ಕರ್ನಾಟಕ

karnataka

ETV Bharat / health

ಮಧ್ಯಪ್ರದೇಶದಲ್ಲಿ ದಡಾರ ಉಲ್ಬಣ; ಲಸಿಕೆ ಪಡೆಯುವಂತೆ ತಜ್ಞರ ಸಲಹೆ

ಮಧ್ಯಪ್ರದೇಶದಲ್ಲಿ ದಡಾರ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಈ ಬಗ್ಗೆ ಕ್ರಮ ವಹಿಸುವಂತೆ ವೈದ್ಯರುಗಳು ಕರೆ ನೀಡಿದ್ದಾರೆ.

outbreak of measles called Experts for boosting MMR vaccination drive in children
outbreak of measles called Experts for boosting MMR vaccination drive in children

By ETV Bharat Karnataka Team

Published : Feb 28, 2024, 11:04 AM IST

ನವದೆಹಲಿ: ಮಧ್ಯಪ್ರದೇಶದಲ್ಲಿ ಮಕ್ಕಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗಿದ್ದು, ಈ ಹಿನ್ನೆಲೆ ಎಂಎಂಆರ್​ ಲಸಿಕೆ ನೀಡುವ ಪ್ರಕ್ರಿಯೆಗೆ ವೇಗ ನೀಡುವಂತೆ ಆರೋಗ್ಯ ಇಲಾಖೆ ತಜ್ಞರು ಕರೆ ನೀಡಿದ್ದಾರೆ. ದಡಾರ ಎಂಬುದು ಹೆಚ್ಚು ಸಾಂಕ್ರಾಮಿಕ ವೈರಲ್​ ರೋಗವಾಗಿದೆ. ಇದು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಅದರಲ್ಲೂ ಮಕ್ಕಳಲ್ಲಿ ಇದು ಅಪಾಯಕಾರಿಯಾಗಿದ್ದು, ಸಾವಿಗೆ ಕಾರಣವಾಗಬಹುದು.

ಮಧ್ಯಪ್ರದೇಶದಲ್ಲಿ ಫೆಬ್ರವರಿ 19 ರಂದು 17 ಸಕ್ರಿಯ ದಡಾರ ಪ್ರಕರಣಗಳು ದಾಖಲಾಗಿದ್ದು, ಎರಡು ಸಾವು ವರದಿಯಾಗಿದೆ. 2023ರಿಂದ ಜಾಗತಿಕವಾಗಿ ಅಮೆರಿಕ, ಆಸ್ಟ್ರೇಲಿಯಾದಲ್ಲಿ ಈ ದಡಾರ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ದಾಖಲಾಗಿವೆ.

ದಡಾರ ಪ್ರಕರಣಗಳ ಹರಡುವಿಕೆಗೆ ಪ್ರಮುಖ ಕಾರಣ ಎಂದರೆ ಲಸಿಕೆಯಿಂದ ಜನರು ವಂಚಿತರಾಗುವುದು. ದಡಾರ ವಿರುದ್ಧ ರಕ್ಷಣೆಗೆ ಎರಡು ಡೋಸ್​ ಎಂಎಂಆರ್​ ಲಸಿಕೆ ನೀಡಲಾಗುತ್ತದೆ.

ದಡಾರ ಮತ್ತು ಮಂಪ್ಸ್​​ ಪ್ರಕರಣದಲ್ಲಿ ಉಲ್ಬಣತೆಯು ಆರೋಗ್ಯ ತುರ್ತು ಕ್ರಮದ ಅಗತ್ಯವನ್ನು ತಿಳಿಸಿದೆ. ಈ ರೋಗದ ಲಕ್ಷಣಗಳಾದ ಜ್ವರ, ಕೆಮ್ಮು ಮತ್ತು ಉರಿಯೂತದವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅಗತ್ಯವಾಗಿದೆ. ಜೊತೆಗೆ ಸರಳ ಮುನ್ನೆಚ್ಚರಿಕೆ ಕ್ರಮಗಳಾದ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳುವ ಮೂಲಕ ರೋಗ ಹರಡುವಿಕೆಯನ್ನು ತಪ್ಪಿಸಬಹುದು. ಆದಾಗ್ಯೂ ಈ ರೋಗದ ವಿರುದ್ಧ ರಕ್ಷಣೆಯಲ್ಲಿ ಎಂಎಂ​ಆರ್​ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಮುಂಬೈನ ಎನ್​ಎಚ್​​ಎಸ್​ಆರ್​ಸಿಸಿ ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ ನೇಹಾ ಶಾ ತಿಳಿಸಿದ್ದಾರೆ.

ಈ ಸಮಸ್ಯೆಯ ಸಾಮಾನ್ಯ ಲಕ್ಷಣಗಳಲ್ಲಿ ಜ್ವರ, ಕೆಮ್ಮು ಮತ್ತು ಮೂಗು ಸೋರುವಿಕೆ ಮತ್ತು ದದ್ದುಗಳು ಕಂಡು ಬರುತ್ತವೆ. ಇದು ನ್ಯುಮೋನಿಯಾ ಅಥವಾ ಎನ್ಸೆಫಾಲಿಟಿಸ್​​ ನಂತಹ ಅಪಾಯಕ್ಕೆ ಕಾರಣವಾಗಬಹುದು.

ಮಧ್ಯ ಪ್ರದೇಶದಲ್ಲಿ ಇತ್ತೀಚಿಗೆ ಮಕ್ಕಳಲ್ಲಿ ದಡಾರ ಪ್ರಕರಣಗಳು ಉಲ್ಬಣವಾಗುತ್ತಿದ್ದು, ಈ ರೋಗ ಲಕ್ಷಣ ತಿಳಿದು ಮುನ್ನೆಚ್ಚರಿಕೆಯನ್ನು ವಹಿಸುವಂತೆ ಜನರಿಗೆ ತಿಳಿಸುತ್ತದೆ ಎಂದು ಬೆಂಗಳೂರಿನ ಸ್ಪರ್ಶ್​​ ಆಸ್ಪತ್ರೆಯ ಟ್ರಾಪಿಕಲ್​ ಮೆಡಿಸಿನ್​ ಮತ್ತು ಇನ್ಫೆಕ್ಷಸ್​ ಡೀಸಿಸ್​​ನ ಕನ್ಸಲಟೆಂಟ್​​ ಡಾ ಜಾನ್​ ಪೌಲ್​ ತಿಳಿಸಿದ್ದಾರೆ.

ಶಾಲಾ ವಯೋಮಾನದ ಮಕ್ಕಳಲ್ಲಿ ಲಸಿಕೆಯ ಅಗತ್ಯತೆ ಇದೆ. ಕಾರಣ ಅವರಲ್ಲಿ ವೈರಸ್​​ ಹರಡುವಿಕೆ ಪ್ರಮಾಣ ಹೆಚ್ಚಿರುತ್ತದೆ. ಮಕ್ಕಳಿಗೆ ಒಂದು ವರ್ಷದ ವಯೋಮಾನದಲ್ಲಿ ಈ ಎಂಎಂ​ಆರ್​​ ಲಸಿಕೆ ಕೊಡಿಸಬೇಕು. ಎರಡನೇ ಲಸಿಕೆಯನ್ನು ಮೂರು ವರ್ಷದಲ್ಲಿ ಕೊಡಿಸಬೇಕು ಎಂದಿದ್ದಾರೆ.

ಈ ಲಸಿಕೆಯನ್ನು ಬಾಲ್ಯದಲ್ಲಿ ತಪ್ಪಿಸಿದ ವಯಸ್ಕರು, ಅಥವಾ ಎರಡು ಡೋಸ್​ ಲಸಿಕೆ ಪಡೆಯದವರು ಲಸಿಕೆ ಪಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ. (ಐಎಎನ್​ಎ್​)

ಇದನ್ನೂ ಓದಿ: 2022ರಲ್ಲಿ ಭಾರತದ 1.1 ಮಿಲಿಯನ್​ ಮಕ್ಕಳು ದಡಾರ ಲಸಿಕೆ ಪಡೆದಿಲ್ಲ; ಡಬ್ಲ್ಯೂಎಚ್​ಒ

ABOUT THE AUTHOR

...view details