ಕರ್ನಾಟಕ

karnataka

ETV Bharat / health

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ: ಆರಂಭಿಕ ಹಂತದಲ್ಲಿ ಪತ್ತೆ, ತಡೆಗಟ್ಟುವಿಕೆ, ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ - NATIONAL CANCER AWARENESS DAY

National Cancer Awareness Day: ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2021ರಲ್ಲಿ 14,26,447 ಇದ್ದವು, 2023ರಲ್ಲಿ ಕ್ಯಾನ್ಸರ್ ಪ್ರಕರಣಗಳು 14,96,972ಕ್ಕೆ ಏರಿಕೆಯಾಗಿದೆ. ರಾಜ್ಯಗಳ ಕ್ಯಾನ್ಸರ್ ಪ್ರಕರಣಗಳನ್ನು ಗಮನಿಸಿದರೆ, ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ.

CANCER  NATIONAL CANCER AWARENESS DAY  AWARENESS  Public Awareness
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ (ETV Bharat)

By ETV Bharat Health Team

Published : Nov 6, 2024, 8:12 PM IST

National Cancer Awareness Day:ವಾರ್ಷಿಕವಾಗಿ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ ಆಚರಿಸಲಾಗುತ್ತದೆ. ಕ್ಯಾನ್ಸರ್ ಅನ್ನು ಆರಂಭಿಕ ಪತ್ತೆ ಮಾಡುವುದು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಗುರಿಯಾಗಿದೆ. ವಿವಿಧ ಆರೋಗ್ಯ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಗುರುತಿಸಲು ಜಾಗೃತಿ ಅಭಿಯಾನಗಳು, ಸೆಮಿನಾರ್‌ಗಳನ್ನು ಆಯೋಜಿಸುತ್ತಾರೆ. ಮತ್ತು ರಾಷ್ಟ್ರವ್ಯಾಪಿ ಕ್ಯಾನ್ಸರ್ ರೋಗ ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ.

ಇತಿಹಾಸ ಮತ್ತು ಮಹತ್ವ:ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಮೊದಲ ಬಾರಿಗೆ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಸೆಪ್ಟೆಂಬರ್ 2014ರಲ್ಲಿ ಘೋಷಿಸಿದರು. ಮತ್ತು ಅಂದಿನಿಂದ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮತ್ತು ಗುಣಪಡಿಸುವಿಕೆಯ ಮೇಲೆ ಕೇಂದ್ರೀಕರಿಸುವ ದಿನವನ್ನು ಆಚರಿಸಲಾಗುತ್ತದೆ.

ಈ ದಿನದಂದು ಕೇಂದ್ರ ಮತ್ತು ರಾಜ್ಯಗಳ ಆರೋಗ್ಯ ಇಲಾಖೆಗಳು, ವಿವಿಧ ಆರೋಗ್ಯ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ರಾಷ್ಟ್ರವ್ಯಾಪಿ ಕ್ಯಾನ್ಸರ್‌ ರೋಗ ಕಡಿಮೆ ಮಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಜಾಗೃತಿ ಅಭಿಯಾನಗಳು, ವಿಚಾರಗೋಷ್ಠಿಗಳು ಮತ್ತು ಬೀದಿ ನಾಟಕಗಳನ್ನು ಆಯೋಜಿಸಲು ಸಹಕರಿಸುತ್ತವೆ. ಇದು ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಮತ್ತು ಚಿಕಿತ್ಸೆಯನ್ನು ಸಹ ಎತ್ತಿ ತೋರಿಸುತ್ತದೆ.

ಕ್ಯಾನ್ಸರ್ ಎಂದರೇನು? ಅದಕ್ಕೆ ಕಾರಣವೇನು?: ಅಸಹಜ ಕೋಶಗಳು ಅನಿಯಂತ್ರಿತವಾಗಿ ಬೆಳೆದಾಗ ದೇಹದ ಯಾವುದೇ ಅಂಗ ಅಥವಾ ಅಂಗಾಂಶದಲ್ಲಿ ಪ್ರಾರಂಭವಾಗುವ ರೋಗಗಳ ಒಂದು ದೊಡ್ಡ ಗುಂಪು ಕ್ಯಾನ್ಸರ್ ಆಗಿದೆ. ದೇಹದ ಪಕ್ಕದ ಭಾಗಗಳನ್ನು ಆಕ್ರಮಿಸಲು ಅಥವಾ ಇತರ ಅಂಗಗಳಿಗೆ ಹರಡಲು ಅವುಗಳ ಸಾಮಾನ್ಯ ಮಿತಿಗಳನ್ನು ಮೀರಿರುತ್ತದೆ. ನಂತರದ ಪ್ರಕ್ರಿಯೆಯನ್ನು ಮೆಟಾಸ್ಟಾಸೈಸಿಂಗ್ ಎಂದು ಕರೆಯಲಾಗುತ್ತದೆ. ಇದು ಕ್ಯಾನ್ಸರ್​ನಿಂದ ಸಾವನ್ನಪ್ಪಲು ಪ್ರಮುಖ ಕಾರಣವಾಗಿದೆ. ನಿಯೋಪ್ಲಾಸಂ ಮತ್ತು ಮಾರಣಾಂತಿಕ ಗೆಡ್ಡೆಗಳು ಕ್ಯಾನ್ಸರ್‌ಗೆ ಇತರ ಸಾಮಾನ್ಯ ಹೆಸರುಗಳಾಗಿವೆ. ಕ್ಯಾನ್ಸರ್ ಬೆಳವಣಿಗೆಯಲ್ಲಿ ಜೀವನಶೈಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

"ಕ್ಯಾನ್ಸರ್ ರೋಗವು ಜಾಗತಿಕವಾಗಿ ಬೆಳೆಯುತ್ತಲೇ ಇದೆ, ವ್ಯಕ್ತಿಗಳು, ಕುಟುಂಬಗಳು, ಸಮುದಾಯಗಳು ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಪ್ರಚಂಡ ದೈಹಿಕ, ಭಾವನಾತ್ಮಕ ಮತ್ತು ಆರ್ಥಿಕ ಒತ್ತಡ ಉಂಟುಮಾಡುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿನ ಅನೇಕ ಆರೋಗ್ಯ ವ್ಯವಸ್ಥೆಗಳು ಈ ಹೊರೆ ನಿರ್ವಹಿಸಲು ಕನಿಷ್ಠ ಸಿದ್ಧವಾಗಿವೆ. ಮತ್ತು ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ರೋಗಿಗಳಿಗೆ ಸಕಾಲಿಕ ಗುಣಮಟ್ಟದ ರೋಗನಿರ್ಣಯ ಮತ್ತು ಚಿಕಿತ್ಸೆ ಕೊರತೆಯಿದೆ. ಆರೋಗ್ಯ ವ್ಯವಸ್ಥೆಗಳು ಪ್ರಬಲವಾಗಿರುವ ದೇಶಗಳಲ್ಲಿ, ಅನೇಕ ವಿಧದ ಕ್ಯಾನ್ಸರ್‌ಗಳ ಬದುಕುಳಿಯುವಿಕೆ ಸಾಧ್ಯವಾಗಲು ರೋಗದ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವುದು, ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವುದಕ್ಕೆ ಧನ್ಯವಾದಗಳು'' ಎಂದು ವಿಶ್ವ ಆರೋಗ್ಯ ವಾಚ್‌ಡಾಗ್ ಗಮನಿಸಿದೆ.

ಕ್ಯಾನ್ಸರ್ ಕುರಿತು ಜಾಗತಿಕ ಡೇಟಾ: ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಕ್ಯಾನ್ಸರ್ ಜಾಗತಿಕವಾಗಿ ಸಾವಿನ ಎರಡನೇ ಪ್ರಮುಖ ಕಾರಣವಾಗಿದೆ. 2022ರಲ್ಲಿ, ಅಂದಾಜು 20 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಮತ್ತು 9.7 ಮಿಲಿಯನ್ ಸಾವುಗಳು ಸಂಭವಿಸಿವೆ.

ಕ್ಯಾನ್ಸರ್ ರೋಗನಿರ್ಣಯದ ನಂತರ 5 ವರ್ಷಗಳಲ್ಲಿ ಜೀವಂತವಾಗಿರುವ ಜನರ ಅಂದಾಜು ಸಂಖ್ಯೆ 53.5 ಮಿಲಿಯನ್ ಆಗಿದೆ. ಐವರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತಾರೆ. ಸರಿಸುಮಾರು 9 ಪುರುಷರಲ್ಲಿ ಒಬ್ಬರು ಮತ್ತು 12 ಮಹಿಳೆಯರಲ್ಲಿ ಒಬ್ಬರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ.

ಕ್ಯಾನ್ಸರ್ ವಿಧಗಳು:ಕ್ಯಾನ್ಸರ್​ನಲ್ಲಿ ಹಲವಾರು ವಿಧಗಳಿವೆ. ಶ್ವಾಸಕೋಶ, ಪ್ರಾಸ್ಟೇಟ್, ಕೊಲೊರೆಕ್ಟಲ್, ಹೊಟ್ಟೆ ಮತ್ತು ಯಕೃತ್ತಿನ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚು ಸಾಮಾನ್ಯವಾದ ಕ್ಯಾನ್ಸರ್ ಆಗಿದ್ದರೆ, ಸ್ತನ, ಕೊಲೊರೆಕ್ಟಲ್, ಶ್ವಾಸಕೋಶ, ಗರ್ಭಕಂಠ ಮತ್ತು ಥೈರಾಯ್ಡ್ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ:ವಿಶ್ವ ಆರೋಗ್ಯ ಸಂಸ್ಥೆಯ (WHO) ಕ್ಯಾನ್ಸರ್ ಏಜೆನ್ಸಿ, ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಒದಗಿಸಿದ ಮಾಹಿತಿಯ ಪ್ರಕಾರ, 2022 ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತ ಸಾಮಾನ್ಯವಾಗಿ ಸಂಭವಿಸುವ ಕ್ಯಾನ್ಸರ್ ಆಗಿದೆ. ಜೊತೆಗೆ 2.5 ಮಿಲಿಯನ್ ಹೊಸ ಪ್ರಕರಣಗಳು, ಒಟ್ಟು ಹೊಸ ಪ್ರಕರಣಗಳಲ್ಲಿ 12.4% ನಷ್ಟಿದೆ. ಸ್ತ್ರೀ ಸ್ತನ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ (2.3 ಮಿಲಿಯನ್ ಪ್ರಕರಣಗಳು, 11.6%), ಕೊಲೊರೆಕ್ಟಲ್ ಕ್ಯಾನ್ಸರ್ (1.9 ಮಿಲಿಯನ್ ಪ್ರಕರಣಗಳು, 9.6%), ಪ್ರಾಸ್ಟೇಟ್ ಕ್ಯಾನ್ಸರ್ (1.5 ಮಿಲಿಯನ್ ಪ್ರಕರಣಗಳು, 7.3%), ಮತ್ತು ಹೊಟ್ಟೆಯ ಕ್ಯಾನ್ಸರ್ (970,000 ಪ್ರಕರಣಗಳು, 4.9%) ಪತ್ತೆಯಾಗಿದೆ.

"ಶ್ವಾಸಕೋಶದ ಕ್ಯಾನ್ಸರ್ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದೆ (1.8 ಮಿಲಿಯನ್ ಸಾವುಗಳು, ಒಟ್ಟು ಕ್ಯಾನ್ಸರ್ ಸಾವುಗಳಲ್ಲಿ 18.7%) ನಂತರ ಕೊಲೊರೆಕ್ಟಲ್ ಕ್ಯಾನ್ಸರ್ (900,000 ಸಾವುಗಳು, 9.3%), ಯಕೃತ್ತಿನ ಕ್ಯಾನ್ಸರ್ (760,000 ಸಾವುಗಳು, 7.8%), ಸ್ತನ ಕ್ಯಾನ್ಸರ್ ( 670,000 ಸಾವುಗಳು, 6.9%) ಮತ್ತು ಹೊಟ್ಟೆಯ ಕ್ಯಾನ್ಸರ್ (660 000 ಸಾವುಗಳು, 6.8%) ಕಂಡುಬಂದಿದೆ. ಏಷ್ಯಾದಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದ್ದು, ಇದು ನಿರಂತರ ತಂಬಾಕು ಬಳಕೆಗೆ ಸಂಬಂಧಪಟ್ಟಿದೆ" ಎಂದು WHO ಮಾಹಿತಿ ನೀಡಿದೆ.

2050ರಲ್ಲಿ ಕ್ಯಾನ್ಸರ್ ಹೊರೆ ಹೆಚ್ಚಳ ಸಾಧ್ಯತೆ:WHO ಪ್ರಕಾರ, 2050 ರಲ್ಲಿ 35 ಮಿಲಿಯನ್ ಹೊಸ ಕ್ಯಾನ್ಸರ್ ಪ್ರಕರಣಗಳನ್ನು ಕಂಡುಬರುವ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. 2022 ರಲ್ಲಿ ಅಂದಾಜು 20 ಮಿಲಿಯನ್ ಪ್ರಕರಣಗಳಿಂದ 77% ಹೆಚ್ಚಳವಾಗಿದೆ. ವೇಗವಾಗಿ ಬೆಳೆಯುತ್ತಿರುವ ಜಾಗತಿಕ ಕ್ಯಾನ್ಸರ್ ಹೊರೆ ಜನಸಂಖ್ಯೆಯ ವಯಸ್ಸು ಮತ್ತು ಬೆಳವಣಿಗೆ ಎರಡನ್ನೂ ಪ್ರತಿಬಿಂಬಿಸುತ್ತದೆ. ಜೊತೆಗೆ ಅಪಾಯಕ್ಕೆ ಜನರು ಒಡ್ಡಿಕೊಳ್ಳುವ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಅವುಗಳಲ್ಲಿ ಹಲವಾರು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿವೆ. ತಂಬಾಕು, ಮದ್ಯಪಾನ ಮತ್ತು ಸ್ಥೂಲಕಾಯತೆಯು ಹೆಚ್ಚುತ್ತಿರುವುದು ಕೂಡ ಕ್ಯಾನ್ಸರ್ ಸಂಭವದ ಹಿಂದಿನ ಪ್ರಮುಖ ಅಂಶಗಳಾಗಿವೆ. ವಾಯು ಮಾಲಿನ್ಯವು ಇನ್ನೂ ಪರಿಸರ ಅಪಾಯಕಾರಿ ಅಂಶಗಳ ಪ್ರಮುಖ ಕಾರಣವಾಗಿದೆ.

ಕ್ಯಾನ್ಸರ್ ತಡೆಗಟ್ಟುವಿಕೆ:WHO ಪ್ರಕಾರ, ತಂಬಾಕಿನಿಂದ ದೂರವಿರುವುದು, ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವುದು, ಆರೋಗ್ಯಕರ ಆಹಾರ (ಹಣ್ಣು ಮತ್ತು ತರಕಾರಿಗಳು), ನಿಯಮಿತವಾಗಿ ದೈಹಿಕ ಚಟುವಟಿಕೆಯನ್ನು ಮಾಡುವುದು, ಆಲ್ಕೊಹಾಲ್ ಸೇವನೆ ತಪ್ಪಿಸುವುದು ಅಥವಾ ಕಡಿಮೆ ಮಾಡುವುದು, HPV ವಿರುದ್ಧ ಲಸಿಕೆ ಹಾಕುವ ಮೂಲಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು. ಮತ್ತು ಹೆಪಟೈಟಿಸ್ ಬಿ, ಮತ್ತು ನೇರಳಾತೀತ ವಿಕಿರಣ ತಪ್ಪಿಸುವುದು.

ಭಾರತದ ಕ್ಯಾನ್ಸರ್ ಪ್ರಕರಣಗಳ ಮಾಹಿತಿ:ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ (ಎನ್‌ಸಿಆರ್‌ಪಿ) ಕ್ಯಾನ್ಸರ್ ರಿಜಿಸ್ಟ್ರಿ ಡೇಟಾದ ಪ್ರಕಾರ, 2019 ರಲ್ಲಿ 13,58,415 ಮತ್ತು 2023ರಲ್ಲಿ 14,96,972 ಕ್ಯಾನ್ಸರ್ ಪ್ರಕರಣಗಳ ಅಂದಾಜು ಸಂಖ್ಯೆ ಆಗಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಕ್ಯಾನ್ಸರ್ ಪತ್ತೆಗೆ ಸುಧಾರಿತ ರೋಗನಿರ್ಣಯ ತಂತ್ರಗಳ ಬಳಕೆ ಮತ್ತು ಲಭ್ಯತೆ, ಹೆಚ್ಚಿದ ಜೀವಿತಾವಧಿ, ವೃದ್ಧಾಪ್ಯದ ಜನಸಂಖ್ಯೆ ಹೆಚ್ಚುತ್ತಿರುವುದು, ಹೆಚ್ಚಿನ ಆರೋಗ್ಯ ಪ್ರಜ್ಞೆ ಮತ್ತು ಸುಧಾರಿತ ಆರೋಗ್ಯವನ್ನು ಹುಡುಕುವ ಹಿನ್ನೆಲೆ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.

ಕಳೆದ ಮೂರು ವರ್ಷಗಳಲ್ಲಿ, ಭಾರತದಲ್ಲಿ 2021ರಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು 1426447 ಇತ್ತು. 2022ರಲ್ಲಿ 1461427 ಮತ್ತು 2023 ರಲ್ಲಿ 1496972 ಪ್ರಕರಣಗಳು ಹೆಚ್ಚಾಗಿವೆ. 2023ರಲ್ಲಿ ಉತ್ತರ ಪ್ರದೇಶವು 215931 ಕ್ಯಾನ್ಸರ್ ಪ್ರಕರಣಗಳೊಂದಿಗೆ ರಾಜ್ಯಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತು ಮಹಾರಾಷ್ಟ್ರವು 124584 ಪ್ರಕರಣಗಳು ಮತ್ತು ಪಶ್ಚಿಮ ಬಂಗಾಳವು 116230 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿರುವುದರಿಂದ ನಂತರದ ಸ್ಥಾನದಲ್ಲಿವೆ.

ಕ್ಯಾನ್ಸರ್ ವಿರುದ್ಧ ಭಾರತದ ಹೋರಾಟ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾಂಕ್ರಾಮಿಕವಲ್ಲದ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ (NP-NCD) ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಂತ್ರಿಕ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಮೂರು ಸಾಮಾನ್ಯ ವಿಧದ ಕ್ಯಾನ್ಸರ್‌ಗಳು (ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್) NP-NCD ಅಡಿ ಬರುತ್ತವೆ.

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ (ಮೌಖಿಕ, ಸ್ತನ ಮತ್ತು ಗರ್ಭಕಂಠ) ಸೇರಿದಂತೆ ಸಾಮಾನ್ಯ ಎನ್‌ಸಿಡಿಗಳಿಗೆ ಆಯುಷ್ಮಾನ್ ಆರೋಗ್ಯ ಯೋಜನೆ ಅಡಿಯಲ್ಲಿ ಮೂಲಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ, ಆರೋಗ್ಯ ಪ್ರಚಾರ, 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಸ್ಕ್ರೀನಿಂಗ್ ಅನ್ನು ಈ ಕಾರ್ಯಕ್ರಮವು ಹೈಲೈಟ್ ಮಾಡುತ್ತದೆ. ಇದು ಆರಂಭಿಕ ರೋಗನಿರ್ಣಯ ಮತ್ತು ನಿರ್ವಹಣೆಯ ಮೇಲೆ ಕಾರ್ಯನಿರ್ವಹಿಸುತ್ತದೆ. ಸೂಕ್ತ ಮಟ್ಟದ ಆರೋಗ್ಯ ಸೌಲಭ್ಯವನ್ನು ಉಲ್ಲೇಖಿಸುತ್ತದೆ. NP-NCD ಅಡಿಯಲ್ಲಿ, 753 ಜಿಲ್ಲಾ NCD ಕ್ಲಿನಿಕ್‌ಗಳು, 356 ಜಿಲ್ಲಾ ಡೇ ಕೇರ್ ಸೆಂಟರ್‌ಗಳು ಮತ್ತು 6,238 ಸಮುದಾಯ ಆರೋಗ್ಯ ಕೇಂದ್ರ NCD ಕ್ಲಿನಿಕ್‌ಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ:ಸೈಲೆಂಟ್ ಹಾರ್ಟ್ ಅಟ್ಯಾಕ್​ನ ಕಾರಣ & ಲಕ್ಷಣಗಳೇನು? ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೀವು ಸುರಕ್ಷಿತ

ABOUT THE AUTHOR

...view details