ನ್ಯೂಯಾರ್ಕ್: ನಿರುದ್ಯೋಗ, ವಿಮೆರಹಿತ ಬದುಕು ಅಥವಾ ಹೈಸ್ಕೂಲ್ಗಿಂತ ಮೇಲ್ಪಟ್ಟ ಉತ್ತಮ ವಿದ್ಯಾಭ್ಯಾಸ ಹೊಂದಿರದೇ ಇರುವ ಮತ್ತು ನಿದ್ರಾ ಕೊರತೆ ಹೊಂದಿರುವ ಜನರಲ್ಲಿ ಹೃದಯರಕ್ತನಾಳದ ಸಮಸ್ಯೆ ಅಪಾಯಕಾರಿ ಸಂಬಂಧ ಹೊಂದಿದೆ ಎಂದು ಹೊಸ ಅಧ್ಯಯನ ಕಂಡುಕೊಂಡಿದೆ. ಈ ಅಧ್ಯಯನವನ್ನು ಏಷ್ಯಾನ್ ಅಮೆರಿಕನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಈ ಅಧ್ಯಯನದಲ್ಲಿ ಏಷ್ಯಾದಿಂದ 6,395 ಮಂದಿ ವಯಸ್ಕರು ಭಾಗಿಯಾಗಿದ್ದರು. ಇದರಲ್ಲಿ ಶೇ.22ರಷ್ಟು ಭಾರತೀಯರಿದ್ದಾರೆ. ಶೇ.20ರಷ್ಟು ಏಷ್ಯಾದ ಭಾರತೀಯರು ಅಗತ್ಯಕ್ಕಿಂತ ಕಡಿಮೆ ನಿದ್ರೆ ಹೊಂದಿದ್ದು, ಶೇ.42ರಷ್ಟು ಮಂದಿ ದೈಹಿಕ ಚಟುವಟಿಕೆಯ ಕೊರತೆಯಿಂದ ಹೃದಯ ರೋಗಗಳ ಅಪಾಯ ಹೊಂದಿದ್ದಾರೆ.
ವ್ಯಕ್ತಿಯ ಪ್ರತಿಕೂಲ ಸಾಮಾಜಿಕ ನಿರ್ಧಾರ ಶೇ.14ರಷ್ಟು ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸಿದರೆ, ಕಳಪೆ ನಿದ್ರೆ ಶೇ.17ರಷ್ಟು ಅಪಾಯ ಮತ್ತು ಟೈಪ್ 2 ಮಧುಮೇಹ ಶೇ.24ರಷ್ಟು ಅಪಾಯ ಹೆಚ್ಚಿಸುತ್ತದೆ. ಇವೆಲ್ಲವೂ ಹೃದಯರಕ್ತನಾಳದ ಕಾಯಿಲೆಯನ್ನು ಹೆಚ್ಚಿಸುವ ಅಪಾಯವಿದೆ ಎನ್ನುತ್ತದೆ ವರದಿ.