ಕರ್ನಾಟಕ

karnataka

ETV Bharat / health

ದೈಹಿಕ ಚಟುವಟಿಕೆಯಿಂದ ದೂರವಿದ್ದಾರೆ ಭಾರತದ ಅರ್ಧಕ್ಕಿಂತ ಹೆಚ್ಚಿನ ಮಂದಿ; ದೇಶಕ್ಕೆ ಕಳವಳದ ವಿಚಾರ! - Lancet study on physical activity - LANCET STUDY ON PHYSICAL ACTIVITY

ದಕ್ಷಿಣ ಏಷ್ಯಾಕ್ಕಿಂತ (ಶೇ 45) ಏಷ್ಯಾ ಪೆಸಿಫಿಕ್​ ದೇಶಗಳಲ್ಲಿ (ಶೇ 48) ಜನರಲ್ಲಿ ಈ ದೈಹಿಕ ನಿಷ್ಕ್ರಿಯತೆ ಸಂಖ್ಯೆ ಹೆಚ್ಚಿದೆ. ಈ ಪ್ರವೃತ್ತಿ ಹೀಗೆ ಮುಂದುವರಿದಲ್ಲಿ ಇಂತವರ ಪ್ರಮಾಣ ಹೆಚ್ಚಲಿದೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

nearly-one-third-of-adults-worldwide-not-doing-physical-activity
ದೈಹಿಕ ನಿಷ್ಕ್ರಿಯತೆ (Getty Image)

By ETV Bharat Karnataka Team

Published : Jun 27, 2024, 4:05 PM IST

ಹೈದರಾಬಾದ್​: ಭಾರತದ ಅರ್ಧದಷ್ಟು ವಯಸ್ಕರು ದೈಹಿಕ ಶ್ರಮ ಅಥವಾ ವ್ಯಾಯಾಮದಂತಹ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಅದರಲ್ಲೂ ಮಹಿಳೆಯರು ಪುರುಷರಿಗೆ ಹೋಲಿಕೆ ಮಾಡಿದಲ್ಲಿ, ದೈಹಿಕ ಚಟುವಟಿಕೆ ಅಭ್ಯಾಸದಿಂದ ಬಹಳ ಹಿಂದಿದ್ದಾರೆ. ಭಾರತದಲ್ಲಿ ಶೇ 57ರಷ್ಟು ಮಹಿಳೆಯರು ಕನಿಷ್ಠ ದೈಹಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಇನ್ನು, ಪುರುಷರಲ್ಲಿ ಶೇ 42ರಷ್ಟು ಜನರು ಇದರಿಂದ ಹೊರಗುಳಿದಿದ್ದಾರೆ ಎಂದು ಲ್ಯಾನ್ಸೆಟ್​ ವರದಿ ಮಾಡಿದೆ. ಭಾರತ ಮಾತ್ರವಲ್ಲ, ದಕ್ಷಿಣ ಏಷ್ಯಾದ ಜನರು ಈ ರೀತಿ ದೈಹಿಕ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಈ ಕುರಿತು 2022ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ. ಈ ವರದಿಯನ್ನು ದಿ ಲ್ಯಾನ್ಸೆಟ್​ ಗ್ಲೋಬಲ್​ ಹೆಲ್ತ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ದಕ್ಷಿಣ ಏಷ್ಯಾಕ್ಕಿಂತ (ಶೇ 45) ಏಷ್ಯಾ ಪೆಸಿಫಿಕ್​ ದೇಶಗಳಲ್ಲಿ (ಶೇ 48) ಜನರಲ್ಲಿ ಈ ದೈಹಿಕ ನಿಷ್ಕ್ರಿಯತೆ ಹೆಚ್ಚಿದೆ. ಇಲ್ಲಿನ ಜನರು ಅಧಿಕ ಆದಾಯ ಹೊಂದಿದ್ದರೂ ಅಗತ್ಯ ಮಟ್ಟದಲ್ಲಿ ಬೇಕಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ತಿಳಿಸಿದೆ.

ಮಧುಮೇಹದ ಅಪಾಯ: ಜಾಗತಿಕವಾಗಿ, ಶೇ 31ರಷ್ಟು ವಯಸ್ಕರು ಕನಿಷ್ಠ 150 ನಿಮಿಷದ ಸಾಧಾರಣದಿಂದ ತೀವ್ರತರಹದ ವ್ಯಾಯಾಮ ಅಥವಾ ವಾರದಲ್ಲಿ 75 ನಿಮಿಷದಲ್ಲಿ ತೀವ್ರತರದಿಂದ ಹೆಚ್ಚಿನ ವ್ಯಾಯಾಮ ನಡೆಸುವುದಿಲ್ಲ. 2010ರಲ್ಲಿ ಈ ಸಂಖ್ಯೆ 26.4ರಷ್ಟಿದ್ದು, ಇದೀಗ ಈ ಸಂಖ್ಯೆ ಹೆಚ್ಚಿರುವುದು ಚಿಂತೆಗೆ ಕಾರಣವಾಗಿದೆ. ಇದೇ ರೀತಿಯ ಪ್ರವೃತ್ತಿ ಮುಂದುವರೆದಲ್ಲಿ, ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಲಿವೆ ಎಂದು ಸಂಶೋಧಕರು ಕಳವಳ ವ್ಯಕ್ತಪಡಿಸಿದ್ದಾರೆ.

2030ರ ಹೊತ್ತಿಗೆ ದೈಹಿಕ ಚಟುವಟಿಕೆಯಲ್ಲಿ ತೊಡಗದಿರುವವರ ಸಂಖ್ಯೆ ಶೇ 60ರಷ್ಟು ಆಗಲಿದೆ. ಮತ್ತೊಂದೆಡೆ ವ್ಯಾಯಾಮೇತರ ಚಟುವಟಿಕೆಯಲ್ಲಿ ಭಾಗಿಯಾಗದ ಕಾರಣ 60 ವರ್ಷದ ಬಳಿಕ ಆರೋಗ್ಯ ಸಮಸ್ಯೆಗಳು ಹೆಚ್ಚಲಿವೆ. ದೈಹಿಕ ನಿಷ್ಕ್ರಿಯತೆಯು ಜಾಗತಿಕ ಆರೋಗ್ಯಕ್ಕೆ ಬೆದರಿಕೆಯಾಗಿದ್ದು, ಇದು ದೀರ್ಘಕಾಲದ ಕಾಯಿಲೆಗಳಿಗೆ ಗಣನೀಯವಾದ ಕೊಡುಗೆ ನೀಡುತ್ತದೆ ದೈಹಿಕವಾಗಿ ಸಕ್ರಿಯವಾಗಿಲ್ಲದೇ ಇರುವುದು ಮಧುಮೇಹ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೂಡ ಎಚ್ಚರಿಸಿದ್ದಾರೆ.

ದೈಹಿಕ ನಿಷ್ಕ್ರಿಯತೆಯು ಸದ್ದಿಲ್ಲದೇ ಜಾಗತಿಕ ಆರೋಗ್ಯದ ಮೇಲೆ ಬೆದರಿಕೆ ಒಡ್ಡುತ್ತದೆ. ಇದು ದೀರ್ಘ ರೋಗದ ಗಂಭೀರ ಅಪಾಯಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಜನರನ್ನು ಹೆಚ್ಚು ಸಕ್ರಿಯವಾಗಿಸುವ ನಿಟ್ಟಿನಲ್ಲಿ ನಾವು ಹೊಸ ಮಾರ್ಗಗಳನ್ನು ಆವಿಷ್ಕರಿಸಬೇಕಿದೆ. ಅವರ ವಯಸ್ಸು, ಪರಿಸರ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಈ ಕುರಿತು ಗಮನಿಸಬೇಕಿದೆ. ದೈಹಿಕ ಚಟುವಟಿಕೆ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ದೃಢ ಕ್ರಮವನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಕೆಲ ನೀತಿಗಳನ್ನು ಬಲಗೊಳಿಸುವುದು, ಸಹಾಯ ಹೆಚ್ಚಿಸುವುದು ಸೇರಿದೆ ಎಂದು ಡಬ್ಲ್ಯೂಹೆಚ್​ಒ ತಿಳಿಸಿದೆ.

ಇದನ್ನೂ ಓದಿ: ಭಯಾನಕ ವರದಿ ಬಿಚ್ಚಿಟ್ಟ WHO: ಜಗತ್ತಿನಲ್ಲಿ 1.8 ಶತಕೋಟಿ ವಯಸ್ಕರರ ಆರೋಗ್ಯ ಅಪಾಯದಲ್ಲಿ!, ಕಾರಣ ಏನು ಅಂತೀರಾ?

ABOUT THE AUTHOR

...view details