ETV Bharat / health

ಬಾಳೆ ಹೂವಿನಿಂದ ಲಭಿಸುತ್ತೆ ಅದ್ಭುತ ಲಾಭಗಳು, ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು: ಸಂಶೋಧಕರ ಸಲಹೆ - BANANA FLOWER FOR DIABETES

ಬಾಳೆ ಹೂವಿನಿಂದ ಹಲವು ಲಾಭಗಳು ದೊರೆಯುತ್ತವೆ. ಮುಖ್ಯವಾಗಿ ಬಾಳೆ ಹೂವು ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.

BANANA FLOWER FOR DIABETES  LOWER BLOOD SUGAR  BLOOD SUGAR CONTROL  DIABETES DIET
ಸಾಂದರ್ಭಿಕ ಚಿತ್ರ (Pexels)
author img

By ETV Bharat Health Team

Published : Jan 1, 2025, 12:01 PM IST

Health Benefits of banana flower: ಮಧುಮೇಹವು ಗುಣಪಡಿಸಲಾಗದ ಕಾಯಿಲೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಸರಿಯಾದ ಆಹಾರ ಪದ್ಧತಿಯಿಂದ ಮಧುಮೇಹ ರೋಗವನ್ನು ನಿಯಂತ್ರಿಸಬಹುದು. ವ್ಯಾಯಾಮ, ಆಹಾರದ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳನ್ನು ಸೇವಿಸುವಂತಹ ಸರಳ ವಿಧಾನಗಳ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡಲು ಸಾಧ್ಯವಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುವ ಅನೇಕ ಪರಿಣಾಮಕಾರಿ ಆಯುರ್ವೇದದ ವಿಧಾನಗಳಿವೆ.

ಅದರಲ್ಲಿ ಬಾಳೆ ಮರ ಕೂಡ ಒಂದಾಗಿದೆ. ಅದರ ಹಣ್ಣುಗಳು ಪ್ರಯೋಜನಕಾರಿ ಮಾತ್ರವಲ್ಲ, ಅದರ ಎಲೆಗಳು, ಕಾಂಡ ಹಾಗೂ ಹೂವುಗಳನ್ನು ಸಹ ತುಂಬಾ ಸಹಾಯಕವೆಂದು ಪರಿಗಣಿಸಲಾಗುತ್ತದೆ. ಸಂಶೋಧನೆಯ ಪ್ರಕಾರ, ಅಂತಹ ಅಂಶಗಳು ಬಾಳೆ ಹೂವಿನಲ್ಲಿ ಕಂಡುಬರುತ್ತವೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ನೀವು ಬಾಳೆ ಹೂಗಳನ್ನು ಹಾಗೇ ಹಸಿಯಾಗಿ ತಿನ್ನಬಹುದು ಹಾಗೂ ಅದರಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಸಹ ಸಿದ್ಧಪಡಿಸಬಹುದು. ಮಧುಮೇಹಕ್ಕೆ ಬಾಳೆ ಹೂವು ಏಕೆ ಪ್ರಯೋಜನಕಾರಿ? ಇದನ್ನು ಹೇಗೆ ಸೇವಿಸುಬೇಕು ಎಂಬುದನ್ನು ತಿಳಿಯೋಣ.

BANANA FLOWER FOR DIABETES  LOWER BLOOD SUGAR  BLOOD SUGAR CONTROL  DIABETES DIET
ಬಾಳೆ ಹೂವು (Pexels)

ಸಂಶೋಧನೆ ಏನು ತಿಳಿಸುತ್ತದೆ?: 2011ರಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಾಳೆ ಹೂವುಗಳು ಪ್ರಯೋಜನಕಾರಿ ಎಂದು ತಿಳಿದಿದೆ. ಮಧುಮೇಹದಿಂದ ಬಳಲುತ್ತಿರುವ ಇಲಿಗಳ ಮೇಲೆ ಈ ಸಂಶೋಧನೆಯನ್ನು ನಡೆಸಲಾಯಿತು. ಅದರ ತೂಕವು ತುಂಬಾ ಹೆಚ್ಚಿತ್ತು ಹಾಗೂ ಅವುಗಳ ರಕ್ತ ಮತ್ತು ಮೂತ್ರದಲ್ಲಿ ಸಕ್ಕರೆಯ ಪ್ರಮಾಣವು ತುಂಬಾ ಹೆಚ್ಚಾಗಿದೆ. ಬಾಳೆ ಹೂವುಗಳ ಸೇವನೆಯಿಂದ ಈ ಇಲಿಗಳ ದೇಹದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನವು ತಿಳಿದಿದೆ.

ಜೊತೆಗೆ 2013ರಲ್ಲಿ ನಡೆಸಿದ ಮತ್ತೊಂದು ಸಂಶೋಧನೆಯಲ್ಲಿ ಇದೇ ರೀತಿಯ ಫಲಿತಾಂಶಗಳು ಕಂಡುಬಂದಿವೆ. ಈ ಸಂಶೋಧನೆಯನ್ನು ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರವು ಮಾಡಿದೆ. ಈ ಅಧ್ಯಯನದ ಪ್ರಕಾರ, ಬಾಳೆಹಣ್ಣಿನ ಹೂವುಗಳ ಸೇವನೆಯು ಮಧುಮೇಹ ರೋಗಿಗಳ ದೇಹದಲ್ಲಿ ನಿರ್ದಿಷ್ಟ ರೀತಿಯ ಪ್ರೋಟೀನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಸಂಶೋಧನಕರು ತಿಳಿಸಿದ್ದಾರೆ.

ಬಾಳೆ ಹೂವು ಮಧುಮೇಹಿಗಳಿಗೆ ಪ್ರಯೋಜನಕಾರಿ: ಬಾಳೆ ಹೂವುಗಳು ಮತ್ತು ಸ್ಯೂಡೋಸ್ಟೆಮ್ ಮಧುಮೇಹ ವಿರೋಧಿ ಮತ್ತು ಆ್ಯಂಟಿ-ಏಜ್ ಗುಣಲಕ್ಷಣಗಳನ್ನು ಹೊಂದಿವೆ. ಮತ್ತು ಮಧುಮೇಹ ರೋಗಿಗಳಿಗೆ ಆಹಾರ ಪೂರಕಗಳಾಗಿ ಪ್ರಯೋಜನಕಾರಿ ಎಂದು ಸಂಶೋಧನೆ ತಿಳಿಸುತ್ತದೆ. ಬಾಳೆ ಹೂವುಗಳು ಮತ್ತು ಸ್ಯೂಡೋಸ್ಟೆಮ್ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಆಹಾರದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಹೆಚ್ಚಿನ ಅಂಶವನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಬಾಳೆ ಹೂವು ಶುಗರ್​ ನಿರ್ವಹಣೆಯಲ್ಲಿ ಉಪಯುಕ್ತವೆಂದು ಪರಿಗಣಿಸಲಾಗಿದೆ.

ಬಾಳೆ ಹೂವಿನ ಇತರ ಲಾಭಗಳು:

  • ಬಾಳೆಹೂವನ್ನು ಸೇವಿಸುವುದರಿಂದ ದೇಹಕ್ಕೆ ಸರಿಯಾದ ಪ್ರಮಾಣದ ಕಬ್ಬಿಣಾಂಶ ಲಭಿಸುತ್ತದೆ. ದೇಹದಲ್ಲಿ ರಕ್ತವನ್ನು ಹೆಚ್ಚಿಸುತ್ತದೆ.
  • ಬಾಳೆಹೂವಿನ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕೂಡ ಹೆಚ್ಚುತ್ತದೆ.
  • ಬಾಳೆಹೂವು ಇನ್ಸುಲಿನ್ ಅನ್ನು ನಿಯಂತ್ರಣ ಮಾಡುತ್ತದೆ. ಆದ್ದರಿಂದ ಇದರ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.
  • ಬಾಳೆಹಣ್ಣಿನ ಹೂವಿನಿಂದ ತಯಾರಿಸಿದ ಭಕ್ಷ್ಯಗಳನ್ನು ತಿನ್ನುವ ಮೂಲಕ, ನೀವು ಒತ್ತಡ ಮತ್ತು ಆತಂಕವನ್ನು ಹೋಗಲಾಡಿಸಬಹುದು. ಏಕೆಂದರೆ, ಇದು ದೇಹಕ್ಕೆ ಖಿನ್ನತೆಯ ಶಮನಕಾರಿಯಾಗಿ ಕಾರ್ಯನಿರ್ವಹಿಸುವ ಸರಿಯಾದ ಪ್ರಮಾಣದ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ.
  • ಈ ಹೂವಿನ ಸೇವನೆಯು ಹೊಟ್ಟೆಗೆ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಸುಲಭವಾಗಿ ಜೀರ್ಣವಾಗುತ್ತದೆ.
  • ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಬಾಳೆಹೂವನ್ನು ಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಬಾಳೆ ಹೂವನ್ನು ಸೇವಿಸೋದು ಹೇಗೆ?

ಬಾಳೆಹಣ್ಣಿನ ಹೂವುಗಳನ್ನು ಹಸಿಯಾಗಿಯೂ ತಿನ್ನಬಹುದು. ಏಕೆಂದರೆ ಅವು ಮೃದು ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಆದ್ದರಿಂದ ಅವುಗಳನ್ನು ಹಸಿಯಾಗಿ ತಿನ್ನುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇದಲ್ಲದೆ, ನೀವು ಬಾಳೆ ಹೂವುಗಳಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಸಹ ಮಾಡಬಹುದು. ಬಾಳೆ ಹೂವಿನ ತರಕಾರಿ, ಇದನ್ನು ಡ್ರೈ ಮತ್ತು ಗ್ರೇವಿ ಎರಡೂ ಮಾಡಬಹುದು. ಇದರ ಅಡುಗೆ ಟೇಸ್ಟಿ ಮತ್ತು ಪೌಷ್ಟಿಕ ಅಂಶದಿಂದ ಕೂಡಿರುತ್ತದೆ. ನೀವು ಬಾಳೆಹಣ್ಣಿನ ಹೂಗಳನ್ನು ಸಲಾಡ್ ಆಗಿ ತಿನ್ನಬಹುದು. ಇದಲ್ಲದೇ ಈ ಹೂವನ್ನು ಅರೆದು ಚಟ್ನಿ ಕೂಡ ಮಾಡಿ ತಿನ್ನಬಹುದು.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ಗಳನ್ನು ವೀಕ್ಷಿಸಬಹುದು:

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.