ನವದೆಹಲಿ:ಅನೇಕ ಮಂದಿಗೆ ಇಟ್ಟ ಕೀ ಅಥವಾ ಬಳಕೆ ಮಾಡಿದ ವಸ್ತುಗಳನ್ನು ಎಲ್ಲಿಟ್ಟಿದ್ದೇವೆ ಎಂಬುದೇ ಮರೆತು ಹೋಗುತ್ತದೆ. ಇದು ಸಾಮಾನ್ಯವಾಗಿ ಬಹುತೇಕರನ್ನು ಕಾಡುವ ಸಹಜ ಸಮಸ್ಯೆಯೂ ಹೌದು. ಈ ಬಗ್ಗೆ ಹೆಚ್ಚು ಗಂಭೀರವಾಗಿ ಚಿಂತೆ ಮಾಡಬೇಕಾಗಿರುವುದು ಏನಿಲ್ಲ ಬಿಡಿ. ಆದರೆ, ಹೊಸ ಅಧ್ಯಯನ ಹೇಳುವಂತೆ ನಿತ್ಯ ನಡೆಯುವ ಈ ಮರೆತು ಹೋಗುವ ಸಂಗತಿ ಸಾಮಾನ್ಯವಲ್ಲ ಎಂದು ಹೇಳಿದ್ದಾರೆ.
ರೋಡ್ ಐಲ್ಯಾಂಡ್ ಕಾಲೇಜ್ ಹಾಗೂ ಇಂಡಿಯಾನಾ ವಿಶ್ವವಿದ್ಯಾಲಯದ ಇಬ್ಬರು ಅಮೆರಿಕದ ಪ್ರಾಧ್ಯಾಪಕರು ಬರೆದ ಹೊಸ ಪುಸ್ತಕ 'ದಿ ಸೈಕಾಲಜಿ ಆಫ್ ಮೆಮೊರಿ' ಪುಸ್ತಕದಲ್ಲಿ ಈ ಕುರಿತು ತಿಳಿಸಲಾಗಿದೆ. ಅಲ್ಲದೇ ಈ ರೀತಿ ಇಟ್ಟ ವಸ್ತು ಮರೆತು ಹೋಗುವ ನೆನಪಿನ ಶಕ್ತಿಯನ್ನು ಮರು ಸ್ಥಾಪಿಸಬಹುದು ಎಂಬ ವಿಚಾರವನ್ನು ಈ ಅಧ್ಯಾಪಕರು ತಮ್ಮ ಪುಸ್ತಕದಲ್ಲಿ ಮಂಡಿಸಿದ್ದಾರೆ.
ಡಾ ಮೇಗನ್ ಸುಮೆರಾಕಿ ಮತ್ತು ಡಾ ಅಲ್ಥಿಯಾ ನೀಡ್ ಕಮಿನ್ಸ್ಕೆ ಸಂಗ್ರಹಿಸಿದ ಮಾಹಿತಿ ಪ್ರಕಾರ, ಈ ರೀತಿ ಜನರು ವಸ್ತುಗಳನ್ನು ಮರೆತು ಹೋಗುವುದು ಏನು ಮಹಾನ್ ವಿಷ್ಯಾ ಎಂದು ಚಿಂತಿಸುತ್ತಾರೆ. ಆದರೆ, ಮರೆತು ಹೋದ ವ್ಯಕ್ತಿ ಯಾವ ವಸ್ತು ಎಲ್ಲಿಟ್ಟೆ ಎಂದು ನೆನಪಿಸಿಕೊಳ್ಳುವುದಕ್ಕೆ ಹೆಚ್ಚು ಸಮಸ್ಯೆ ಅನುಭವಿಸುತ್ತಿರುತ್ತಾರೆ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಚಟುವಟಿಕೆ ಮೂಲಕ ಈ ಮರೆಯುವ ಶಕ್ತಿ ಕಡಿಮೆ ಮಾಡಬಹುದು ಎಂದಿದ್ದಾರೆ. ಅಷ್ಟೇ ಅಲ್ಲದೇ, ವಿದ್ಯಾರ್ಥಿ ಹಾಗೂ ಜನರ ಕಲಿಕೆಯನ್ನು ಸುಧಾರಿಸಲು ಸರಳವಾದ ಸ್ಮರಣಶಕ್ತಿ ಉತ್ತೇಜಿಸುವ ತಂತ್ರಗಳನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.