ಕೊಪನ್ಹೇಗನ್: ಹೃದಯ ರಕ್ತನಾಳ, ಕ್ಯಾನ್ಸರ್, ದೀರ್ಘಾವಧಿ ಶ್ವಾಸಕೋಶ ಸಮಸ್ಯೆ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ರೋಗಗಳಾದ (ಎನ್ಸಿಡಿ) ಜಾಗತಿಕವಾಗಿ ಶೇ 75ರಷ್ಟು ಸಾವಿಗೆ ಕಾರಣವಾಗುತ್ತಿದೆ. ಮಾನವೀಯತೆ ತುರ್ತುಕ್ರಮದ ಸಿದ್ಧತೆಗಳು ಇಂತಹ ಸಾವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಯುಎನ್ ಏಜೆನ್ಸಿಯ ಜಂಟಿ ವರದಿ ತಿಳಿಸಿದೆ.
ಮಾನವೀಯ ತುರ್ತುಪರಿಸ್ಥಿತಿಗಳು ಎನ್ಸಿಡಿ ಅಪಾಯವನ್ನು ಹೆಚ್ಚಿಸಿದೆ. ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಪ್ರಕರಣಗಳು ವಿಪತ್ತಿಗಿಂತ ಮೂರು ಪ್ರಮಾಣದ ಹಾನಿ ಹೊಂದಿದೆ. ಆದಾಗ್ಯೂ, ಎನ್ಸಿಡಿಯ ಆರೈಕೆ ಮತ್ತು ಚಿಕಿತ್ಸೆ ಮಾನವ ತುರ್ತು ಕ್ರಮದ ಸಿದ್ಧತೆ ಮತ್ತು ಪ್ರತಿಕ್ರಿಯೆಯ ಭಾಗದ ಗುಣಮಟ್ಟವನ್ನು ಒಳಗೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ರೆಫ್ಯೂಜಿ ಎಜೆನ್ಸಿ ಯುಎನ್ಎಚ್ಸಿಆರ್ ತಜ್ಞರು ತಿಳಿಸಿದ್ದಾರೆ. ಈ ಸಂಬಂಧ ಡೆನ್ಮಾರ್ಕ್ನಲ್ಲಿ ಎನ್ಸಿಡಿ ಕುರಿತಾಗಿ ಮೂರು ದಿನಗಳ ಜಾಗತಿಕ ಉನ್ನತ ಮಟ್ಟದ ತಾಂತ್ರಿಕ ಸಭೆ ನಡೆಸಲಾಗಿದೆ.
ವಿಶ್ವಸಂಸ್ಥೆ ಅಂದಾಜಿಸಿದಂತೆ 2024ರಲ್ಲಿ 300 ಮಿಲಿಯನ್ ಜನರಿಗೆ ಮಾನವೀಯತೆ ಸಹಾಯ ಮತ್ತು ರಕ್ಷಣೆಯು ಬೇಕಿದೆ. ಇದರಲ್ಲಿ ಅರ್ಧದಷ್ಟು ಮಂದಿಗೆ ಅಂದರೆ 165.7 ಮಿಲಿಯನ್ ಮಂದಿಗೆ ತುರ್ತು ಆರೋಗ್ಯ ಸಲಹೆ ಬೇಕಿದೆ.
ಎನ್ಸಿಡಿಯಲ್ಲಿನ ಮಾನವೀಯ ಬಿಕ್ಕಟ್ಟಿನ ಜೊತೆಗೆ ಬದುಕುತ್ತಿರುವ ಜನರಲ್ಲಿ ಆಘಾತ, ಒತ್ತಡ ಅಥವಾ ವೈದ್ಯಕೀಯ ಸೌಲಭ್ಯಗಳಿಲ್ಲದೆ ಅವರ ಪರಿಸ್ಥಿತಿ ಕೆಟ್ಟದಾಗಿದೆ. ಅವರಿಗೆ ಹೆಚ್ಚಿನ ಅಗತ್ಯತೆ ಬೇಕಿದೆ. ಆದರೆ, ಸಂಪನ್ಮೂಗಳು ಇಲ್ಲ ಎಂದು ಡಬ್ಲ್ಯೂಎಚ್ಒನ ಪ್ರಧಾನ ಮುಖ್ಯಸ್ಥರಾದ ಡಾ ಟೆಡ್ರೆಸ್ ಗೇಬ್ರಿಯಸೆಸ್ ತಿಳಿಸಿದ್ದಾರೆ.