ನವದೆಹಲಿ:ಇತ್ತೀಚಿನ ದಿನಗಳಲ್ಲಿ ಮೂಳೆ ಮತ್ತು ಕೀಲು ನೋವಿನ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲೂ ಈ ಪ್ರಮಾಣ ಮಹಿಳೆಯರಲ್ಲಿ ಹೆಚ್ಚಿದೆ. ಮಹಿಳೆಯರು ಮತ್ತು ಪುರಷರಲ್ಲಿ ವಿಭಿನ್ನವಾದ ಕಾರಣಗಳಿಂದ ಈ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ಕುರಿತು ಅಗತ್ಯ ಚಿಕಿತ್ಸೆಗಳ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪುರಷರಲ್ಲಿ ಈ ಬೆನ್ನು ಮತ್ತು ಮೂಳೆ ಸಮಸ್ಯೆಗೆ ಕಾರಣ, ಅತಿ ಹೆಚ್ಚು ಕ್ರೀಡೆಯಲ್ಲಿ ಭಾಗಿಯಾಗುವಿಕೆಯಿಂದ ಸಂಭವಿಸುವ ಅನಾಹುತು, ಔದ್ಯೋಗಿಕ ಆಪತ್ತು ಮತ್ತು ಕಳಪೆ ಆಹಾರ ಮತ್ತು ಧೂಮಪಾನ ಅಭ್ಯಾಸದಂತಹ ಜೀವನಶೈಲಿಗಳು ಕೂಡ ಈ ಸಮಸ್ಯೆಗೆ ಕಾರಣವಾಗುತ್ತವೆ. ಮಹಿಳೆಯರಲ್ಲಿ ಈ ಸಮಸ್ಯೆಗೆ ಕಾರಣ ಹಾರ್ಮೋನ್ಗಳ ಬದಲಾವಣೆ. ಸ್ವಯಂ ನಿರೋಧಕ ರೋಗ, ಕಡಿಮೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಕೊರತೆಗಳು ಪ್ರಾಥಮಿಕ ಕಾರಣವಾಗಿದೆ.
ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ಪುರುಷರು ಈ ಸಮಸ್ಯೆಗೆ ಹೆಚ್ಚು ಒಳಗಾಗಲಿದ್ದಾರೆ. ಮಹಿಳೆಯರಲ್ಲಿ ದೀರ್ಘಕಾಲದ ಪರಿಸ್ಥಿತಿಗಳು ಈ ದೀರ್ಘ ಬೆನ್ನು ನೋವಿಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿನ ಹಾರ್ಮೋನ್ಗಳ ಬದಲಾವಣೆಗಳಿಂದ ಉಂಟಾಗುವ ದೀರ್ಘಾವಧಿ ಅನಾರೋಗ್ಯಗಳು ಆಗಾಗ ಈ ಬೆನ್ನು ನೋವಿನ ಸಮಸ್ಯೆಗೆ ಕಾರಣವಾಗುತ್ತದೆ.
ಪುರುಷರು ಮತ್ತು ಮಹಿಳೆಯರು ಈ ಬೆನ್ನು ನೋವಿಗೆ ವಿಭಿನ್ನ ಅಗತ್ಯಕ್ಕೆ ತಕ್ಕಂತೆ ಪರಿಣಾಮಕಾರಿ ಚಿಕಿತ್ಸೆಯನ್ನು ಹೊಂದುವುದು ನೋವು ನಿವಾರಣೆಯಲ್ಲಿ ಪ್ರಮುಖವಾಗಿದ್ದು, ಸುಧಾರಿತ ಆರೋಗ್ಯ ಫಲಿತಾಂಶ ಪಡೆಯಲು ಇದು ನಿರ್ಣಾಯಕವಾಗಿದೆ.
ಭಾರತೀಯರು ಅದರಲ್ಲೂ ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಿಂದ ಅಸ್ಥಿಸಂಧಿವಾತ ಸಮಸ್ಯೆಗಳು ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಹೊಂದಿದೆ. ಈ ಗಂಭೀರ ಸಮಸ್ಯೆಯನ್ನು ತಡೆಯಲು ನಿರ್ಣಾಯಕವಾಗಿರುವ ಅಂಶ ಎಂದರೆ ಆರಂಭಿಕ ಹಂತದಲ್ಲೇ ಮೂಳೆಗಳ ದುರ್ಬಲತೆ ಪತ್ತೆ ಮಾಡಿ, ವೈದ್ಯರ ಸಹಾಯ ಪಡೆಯುವುದಾಗಿದೆ. ಮೂಳೆಗಳ ಸಮಸ್ಯೆಗಳಲ್ಲಿ ತಡೆಯುವಲ್ಲಿ ವಿಟಮಿನ್ ಡಿ ಮತ್ತು ವಿಟಮಿನ್ ಬಿ12 ಪ್ರಮುಖವಾಗಿದೆ.
ಶೇ 70 ರಿಂದ 90ರಷ್ಟು ಭಾರತೀಯರು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಮೂಳೆಯ ಆರೋಗ್ಯಕ್ಕೆ ವಿಟಮಿನ್ ಡಿ ನಿರ್ಣಾಯಕವಾಗಿದೆ. ಋತುಬಂಧಕ್ಕೊಳಗಾದ ಮಹಿಳೆಯರು ಇದರ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಮೂರರಲ್ಲಿ ಒಬ್ಬರು ಅಸ್ಥಿಸಂಧಿವಾತ ಸಮಸ್ಯೆ ಹೊಂದಿರುತ್ತಾರೆ. ಇಂತ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅವರು ವಿಟಮಿನ್ ಡಿ ಮತ್ತು ವಿಟಮಿನ್ ಡಿ 12 ಹೊಂದುವುದು ಅಗತ್ಯವಾಗಿದೆ ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಅಸ್ಥಿಸಂಧಿವಾತ ಮತ್ತು ಕೀಲು ತಜ್ಞರಾದ ಡಾ.ದೆಬಶಿಶ್ ಚಂದ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮೂಳೆ ಸವೆತ ಮತ್ತು ಮಂಡಿನೋವು: ತಡೆಗಟ್ಟಲು ಇದೆ ತ್ರಿಸೂತ್ರ