ಹೈದರಾಬಾದ್:ಪದೇ ಪದೆ ಕಣ್ಣುಗಳು ಒಣಗುವುದು ಮತ್ತು ದೃಷ್ಟಿ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ, ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂದು ಅರ್ಥ, ಮೊದಲು ಈ ಬಗ್ಗೆ ಪರೀಕ್ಷಿಸಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕಣ್ಣಿನ ಆರೋಗ್ಯಕ್ಕೆ ಸರಿಯಾದ ನಿದ್ದೆ ಅತ್ಯಗತ್ಯ. ನಾವು ದಿನವಿಡೀ ಎಷ್ಟೇ ಕೆಲಸಗಳನ್ನು ಮಾಡಿದರೂ, ಎಷ್ಟೇ ಬ್ಯುಸಿ ಇದ್ದರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು. ಸಾಕಷ್ಟು ನಿದ್ದೆ ಮಾಡದೇ ಇದ್ದಾಗ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ದೆ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ದೆ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಕಣ್ಣಿನ ಆರೋಗ್ಯಕ್ಕೂ ನಿದ್ರೆಗೂ ಸಂಬಂಧವೇನು?:ದೇಹದ ಇತರ ಭಾಗಗಳಂತೆ ಕಣ್ಣುಗಳಿಗೆ ವಿಶ್ರಾಂತಿ ಮತ್ತು ಪುನಶ್ಚೇತನಕ್ಕೆ ಸಮಯಬೇಕು. ನಿದ್ದೆ ಮಾಡುವಾಗ ಕಣ್ಣುಗಳು ರಿಫ್ರೇಶ್ ಆಗುತ್ತವೆ. ಇದು ಉತ್ತಮ ದೃಷ್ಟಿ ಮತ್ತು ಕಣ್ಣಿನ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಈ ರಾತ್ರಿಯ ಪ್ರಕ್ರಿಯೆ ದಿನವಿಡೀ ಧೂಳು, ಅಲರ್ಜಿನ್ ಮತ್ತು ಇತರ ಕಸ ಕಣ್ಣಿನಲ್ಲಿ ಸೇರಿಕೊಂಡಿರುವುದನ್ನು ಹೊರಹಾಕುತ್ತದೆ ಎನ್ನುತ್ತಾರೆ ತಜ್ಞರು.
Dry Eye Syndrome: ಸರಿಯಾದ ನಿದ್ದೆ ಇಲ್ಲದಿರುವುದು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಅವುಗಳಲ್ಲಿ ಒಂದು ಡ್ರೈ ಐ ಸಿಂಡ್ರೋಮ್ ಎಂಬ ಸಮಸ್ಯೆ ಉಂಟಾಗುತ್ತದೆ. ಇದು ಕಣ್ಣುಗಳನ್ನು ಹೈಡ್ರೀಕರಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇವು ಕಿರಿಕಿರಿ, ಕಣ್ಣು ಕೆಂಪಾಗುವುದು ಸೇರಿದಂತೆ ಇತರ ಕಿರಿಕಿರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇವುಗಳ ಜೊತೆಗೆ ದೃಷ್ಟಿದೋಷವೂ ಉಂಟಾಗಬಹುದು ಎನ್ನುತ್ತಾರೆ ತಜ್ಞರು.
Floppy Eyelid Syndrome:ನಿದ್ದೆಯ ಕೊರತೆಯಿಂದ ಉಂಟಾಗಬಹುದಾದ ಮತ್ತೊಂದು ಸಮಸ್ಯೆ ಫ್ಲಾಪಿ ಐಲಿಡ್ ಸಿಂಡ್ರೋಮ್. ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ಸಿಗದಿದ್ದಾಗ ಉಂಟಾಗುವ ಸಮಸ್ಯೆ ಫ್ಲಫಿ ಐಲಿಡ್ ಸಿಂಡ್ರೋಮ್. ಈ ರೋಗದ ಲಕ್ಷಣಗಳು ನಿದ್ದೆ ಮಾಡುವಾಗ ಕಣ್ಣುರೆಪ್ಪೆಗಳಲ್ಲಿ ಅಸ್ವಸ್ಥತೆ ಉಂಟುಮಾಡುತ್ತದೆ. ನೈಸರ್ಗಿಕ ರಕ್ಷಣಾ ಕಾರ್ಯವಿಧಾನಗಳನ್ನು ಅಡ್ಡಿಪಡಿಸುವುದು, ಕಿರಿಕಿರಿ ಮತ್ತು ಕಾರ್ನಿಯಲ್ ಸವೆತಕ್ಕೆ ಕಾರಣವಾಗುತ್ತದೆ.(short term near sightedness)