Magnesium Deficiency Symptoms:ದೇಹಕ್ಕೆ ಅಗತ್ಯವಾದ ಖನಿಜಗಳಲ್ಲಿ ಮೆಗ್ನೀಸಿಯಂ ಕೂಡ ಒಂದು. ಬಲವಾದ ಮೂಳೆಗಳು, ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಣ, ಸ್ನಾಯುಗಳು ಹಾಗೂ ನರಗಳನ್ನು ಆರೋಗ್ಯವಾಗಿಡುವ ಕಾರ್ಯಗಳಿಗೆ ಮೆಗ್ನೀಸಿಯಂ ಅವಶ್ಯಕ.
ದೇಹದಲ್ಲಿ ಮೆಗ್ನೀಸಿಯಂ ಕೊರತೆಯಿದ್ದರೆ ವಾಕರಿಕೆ, ವಾಂತಿ, ಸ್ನಾಯುಗಳ ದೌರ್ಬಲ್ಯ, ನಡುಕ ಹಾಗೂ ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬರುತ್ತವೆ. ಮೆಗ್ನೀಸಿಯಂ ಕೊರತೆಯಿಂದ ಹೃದ್ರೋಗ, ಸಿಂಗಲ್ಟನ್ ಹಾಗೂ ಟೈಪ್-2 ಮಧುಮೇಹದಂತಹ ಕಾಯಿಲೆಗಳೂ ಉಂಟಾಗುತ್ತವೆ.
ಸಂಶೋಧನೆ ಹೇಳುವುದೇನು?:ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಪ್ರಕಾರ, ಪುರುಷರಿಗೆ ಪ್ರತಿದಿನ 400 ರಿಂದ 420 ಮಿಲಿಗ್ರಾಂ ಮೆಗ್ನೀಸಿಯಂ ಬೇಕಾಗುತ್ತದೆ. ಮಹಿಳೆಯರಿಗೆ 310ರಿಂದ 320 ಮಿಲಿಗ್ರಾಂ ಮೆಗ್ನೀಸಿಯಂ ಅಗತ್ಯವಿದೆ. ಆಯಾಸ ಕಡಿಮೆ ಮಾಡಲು ಹಾಗೂ ದೇಹದ ಶಕ್ತಿ ಮಟ್ಟವನ್ನು ಹೆಚ್ಚಿಸಲು ಮೆಗ್ನೀಸಿಯಂಭರಿತ ಪದಾರ್ಥಗಳನ್ನು ಆಹಾರದಲ್ಲಿ ಸೇವಿಸಿಕೊಳ್ಳಬೇಕಾಗುತ್ತದೆ.
ಮೆಗ್ನೀಸಿಯಂ ಹೇರಳವಾಗಿರುವ ಆಹಾರಗಳು:
ಪಾಲಕ್:ಪಾಲಕ್ ಮೆಗ್ನೀಸಿಯಂನ ಕಣಜ. ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ 157 ಮಿಲಿಗ್ರಾಂ ಮೆಗ್ನೀಸಿಯಂ ದೊರೆಯುತ್ತದೆ. ಪಾಲಕ್ ಅನ್ನು ದೈನಂದಿನ ಆಹಾರದಲ್ಲಿ ಸೇರಿಸಿದರೆ, ನಿಮಗೆ ಶೇ.40ರಷ್ಟು ಮೆಗ್ನೀಸಿಯಂ ಲಭಿಸುತ್ತದೆ. ಪಾಲಕ್ ಸೊಪ್ಪಿನಲ್ಲಿರುವ ಕಬ್ಬಿಣ ಹಾಗೂ ವಿಟಮಿನ್ ಸಿ ದೇಹದಲ್ಲಿ ಆಮ್ಲಜನಕದ ಪೂರೈಕೆ ಸುಧಾರಿಸುತ್ತದೆ ಹಾಗೂ ಆಯಾಸ ನಿವಾರಿಸಲು ಸಹಾಯ ಮಾಡುತ್ತದೆ.
ಬಾದಾಮಿ:ಒಂದು ಹಿಡಿ ಬಾದಾಮಿಯಲ್ಲಿ 76 ಮಿಗ್ರಾಂ ಮೆಗ್ನೀಸಿಯಮ್ ಲಭಿಸುತ್ತದೆ. ಆರೋಗ್ಯಕರ ಕೊಬ್ಬುಗಳು ಹಾಗೂ ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಬಾದಾಮಿ ದಿನವಿಡೀ ನಿರಂತರ ಶಕ್ತಿ ಒದಗಿಸುತ್ತದೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ (2016) ಪ್ರಕಟಿಸಿದ ಅಧ್ಯಯನವು, ಬಾದಾಮಿ ತಿನ್ನುವುದರಿಂದ ಶಕ್ತಿ ದೊರೆಯುತ್ತದೆ ಹಾಗೂ ಹಸಿವು ಕಡಿಮೆಯಾಗುತ್ತದೆ. ಚಯಾಪಚಯ ಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ.
ಆವಕಾಡೊ ಹಣ್ಣು:ಒಂದು ಆವಕಾಡೊ ಹಣ್ಣು ಸುಮಾರು 58 ಮಿಗ್ರಾಂ ಮೆಗ್ನೀಸಿಯಂ ಜೊತೆಗೆ ಪೊಟ್ಯಾಸಿಯಂ, ಫೈಬರ್ ಹಾಗೂ ಆರೋಗ್ಯಕರ ಕೊಬ್ಬು ಹೊಂದಿರುತ್ತದೆ. ನ್ಯೂಟ್ರಿಯೆಂಟ್ಸ್ (2019) ಜರ್ನಲ್‌ನಲ್ಲಿ ನಡೆಸಿದ ಅಧ್ಯಯನವು ಆವಕಾಡೊ ಸೇವನೆಯು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ವಿಷಯವು ತೋರಿಸಿದೆ.