ಹೈದರಾಬಾದ್: ಋತುಚಕ್ರ ಎಂಬುದು ಮಹಿಳೆಯರಲ್ಲಿ ಸಾಮಾನ್ಯ. ಈ ಸಮಯದಲ್ಲಿ ಪ್ಯಾಡ್ ಬಳಕೆ ಮಾಡಲಾಗುವುದು. ಆದರೂ ಈ ಸಮಯದಲ್ಲಿ ಸೋರಿಕೆ ಸಮಸ್ಯೆ ಕಾಡುವುದು ಸಹಜ. ಈ ಸಮಯದಲ್ಲಿ ಮಹಿಳೆಯರಲ್ಲಿ ಮನಸ್ಥಿತಿ ಬದಲಾವಣೆ ಮತ್ತು ಆರೋಗ್ಯ ಪರಿಸ್ಥಿತಿಗಳು ಏರು ಪೇರಾಗುತ್ತಿರುತ್ತದೆ. ಇದರ ಜೊತೆಗೆ ಸೋರಿಕೆ ಸಮಸ್ಯೆ ಮತ್ತಷ್ಟು ಕಿರಿಕಿರಿ ಮೂಡಿಸುತ್ತದೆ. ಪ್ಯಾಡ್ ಬದಲಾಗಿ ಮುಟ್ಟಿನ ಕಪ್ ಬಳಕೆ ಇದಕ್ಕೆ ಪರಿಹಾರ ನೀಡಲಿದೆ. ಅಲ್ಲದೇ, ಇದರಿಂದ ಯಾವುದೇ ಅಡೆ ತಡೆಯಿಲ್ಲದೇ, ದೈನಂದಿನ ಕೆಲಸದಲ್ಲಿ ಯಾವುದೇ ಸಮಸ್ಯೆ ಎದುರಾಗದು.
ಮುಟ್ಟಿನ ಕಪ್ ಪ್ರಯೋಜನಗಳೇನು?:
ಬಹುತೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುತ್ತಾರೆ. ಇದು ಅನೇಕ ಬಾರಿ ಅವರ ದೈನಂದಿನ ಚಟುವಟಿಕೆಗೆ ತಡೆಯನ್ನು ಹಾಕುತ್ತದೆ. ಈ ಹಿನ್ನಲೆ ಮುಟ್ಟಿನ ಕಪ್ ಸಹಕಾರಿಯಾಗಿದೆ ಎನ್ನುತ್ತಾರೆ ತಜ್ಞರು. ಮುಟ್ಟಿನ ಕಪ್ ಸೋರಿಕೆ ಸಮಸ್ಯೆ ಜೊತೆಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಿಂದ ಅನೇಕ ಆರೋಗ್ಯ ಮತ್ತು ಆರ್ಥಿಕ ಪ್ರಯೋಜನ ಲಭ್ಯ.
- ಪ್ಯಾಡ್ಗಳು ಮರು ಬಳಕೆಯಲ್ಲ. ಇವನ್ನು ಒಂದು ಬಾರಿ ಮಾತ್ರ ಬಳಕೆ ಮಾಡಬೇಕು. ಜೊತೆಗೆ ನಾಲ್ಕು ಗಂಟೆಗೆ ಒಂದು ಪ್ಯಾಡ್ ಬದಲಾಯಿಸಬೇಕು. ಇಲ್ಲದೇ ಹೋದಲ್ಲಿ ಅದು ಪರಿಸರ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ಮುಟ್ಟಿನ ಕಪ್ ಬಳಕೆ ಮಾಡಿದಲ್ಲಿ, ಇದು 10 ವರ್ಷಗಳ ಕಾಲ ಬಳಸಬಹುದು. ಅಂದರೆ, ಒಂದು ಮುಟ್ಟಿನ ಕಪ್ 2,500 ಸ್ಯಾನಿಟರಿ ಪ್ಯಾಡ್ಗೆ ಸಮ.
- ಮುಟ್ಟಿನ ಕಪ್ಗಳು, 12 ಗಂಟೆಗಳ ಕಾಲ ಸೋರಿಕೆ ಸಮಸ್ಯೆಗೆ ಮುಕ್ತಿ ನೀಡುತ್ತವೆ. ಜೊತೆಗೆ ಇದನ್ನು ಬಳಕೆ ಮಾಡುತ್ತಿದ್ದರೆ, ನೀವು ಋತುಚಕ್ರವನ್ನು ಅನುಭವಿಸುತ್ತಿದ್ದೀರಾ ಎಂಬ ಭಾವನೆ ಬರದಂತೆ, ಇದು ಆರಾಮದಾಯಕ ಅನುಭವ ನೀಡುತ್ತದೆ.
- ಮುಟ್ಟಿನ ಕಪ್ ಬಳಕೆ ಮಾಡಿ, ವ್ಯಾಯಾಮ, ಈಜು, ಜಂಪಿಂಗ್, ರೋಪ್ ಸ್ಕಿಪಿಂಗ್ ಅನ್ನು ನಿಶ್ಚಿಂತೆಯಿಂದ ಮಾಡಬಹುದು.
- ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುತ್ತಿದ್ದರೆ, ಸ್ರಾವಕ್ಕೆ ಅನುಗುಣವಾಗಿ ಪದೇ ಪದೆ ಪ್ಯಾಡ್ ಬದಲಾಯಿಸಬೇಕಾಗುತ್ತದೆ. ಅಲ್ಲದೇ, ನಾಲ್ಕು ಗಂಟೆಗೆ ಒಮ್ಮೆ ಪ್ಯಾಡ್ ಬದಲಾಯಿಸುವುದು ಅವಶ್ಯ. ಆದಾಗ್ಯೂ ಇದು ಮುಟ್ಟಿನ ಕಪ್ ರೀತಿ ಸಂಪೂರ್ಣ ರಕ್ಷಣೆ ನೀಡುವುದಿಲ್ಲ.
- ಮುಟ್ಟಿನ ಕಪ್ ಅನ್ನು ಗುಣಮಟ್ಟ ಮತ್ತು ಬಳಕೆಗೆ ಅನುಗುಣವಾಗಿ 6 ರಿಂದ 10 ವರ್ಷಗಳ ಕಾಲ ಬಳಕೆ ಮಾಡಬಹುದು