ಬೆಂಗಳೂರು: ದೇಶದಲ್ಲಿ ಧೂಮಪಾನ ಮತ್ತು ಹೊಗೆರಹಿತ ತಂಬಾಕಿನ ವಿರುದ್ಧ ಹೋರಾಡುವುದು ಅತ್ಯಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ಮತ್ತು ನೀತಿ ನಿರೂಪಕರು ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ತಂಬಾಕಿನ ಕುರಿತ ಆರನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಈ ವಿಷಯ ತಿಳಿಸಿದರು.
ಭಾರತದಲ್ಲಿ ಬಳಕೆಯಿಂದಾಗಿ ವಾರ್ಷಿಕವಾಗಿ 1 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದು, ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. 2025ರ ಹೊತ್ತಿಗೆ ಸರ್ಕಾರ ಕೂಡ ತಂಬಾಕು ಮುಕ್ತ ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ. ಸಮೀಕ್ಷೆಯ ಅನುಸಾರ ಶೇ 38 ರಷ್ಟು ಅಪ್ರಾಪ್ತ ವಯಸ್ಸಿನವರು ಸಿಗರೇಟ್ ಚಟಕ್ಕೆ ಬಲಿಯಾದರೆ, ಶೇ 47ರಷ್ಟು ಮಂದಿ ಬೀಡಿ ಮತ್ತು ಶೇ 52 ರಷ್ಟು ಜನ ಹೊಗೆರಹಿತ ತಂಬಾಕು ಸೇವನೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
ಧೂಮಪಾನ ಮತ್ತು ಹೊಗೆರಹಿತ ತಂಬಾಕಿನ ವಿರುದ್ಧ ಹೋರಾಡುವುದು ಕೂಡ ಪ್ರಮುಖವಾಗಿದೆ. ದೇಶದಲ್ಲಿ 29ರಷ್ಟು ವಯಸ್ಕರು ಪ್ರಸ್ತುತ ಇದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ತಂಬಾಕು ನಿಯಂತ್ರಣ ನೀತಿ ಮತ್ತು ಅಭ್ಯಾಸದ ಬದಲಾವಣೆಗೆ ಸಾಮೂಹಿಕ ಕ್ರಿಯೆಯ ಅವಶ್ಯಕತೆ ಇದೆ ಎಂದು ದೆಹಲಿಯ ಅಂತರಾಷ್ಟ್ರೀಯ ಆರೋಗ್ಯ ನಿರ್ವಹಣಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಪ್ರೊ ಸುತಾಪ ಬಿ ನಿಯೋಗಿ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಐಐಎಚ್ಎಂಆರ್ ಈ ಸಮ್ಮೇಳನವನ್ನು ಆಯೋಜಿಸಿತ್ತು.