ಕರ್ನಾಟಕ

karnataka

ETV Bharat / health

ಪಾರ್ಕಿನ್ಸನ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ ದೇಶದ 70 ಲಕ್ಷ ಮಂದಿ!! - international Parkinsons day - INTERNATIONAL PARKINSONS DAY

ಪಾರ್ಕಿನ್ಸನ್ ಕಾಯಿಲೆಯು ನರ ಸಂಬಂಧಿ ಸಮಸ್ಯೆ ಆಗಿದ್ದು, ಈ ಬಗ್ಗೆ ಅರಿವು ಹೊಂದುವುದು ಅಗತ್ಯವಾಗಿದೆ.

on-international-parkinsons-day-secunderabad-hospital-host-awareness-programme
on-international-parkinsons-day-secunderabad-hospital-host-awareness-programme

By ETV Bharat Karnataka Team

Published : Apr 12, 2024, 2:29 PM IST

ಹೈದರಾಬಾದ್​: ದೇಶದಲ್ಲಿ ಸರಿಸುಮಾರು 70 ಲಕ್ಷ ಮಂದಿ ಪಾರ್ಕಿನ್ಸನ್​ ರೋಗದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಇತ್ತೀಚಿನ ಸಂಶೋಧನೆಯಲ್ಲಿ ಬಹಿರಂಗಗೊಂಡಿದೆ ಎಂದು ಕಿಮ್ಸ್​​ ಸಿಎಂಡಿ ಡಾ ಬೊಲ್ಲಿನೆನಿ ಭಾಸ್ಕರ್​ ರಾವ್​ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಪಾರ್ಕಿನ್ಸನ್​ ದಿನದ ಹಿನ್ನೆಲೆ ಈ ಸಮಸ್ಯೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಗುರುವಾರ ಸಿಕಂದರಾಬಾದ್​ನ ಕೃಷ್ಣ ಇನ್ಸಿಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​​ನಲ್ಲಿ ಆಯೋಜಿಸಲಾಗಿತ್ತು.

ಈ ಜಾಗೃತಿ ಕಾರ್ಯಕ್ರಮದಲ್ಲಿ ನರರೋಗ ತಜ್ಞರಾದ ಸೀತಾಜಯಲಕ್ಷ್ಮಿ, ನರಶಸ್ತ್ರಚಿಕಿತ್ಸಕರಾದ ಡಾ ಮನಸ್​ ಪಣಿಗ್ರಹಿ, ಪಾರ್ಕಿನ್ಸನ್​ ತಜ್ಞ ಡಾ ಜಯಶ್ರೀ, ಡಾ ಮೋಹನ್​ದಾಸ್​, ಡಾ ಪ್ರವೀಣ್​ ಮತ್ತು ಇತರರು ಉಪಸ್ಥಿತರಿದ್ದರು. ವ್ಯಕ್ತಿಯ ಅಂಗವಿಕಲತೆ ಮತ್ತು ಸಾವಿಗೆ ಪಾರ್ಕಿನ್ಸನ್​ ಎಂಬ ನರ ಸಮಸ್ಯೆ ಕಾರಣವಾಗುತ್ತಿದೆ. 40 ವರ್ಷ ದಾಟಿದ ಲಕ್ಷದಲ್ಲಿ 94 ಮಂದಿ ಈ ರೋಗದ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವೈದ್ಯರು ತಿಳಿಸಿದರು.

ಲಕ್ಷಣ ಅರಿಯಿರಿ: ಪಾರ್ಕಿನ್ಸನ್​ ರೋಗದ ಪ್ರಮುಖ ಲಕ್ಷಣ ಎಂದರೆ ಕೈ ನಡುಗುವಿಕೆ, ಮಾತನಾಡಲು ಕಷ್ಟಪಡುವುದು ಮತ್ತು ನಡೆಯಲು ಸಾಧ್ಯವಾಗದಿರುವುದಾಗಿದೆ. ನೂರಾರು ವರ್ಷದ ಹಿಂದೆ ಆಯುರ್ವೇದವನ್ನು ಕಂಪವತಂ ಎಂದು ಕರೆಯಲಾಗುತ್ತಿತ್ತು. ಕಂಪ ಎಂದರೆ ನಡುಗುವಿಕೆ ಮತ್ತು ವತಂ ಎಂದರೆ ಸ್ನಾಯು ಸಮಸ್ಯೆ. ಆ ಸಮಯದಲ್ಲಿ ಈ ಸಮಸ್ಯೆಗೆ ವೆಲ್ವೆಟ್​ ಬೀನ್ ಸಸ್ಯದ ಸಹಾಯದಿಂದ ಚಿಕಿತ್ಸೆ ನೀಡುತ್ತಿದ್ದರು. ಈ ರೋಗವೂ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನು ಕಾಡುತ್ತದೆ ಎಂದು ವೈದ್ಯರಾದ ಡಾ ಜಯಶ್ರೀ ತಿಳಿಸಿದ್ದಾರೆ.

ಆಳ ಮಿದುಳಿನ ಪ್ರಚೋದಕ ಶಸ್ತ್ರಚಿಕಿತ್ಸೆ ಸಮಸ್ಯೆ ಪರಿಹಾರಕ್ಕೆ ಜನಜನಿತ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯನ್ನು ರೋಗಿಯ ವಯಸ್ಸು ಮತ್ತು ಪರಿಸ್ಥಿತಿ ಆಧರಿಸಿ ನಿರ್ಧರಿಸಲಾಗುವುದು ಎಂಡು ಡಾ ಮಾನಸ ತಿಳಿಸಿದ್ದಾರೆ.

ಏನಿದು ಪಾರ್ಕಿನ್ಸನ್​ ಕಾಯಿಲೆ?: ಪಾರ್ಕಿನ್ಸನ್ ಕಾಯಿಲೆಯು ನರ ಸಂಬಂಧಿ ಸಮಸ್ಯೆ ಆಗಿದೆ. ಪಾರ್ಕಿನ್ಸನ್ ಡಾಟ್ ಆರ್ಗ್ ಪ್ರಕಾರ, ಮೆದುಳಿನ ನಿರ್ದಿಷ್ಟ ಭಾಗದಲ್ಲಿ ಸಬ್ಸ್ಟಾಂಟಿಯಾ ನಿಗ್ರಾದಲ್ಲಿ ಡೋಪಮೈನ್-ಉತ್ಪಾದಿಸುವ ನರಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗ ಯಾವುದೇ ಲಕ್ಷಣ ತೋರಿಸದೇ ನಿಧಾನವಾಗಿ ಬೆಳವಣಿಗೆ ಕಂಡು ಗೋಚರವಾಗುತ್ತದೆ. ಅಲ್ಲದೇ ಇದರ ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನ. ಈ ಅಸ್ವಸ್ಥತೆಯಿಂದಾಗಿ ಕೈ ಕಾಲು ನಡುಗುತ್ತದೆ. ದೇಹದ ಸಮತೋಲನ ಕಷ್ಟವಾಗುತ್ತದೆ. ಈ ರೋಗಕ್ಕೆ ಇದುವರೆಗೂ ನಿರ್ದಿಷ್ಟವಾದ ಚಿಕಿತ್ಸೆಯನ್ನು ಪತ್ತೆ ಮಾಡಿಲ್ಲ. ಈ ಅಸ್ವಸ್ಥತೆ ಪತ್ತೆಯಾದವರು ಸೂಕ್ತ ಆಹಾರ ಕ್ರಮದ ಪದ್ದತಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗ ನಿಯಂತ್ರಣ ಮಾಡಬಹುದು. ಈ ರೋಗ ಮಾರಣಾಂತಿಕವಲ್ಲದೇ ಇದ್ದರೂ ಗಂಭೀರ ಸ್ವರೂಪದಿಂದ ಕೂಡಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎಚ್ಚರ! ಪಾರ್ಕಿನ್ಸನ್​ ರೋಗ ಅಪಾಯ ಹೆಚ್ಚಿಸುತ್ತದೆ ವಾಯು ಮಾಲಿನ್ಯ

ABOUT THE AUTHOR

...view details