ಕರ್ನಾಟಕ

karnataka

ETV Bharat / health

ಈಶಾನ್ಯ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಆರೋಗ್ಯ ಅಪಾಯ: ಬಯೋಮಾಸ್​​​​ ಇಂಧನ ಬಳಕೆಯೇ ಇಷ್ಟಕ್ಕೆಲ್ಲ ಕಾರಣ - ಈಶಾನ್ಯ ರಾಜ್ಯದಲ್ಲಿ ಆರೋಗ್ಯದ ಅಪಾಯ

ಸಾಂಪ್ರದಾಯಿಕ ಅಡುಗೆ ಪದ್ದತಿಗಳಾದ ಉರುವಲು ಮತ್ತು ಬಯೋಮಾಸ್​ ಇಂಧನಗಳನ್ನು ಅಡುಗೆಗೆ ಬಳಕೆ ಮಾಡುತ್ತಿರುವುದರಿಂದ ಒಳಾಂಗಣ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಇದು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.

indoor air pollution resulting from traditional cooking practices
indoor air pollution resulting from traditional cooking practices

By IANS

Published : Feb 20, 2024, 10:49 AM IST

Updated : Feb 20, 2024, 11:30 AM IST

ಹೈದರಾಬಾದ್​:ಮೂರು ಈಶಾನ್ಯ ರಾಜ್ಯಗಳಲ್ಲಿನ ಗ್ರಾಮೀಣ ಅಡುಗೆ ಮನೆಗಳಲ್ಲಿ ಸಾಂಪ್ರದಾಯಿಕ ಅಡುಗೆ ಅಭ್ಯಾಸಗಳಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಬಯೋಮಾಸ್ ಬಳಕೆಯಿಂದ ಒಳಾಂಗಣ ವಾಯು ಮಾಲಿನ್ಯದ ಹಾನಿಕಾರಕ ಪರಿಣಾಮ ಬೀರುತ್ತದೆ. ಕುರಿತು ಭಾರತೀಯ ತಾಂತ್ರಿಕ ಸಂಸ್ಥೆ(ಐಐಟಿ) ಮಂಡಿ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಐಎನ್​ಆರ್​ಎಸ್​ ಮತ್ತು ಸಿಎಸ್​ಐಆರ್ ​-ಎನ್​ಪಿಎಲ್​ ಸಹಯೋಗದೊಂದಿಗೆ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ, ಕಟ್ಟಿಗೆ ಮತ್ತು ಬಯೋಮಾಸ್​​ ಬಳಕೆ ಮಾಡಿ ಅಡುಗೆ ಮಾಡುವುದರಿಂದ ಮನೆಯೊಳಗೆ ಹಾನಿಕಾರಕ ಹೊಗೆಯಿಂದಾಗುವ ಪರಿಣಾಮವನ್ನು ತಂಡ ವಿಶ್ಲೇಷಿಸಿದೆ.

ನಮ್ಮ ಅಧ್ಯಯನವೂ ಗ್ರಾಮೀಣ ಅಡುಗೆ ಮನೆಗಳಲ್ಲಿನ ನೈಜಪ್ರಪಂಚದ ಏರೋಸಾಲ್ ಮಾಪನಗಳನ್ನು ಡೋಸಿಮೆಟ್ರಿ ಮಾಡೆಲಿಂಗ್‌ನೊಂದಿಗೆ ಸಂಯೋಜಿಸುತ್ತದೆ. ಇದು ಅಡುಗೆ ಮನೆಯಿಂದ ಉತ್ಪತ್ತಿಯಾಗುವ ಹೊಗೆ ಉಸಿರಾಟದ ಮೇಲೆ ಬೀರುವ ಪರಿಣಾಮವನ್ನು ದೃಢವಾಗಿ ಅಂದಾಜಿಸುತ್ತದೆ ಎಂದು ಐಐಟಿ ಮಂಡಿಯ ಸಹಾಯಕ ಪ್ರೊಫೆಸರ್​ ಡಾ ಸಾಯಂತನ್​ ಸರ್ಕಾರ್​ ತಿಳಿಸಿದ್ದಾರೆ.

ಭಾರತದಲ್ಲಿ ಅಡುಗೆ ಮನೆಯ ಹೊಗೆಗೆ ಒಡ್ಡಿಕೊಳ್ಳುವುದು ಅನೇಕ ರೋಗಗಳ ಹೊರೆಯನ್ನು ಉಂಟು ಮಾಡುತ್ತದೆ ಎಂದು ಅಂದಾಜಿಸಲಾಗಿದೆ. ಅಧ್ಯಯನವೂ ಕೂಡ ಮೊದಲ ಬಾರಿಗೆ ಆಕ್ಸಿಡೇಟಿವ್ ಒತ್ತಡದ ಸಾಮರ್ಥ್ಯವನ್ನು ಅಳೆಯುತ್ತದೆ. ಜೊತೆಗೆ ಎಲ್​ಪಿಜಿ ಬಳಕೆ ಮಾಡುವವರಿಗೆ ಹೋಲಿಕೆ ಮಾಡಿದಾಗ ಬಯೋಮಾಸ್​​ ಬಳಕೆದಾರರು ಹೆಚ್ಚಿನ ಅಪಾಯ ಎದುರಿಸುತ್ತಾರೆ ಎಂದು ತೋರಿಸಿದೆ.

ಮೂರು ಸರಣಿಯ ಪೇಪರ್​ ಅನ್ನು ಎರಡು ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯದ 50ರಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. ಇಲ್ಲಿ ಇವರು ಕಟ್ಟಿಗೆ ಮತ್ತು ಬಯೋಮಾಸ್​ ನಂತಹ ಸಾಂಪ್ರದಾಯಿಕ ಅಡುಗೆ ಪದ್ಧತಿ ಅನುಸರಿಸಿದ್ದಾರೆ. ಅಡುಗೆ ಮನೆಯ ಗಾಳಿಯು ಗಮನಾರ್ಹ ಮಾಲಿನ್ಯಕ್ಕೆ ಕಾರಣವಾಗಿದೆ.

ಎಲ್​ಪಿಜಿ ಆಧಾರಿತ ಅಡುಗೆಯನ್ನು ಬಯೋಮಾಸ್​ ಅಡುಗೆ ಇಂಧನದೊಂದಿಗೆ ಹೋಲಿಕೆ ಮಾಡಲಾಗಿದೆ. ಈ ವೇಳೆ ರೋಗದ ತೀವ್ರತೆ ಕುರಿತು ಕೂಡ ಮಾಪನ ಮಾಡಲಾಗಿದೆ. ಕಟ್ಟಿಗೆ, ಮಿಶ್ರಣ ಬಯೋಮಾಸ್​ ಮತ್ತು ದ್ರವೀಕೃತ ಪೆಟ್ರೋಲಿಯಂನೊಂದಿಗೆ ಅಡುಗೆ ಮಾಡಿದಾಗ ಗಾಳಿಯಲ್ಲಿ ವಿಷಪೂರಿತ ಕಣಗಳು ಲೋಹಗಳು ಮತ್ತು ಕಾರ್ಸಿನೋಜೆನಿಕ್​ ಪಾದರ್ಥ್​​ಗಳು ಹೊರ ಸೂಸುವುದನ್ನು ಕಾಣಬಹುದಾಗಿದೆ. ಉಸಿರಾಡುವಾಗ ಈ ರಾಸಾಯನಿಕಗಳು ಕಣಗಳು ಶೇಖರಣೆ ಆಗುತ್ತವೆ. ಈ ದತ್ತಾಂಶದ ಮೂಲಕ ಸಂಶೋಧಕರು ಈಶಾನ್ಯ ಭಾರತದ ಗ್ರಾಮೀಣ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಅಂದಾಜಿಸಿದ್ದಾರೆ. ಈ ವೇಳೆ, ಅವರಲ್ಲಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ನ್ಯುಮೋನಿಯಾ ಮತ್ತು ವಿವಿಧ ಕ್ಯಾನ್ಸರ್​​ ಸಂಭವ ಎದುರಾಗುವುದರ​​ ಮೇಲೆ ಗಮನ ಹರಿಸಲಾಗಿದೆ.

ಅಧ್ಯಯನದ ಫಲಿತಾಂಶದಲ್ಲಿ ಎಲ್​ಪಿಜಿ ಬಳಕೆ ಮಾಡುವವರ ಮನೆಗಿಂತ ಕಟ್ಟಿಗೆ ಬಯೋಮಾಸ್​​ ಬಳಕೆ ಮಾಡುವ ಮಂದಿ ಹಾನಿಕಾರಕ ಏರೋಸಾಲ್​​ಗೆ ಒಡ್ಡಿಕೊಳ್ಳುವ ಪರಿಣಾಮ 19 ಪಟ್ಟು ಹೆಚ್ಚಿದೆ. ಅವರ ಉಸಿರಾಟದಲ್ಲಿ ಈ ಏರೋಸಾಲ್​ ಸಾಂದ್ರತೆ 29 ರಿಂದ 79ರಷ್ಟಿದೆ. ಅಲ್ಲದೇ, ಎಲ್​ಪಿಜಿ ಬಳಕೆದಾರರಿಗಿಂತ ಇವರಲ್ಲಿ ರೋಗದ ಹೊರೆ 2 ರಿಂದ 57 ಪಟ್ಟು ಹೆಚ್ಚಿದೆ. ಜೀವಕೋಶದ ಹಾನಿ ಮತ್ತು ಪ್ರೋಟಿನ್​ ಮತ್ತು ಡಿಎನ್​ಗೆ ಹಾನಿಗೆ ಕಾರಣವಾಗುವ ಆಕ್ಸಿಡೇಟಿವ್​​ ಒತ್ತಡವೂ ಕೂಡ ಎಲ್​ಪಿಜಿ ಬಳಕೆ ಮಾಡುವವರಿಗಿಂತ ಬಯೋಮಾಸ್​ ಬಳಸುವ ಜನರಲ್ಲಿ 4-5 ಪಟ್ಟು ಹೆಚ್ಚಿದೆ.

ಈಶಾನ್ಯದಲ್ಲಿರುವ ಗ್ರಾಮೀಣ ಸಮುದಾಯಗಳು ಸ್ವಚ್ಛವಾದ ಅಡುಗೆ ವಿಧಾನಗಳಿಗೆ ಪರಿವರ್ತನೆ ನಡೆಸುವ ತುರ್ತ ಅಗತ್ಯವನ್ನು ಈ ಅಧ್ಯಯನವೂ ತಿಳಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು. ಎಲ್​ಪಿಜಿ ಶಿಫಾರಸು, ಸ್ಥಳೀಯ ಪರಿಹಾರಕ್ಕೆ ಧನಸಹಾಯ, ಆರೋಗ್ಯ ಶಿಬಿರದಂತಹ ಕಾರ್ಯಕ್ರಮ ಆಯೋಜಿಸುವುದನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ: ಡಿಫ್ತೀರಿಯಾ ಚಿಕಿತ್ಸೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ವಿಶ್ವ ಆರೋಗ್ಯ ಸಂಸ್ಥೆ

Last Updated : Feb 20, 2024, 11:30 AM IST

ABOUT THE AUTHOR

...view details