ಕರ್ನಾಟಕ

karnataka

ETV Bharat / health

ಕೋವಿಡ್​ ಸೋಂಕಿನ ವಿರುದ್ಧ ಹೊಸ ಆಂಟಿವೈರಲ್​ ಔಷಧ ಅಭಿವೃದ್ಧಿ - Covid VIRUS ANTIVIRAL

ವೈರಲ್ ಉಲ್ಬಣದ ವೇಳೆ ಅಥವಾ ಈಗಾಗಲೇ ಆರಂಭಿಕ ರೋಗಲಕ್ಷಣ ಹೊಂದಿರುವ ಮಂದಿಯಲ್ಲಿ ಇದು ಪರಿಣಾಮಕಾರಿ ಚಿಕಿತ್ಸೆಯಾಗಲಿದೆ.

new-antiviral-drugs-against-covid-infection-developed
new-antiviral-drugs-against-covid-infection-developed

By PTI

Published : Mar 11, 2024, 6:47 PM IST

ನವದೆಹಲಿ:ಭವಿಷ್ಯದಲ್ಲಿನ ಕೋವಿಡ್​​ 19 ಸೋಂಕಿನ ಉಲ್ಬಣತೆಯ ಚಿಕಿತ್ಸೆ ಮತ್ತು ತಡೆಯುವ ಉದ್ದೇಶದಿಂದ ವಿಜ್ಞಾನಿಗಳು ಸಾಮರ್ಥ್ಯ ದಾಯಕ ಹೊಸ ವರ್ಗದ ಆಂಟಿವೈರಲ್​ ಡ್ರಗ್​​ವೊಂದನ್ನು ಕಂಡು ಹಿಡಿದಿದ್ದಾರೆ.

ಈ ಅಧ್ಯಯನವನ್ನು ಜರ್ನಲ್​ ನೇಚರ್​ನಲ್ಲಿ ಪ್ರಕಟಿಸಲಾಗಿದೆ. ಕೋವಿಡ್​ -19ಗೆ ಕಾರಣವಾಗುವ ಸಾರ್ಸ್​ ಕೋವ್​​-2 ಸೋಂಕು ಆಗಿದ್ದು, ಇದು ಪೆರೊಕ್ಸಿಸೊಮ್ಸ್​ ಮತ್ತು ಇಂಟರ್ಫೆರಾನ್​ ​ ಎಂಬ ಎರಡು ಪ್ರಮುಖ ಸಾಮಾನ್ಯ ಪ್ರತಿರಕ್ಷಣೆ ಕೋಶದ ಉತ್ಪಾದನೆ ಸ್ಥಗಿತಗೊಳಿಸುತ್ತದೆ. ಇದೀಗ ಕೆನಡಾದ ಆಲ್ಬರ್ಟಾ ಯುನಿವರ್ಸಿಟಿ ಯಶಸ್ವಿಯಾಗಿ ಹೊಸ ಆಂಟಿವೈರಲ್​ ಔಷಧವನ್ನು ಪರೀಕ್ಷೆ ಮಾಡಿದೆ. ಈ ಔಷಧವೂ ಇಂಟರ್ಫೆರಾನ್​ ಉತ್ಪಾದನೆಯನ್ನು ಉತ್ತೇಜಿಸಿ, ವಿರುದ್ಧದ ಪರಿಣಾಮ ಬೀರುತ್ತದೆ.

ಇಂಟರ್ಫೆರಾನ್ ಸೋಂಕಿತ ಕೋಶವನ್ನು ಸ್ಥಗಿತಗೊಳಿಸುವ ಮೂಲಕ ಸೋಂಕಿತ ಕೋಶಗಳು ಹೆಚ್ಚು ವೈರಸ್ ಉತ್ಪಾದಿಸುವುದನ್ನು ನಿಲ್ಲಿಸುತ್ತದೆ. ಇದು ಸಾಮಾನ್ಯವಾಗಿ ಜೀವಕೋಶದ ಸಾವಿಗೆ ಕಾರಣವಾಗುತ್ತದೆ. ಇದು ಸೋಂಕಿಗೆ ಒಳಗಾಗದಂತೆ ತಡೆಯಲು ಸುತ್ತಮುತ್ತಲಿನ ಜೀವಕೋಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ.

ಈ ಹಿಂದಿನ ಸಂಶೋಧನೆಯಲ್ಲಿ ಡಬ್ಲೂಎನ್​ಟಿ/ ಕ್ಯಾಟೆನಿನ್​ ಜೀವಕೋಶಗಳಲ್ಲಿ ಸಿಗ್ನಲಿಂಗ್ ಮಾರ್ಗವನ್ನು ಸಕ್ರಿಯಗೊಳಿಸಲು ಎಚ್​ಐವಿ ಹೇಗೆ ವಿಕಸನಗೊಂಡಿತು ಎಂಬುದರ ಬಗ್ಗೆ ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ. ಇದು ದೇಹವು ಪೆರಾಕ್ಸಿಸೋಮ್‌ಗಳನ್ನು ಉತ್ಪಾದಿಸುವುದನ್ನು ತಡೆಯುವ ಮಾರ್ಗವಾಗಿದೆ.

ವಿಎನ್​ಟಿ/ ಕ್ಯಾಟೆನಿನ್​ ಸಿಗ್ನಿಲಿಂಗ್ ದಾರಿಯನ್ನು ಗುರಿಯಾಗಿಸಿ, ಪ್ರಸ್ತುತದ 40 ಔಷಧಗಳನ್ನು ತಂಡವೂ ಪ್ರಯೋಗಿಸಿದೆ. ಬಹುತೇಕ ಕ್ಯಾನ್ಸರ್​ ಚಿಕಿತ್ಸೆ ಪರೀಕ್ಷೆಗಾಗಿ ಅಭಿವೃದ್ಧಿ ಪಡಿಸಿದ್ದಾರೆ. ಈ ಮೂರು ಔಷಧಗಳು ಶ್ವಾಸಕೋಶದಲ್ಲಿನ ವೈರಸ್​ಗಳನ್ನು ಕಡಿಮೆ ಮಾಡುವಲ್ಲಿ ಗಮನಾರ್ಹವಾಗಿದೆ. ಇದರಲ್ಲಿನ ಒಂದು ಔಷಧವನ್ನು ಊರಿಯುತ ಮತ್ತು ಇತರ ಕ್ಲಿನಿಕಲ್​ ಲಕ್ಷಣ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದ್ದು, ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದೆ.

ಇಲಿಗಳ ಮಾದರಿ ಮೇಲೆ ನಡೆಸಿದ ಅಧ್ಯಯನದಲ್ಲಿ ಟೆಸ್ಟ್​ ಟ್ಯೂಬ್​ನಲ್ಲಿನ ವೈರಸ್​ ಉತ್ಪಾದನೆ ಮೌಲ್ಯವನ್ನು 10 ಸಾವಿರ ಪಟ್ಟು ಕಡಿಮೆ ಮಾಡುವುದನ್ನು ಕೆಲವು ಪ್ರಕರಣದಲ್ಲಿ ಕಾಣಬಹುದಾಗಿದೆ. ಔಷಧಗಳು ತೀವ್ರತರದ ತೂಕ ನಷ್ಟವನ್ನು ತಡೆಗಟ್ಟುತ್ತದೆ. ಜೊತೆಗೆ ಇಲಿಗಳಲ್ಲಿ ಶೀಘ್ರ ಚೇತರಿಕೆ ಕಾಣಬಹುದಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಟೊಮ್​ ಹೊಬ್​ಮ್ಯಾನ್​ ತಿಳಿಸಿದರು.

ವೈರಲ್ ಉಲ್ಬಣದ ವೇಳೆ ಅಥವಾ ಈಗಾಗಲೇ ಆರಂಭಿಕ ರೋಗಲಕ್ಷಣ ಹೊಂದಿರುವ ಅಭಿವೃದ್ಧಿಪಡಿಸಿದ ಮಂದಿಯಲ್ಲಿ ತಮ್ಮ ಪೆರಾಕ್ಸಿಸಮ್ ಮಟ್ಟವನ್ನು ತಲುಪಲು ನಾಲ್ಕು ಅಥವಾ ಐದು ದಿನಗಳ ಕೋರ್ಸ್ ಅನ್ನು ತೆಗೆದುಕೊಳ್ಳಬೇಕು. ಇದು ರೋಗದ ತೀವ್ರತೆ ಮತ್ತು ಹರಡುವಿಕೆ ಮಿತಿಗೊಳಿಸುತ್ತಾರೆ.

ಇದನ್ನೂ ಓದಿ:ಬಾಲಕಿಯರಲ್ಲಿ 'ಆ್ಯಂಟಿಡಿಪ್ರೆಸೆಂಟ್' ಬಳಕೆ ಹೆಚ್ಚಿಸಿದ ಕೋವಿಡ್: ಏನಿದು?

ABOUT THE AUTHOR

...view details