ವಯನಾಡು (ಕೇರಳ): ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನ ಮುಗಿಸಿಕೊಂಡು ವಾಪಸಾಗುತ್ತಿದ್ದ ಕರ್ನಾಟಕದ ಯಾತ್ರಾರ್ಥಿಗಳಿದ್ದ ಬಸ್ ವಯನಾಡುನಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ.
45 ಪ್ರಯಾಣಿಕರಿದ್ದ ಬಸ್ನಲ್ಲಿ ಇಬ್ಬರು ಮಕ್ಕಳು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಬರಿ ಮಲೆಗೆ ದರ್ಶನಕ್ಕೆ ಹೋಗಿದ್ದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಯಾತ್ರಾರ್ಥಿಗಳು ಇಂದು ಬೆಳಗ್ಗೆ ವಾಪಸ್ ಮರಳುವಾಗ ಈ ಅವಘಡ ಸಂಭವಿಸಿದೆ.
ವಯನಾಡುವಿನ ತಿರುನೆಲ್ಲಿಯಲ್ಲಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪ್ರಯಾಣಿಕರ ಗಂಭೀರತೆ ಕುರಿತು ಸದ್ಯ ವರದಿಯಾಗಿಲ್ಲ. ತಕ್ಷಣಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಗಾಯಗೊಂಡ 24 ಜನರನ್ನು ವಯನಾಡು ಮಾನಂತವಾಡಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಗಾಯಗೊಂಡವರು ಮೈಸೂರು, ಬಿಲಿಕೆರೆ, ಹುಣಸೂರು ಮೂಲದವರಾಗಿದ್ದು, ಅವರ ಹೆಸರು ಹೀಗಿದೆ.
- ಮುತ್ತುಸ್ವಾಮಿ (42)
- ನಿರಂಜನ್ (19)
- ಸಾಗರ್(17)
- ಸಂಜಯ್ (30)
- ಶ್ರೇಯಸ್ (24)
- ಯತೀಶ್ (14)
- ಹೇಮಂತ್ ಕುಮಾರ್ (29)
- ಸಚಿನ್ (25)
- ಪುಣ್ಯಶ್ರೀ (8)
- ಜೀವ (17)
- ಎಂ ರವಿ (38)
- ಪ್ರದೀಪ್ (42)
- ರಾಜು (53)
- ಮನು (21)
- ವಾಸು (31)
- ಹರೀಶ್ (39)
- ಜಯಕುಮಾರ್ (28)
- ಪ್ರವೀಣ್ (27)
- ಎಂ ರವಿ (36)
- ಆರ್ ಎಂ ಪ್ರಭು (26)
- ರಾಜೇಶ್ (45)
- ಕಿರಣ್ (19)
- ನಿಶ್ಚಲ್ (19)
- ಹೇಮಂತ್ (24)
- ಚೇತನ್ (24)
- ಹರೀಶ್ (39)
ಗಾಯಗೊಂಡ ಎಲ್ಲರಿಗೂ ಸದ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ವ್ಯಕ್ತಿ ಪ್ರಾಣಾಪಾಯ ಅಥವಾ ಗಂಭೀರ ಗಾಯಕ್ಕೆ ಒಳಗಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ಕಾರಣ ಏನು ಎಂಬ ಕುರಿತು ತನಿಖೆಗೆ ಮುಂದಾಗಿದ್ದಾರೆ.
ನವೆಂಬರ್ 15ರಿಂದ ವಾರ್ಷಿಕ ಮಂಡಲ- ಮಕರವಿಲಕ್ಕು ಹಬ್ಬದ ಪ್ರಯಕ್ತ ಶಬರಿಮಲೆ ಅಯ್ಯಪ್ಪ ದೇಗುಲದ ಬಾಗಿಲು ಭಕ್ತರ ದರ್ಶನಕ್ಕೆ ತೆರೆದಿದ್ದು, ಯಾತ್ರಾರ್ಥಿಗಳು ಈಗಾಗಲೇ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಶಬರಿಮಲೆಯ ಮೂರು ಸ್ಥಳಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯ: ಸುಲಲಿತ ದರ್ಶನಕ್ಕೆ ಸಕಲ ವ್ಯವಸ್ಥೆ