಬಿ ಅದರಿಂದ ಒಲಿಗೊಸಚ್ರೈಡ್ಸ್​ ಅನ್ನು ಪಡೆಯಬಹುದು. ಆದರೆ, ಇದರ ಅಳವಡಿಕೆ ಮತ್ತು ವಾಣಿಜ್ಯಕರಣಕ್ಕೆ ಅನೇಕ ಸವಾಲಿನಿಂದ ಕೂಡಿದೆ. ಇದೊಂದು ದೊಡ್ಡ ಗುರಿಯತ್ತ ನಾವು ಸಾಗುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ಇದೇ ಕಾರಣಕ್ಕೆ ಮಗುವಿಗೆ ಸ್ತನಪಾನ ಮಾಡಿಸಬೇಕು ಎನ್ನುವುದು!

ABOUT THE AUTHOR

...view details