Immunity Boosting Vitamins: ವಿಟಮಿನ್ಗಳ ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೂ ಹೆಚ್ಚಿನ ಲಾಭವನ್ನು ನೀಡುತ್ತದೆ ಎನ್ನುತ್ತಾರೆ ತಜ್ಞರು. ಚಯಾಪಚಯವು ಸರಿಯಾಗಿ ನಡೆಯಲು ಸಹಾಯ ಮಾಡುವುದಲ್ಲದೇ, ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಆ ಬಗೆಗಿನ ಎಲ್ಲ ಅಂಶಗಳನ್ನು ನಾವು ಈಗ ತಿಳಿದುಕೊಳ್ಳೋಣ.
ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯು ವಿವಿಧ ರೋಗಗಳು ಮತ್ತು ಕಾಯಿಲೆಗಳಿಂದ ಪ್ರಭಾವಿತರಾಗುವುದಿಲ್ಲ. ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ, ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ರೋಗನಿರೋಧಕ ಶಕ್ತಿ ಹೆಚ್ಚಿಸಲು ನಾವು ಸೇವಿಸುವ ಆಹಾರವು ತುಂಬಾ ಮುಖ್ಯವಾಗಿದೆ. ನಿತ್ಯ ಕೆಲವು ವಿಟಮಿನ್ಗಳಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಪರಿಪೂರ್ಣ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ತಜ್ಞರು. ಆ ವಿಟಮಿನ್ಗಳ ಕೊರತೆಯಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.
ವಿಟಮಿನ್ 'ಸಿ':ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ 'ಸಿ' ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ವಿಟಮಿನ್ ಕೊರತೆ ಇರುವವರು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕಾಗಿಯೇ ವಿಟಮಿನ್ ಸಿ ಸಮೃದ್ಧವಾಗಿರುವ ಆರೆಂಜ್ ಹಣ್ಣಿನೊಂದಿಗೆ ನಿಂಬೆ ಹಣ್ಣುಗಳು ನಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಕ್ಯಾಪ್ಸಿಕಂ ಮತ್ತು ಪಾಲಕ್ ಸೇವಿಸಲು ಸಹ ಸೂಚಿಸಲಾಗುತ್ತದೆ.
ವಿಟಮಿನ್ 'ಸಿ' ಕೊರತೆಯಿಂದ ಕಂಡು ಬರುವ ಲಕ್ಷಣಗಳಿವು:ವಿಟಮಿನ್ 'ಸಿ' ಕೊರತೆಯಿಂದ ದೇಹ ದಣಿದಿರುವುದು, ಉಸಿರಾಟದ ತೊಂದರೆ, ಚರ್ಮ ತೆಳುವಾಗುವುದು, ಕಬ್ಬಿಣಾಂಶದ ಕೊರತೆ, ಕೀಲು ನೋವು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಅಲ್ಲದೇ ಕೆಲವೊಮ್ಮೆ ಹಲ್ಲಿನ ಸಮಸ್ಯೆ, ವಸಡು ಊತ, ರಕ್ತಸ್ರಾವದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ತಜ್ಞರು.
ವಿಟಮಿನ್ 'ಬಿ6':ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವಲ್ಲಿ ವಿಟಮಿನ್ 'ಬಿ6' ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಯಾವುದೇ ಸೋಂಕುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ನಮ್ಮ ದೈನಂದಿನ ಆಹಾರದಲ್ಲಿ ಬಾಳೆಹಣ್ಣು, ಮೀನು, ಕೋಳಿ, ಆಲೂಗಡ್ಡೆ ಮತ್ತು ಬೀನ್ಸ್‌ನಂತಹ ವಿಟಮಿನ್ ಬಿ 6 ಸಮೃದ್ಧವಾಗಿರುವ ಆಹಾರವನ್ನು ಸೇರಿಸಬೇಕೆಂದು ವೈದ್ಯರು ಸೂಚಿಸುತ್ತಾರೆ.
ವಿಟಮಿನ್ 'ಬಿ6' ಕೊರತೆಯ ಲಕ್ಷಣಗಳೇನು?:ಫಿಟ್ಸ್, ಅಜೀರ್ಣ, ರಕ್ತಹೀನತೆ, ಕೋಪ, ಚರ್ಮ ರೋಗಗಳು, ರಕ್ತಹೀನತೆ ಮತ್ತು ಮೊಡವೆಗಳಂತಹ ರೋಗಗಳು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.
ವಿಟಮಿನ್ ಇ:ವಿಟಮಿನ್ ಇ ನಮ್ಮ ದೇಹದಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು 'ಸೌಂದರ್ಯ ವಿಟಮಿನ್' ಎಂದೂ ಕರೆಯುತ್ತಾರೆ. ಇದು ಬ್ಯಾಕ್ಟೀರಿಯಾ, ವೈರಸ್‌ಗಳು ಮತ್ತು ಇತರ ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಮತ್ತು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ತಡೆಯುತ್ತದೆ. ಅಲ್ಲದೇ, ಈ ವಿಟಮಿನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ವಿಟಮಿನ್ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಾಲಕ್, ಇತರ ಧಾನ್ಯಗಳು ದೈನಂದಿನ ಆಹಾರದಲ್ಲಿ ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.
ವಿಟಮಿನ್ 'ಇ' ಕೊರತೆಯಿಂದ ಕಂಡುಬರುವ ಲಕ್ಷಣಗಳಿವು:ವೈದ್ಯಕೀಯ ತಜ್ಞರ ಪ್ರಕಾರ, ಸ್ನಾಯು ಕ್ಷೀಣತೆ, ಕೆಂಪು ರಕ್ತ ಕಣಗಳ ಕಡಿಮೆಯಾಗುತ್ತವೆ, ಪುರುಷರಲ್ಲಿ ಬಂಜೆತನ, ಮಹಿಳೆಯರಲ್ಲಿ ಋತುಚಕ್ರ ಮತ್ತು ಗರ್ಭಪಾತದ ಸಮಸ್ಯೆ ಕಂಡುಬರುತ್ತದೆ.