ಕರ್ನಾಟಕ

karnataka

ETV Bharat / health

ಒಟ್ಟಿಗೆ ಈ ಆಹಾರ ಸೇವಿಸಿದರೆ "ತೂಕ" ಹೆಚ್ಚಾಗುತ್ತೆ ಹುಷಾರ್​​​: ತಜ್ಞರು ಮಾಡಿರುವ ಶಿಫಾರಸುಗಳಿವು! - WEIGHT LOSS AVOID FOODS

ತೂಕ ಇಳಿಸಿಕೊಳ್ಳಬೇಕಾ ಹಾಗಾದರೆ ವೈದ್ಯರು ಶಿಫಾರಸು ಮಾಡುವ ಈ ಆಹಾರ ಸಂಯೋಜನೆಗಳನ್ನು ತಪ್ಪಿಸಿ. ಹೀಗಿವೆ ವೈದ್ಯರು ನೀಡಿರುವ ಸಲಹೆಗಳು

If you eat this food together, "weight" will increase. Be careful: the recommendations made by experts!
ಒಟ್ಟಿಗೆ ಈ ಆಹಾರ ಸೇವಿಸಿದರೆ "ತೂಕ" ಹೆಚ್ಚಾಗುತ್ತೆ ಹುಷಾರ್​​​: ತಜ್ಞರು ಮಾಡಿರುವ ಶಿಫಾರಸುಗಳಿವು! (ETV Bharat)

By ETV Bharat Health Team

Published : Nov 2, 2024, 10:16 AM IST

Avoid These Food Combinations for Weight Loss :ಇತ್ತೀಚಿನ ದಿನಗಳಲ್ಲಿ ವಯಸ್ಸನ್ನು ಲೆಕ್ಕಿಸದೇ ಅನೇಕ ಜನರು ಅಧಿಕ ತೂಕ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಬದಲಾದ ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಒತ್ತಡ, ನಿದ್ರೆಯ ಕೊರತೆ, ಕಚೇರಿಗಳಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ತೂಕ ಹೆಚ್ಚಾಗುವುದಕ್ಕೆ ಪ್ರಮುಖ ಕಾರಣಗಳಾಗಿವೆ. ಇನ್ನು ಅಧಿಕ ತೂಕವು ಹೃದ್ರೋಗ, ಜೀರ್ಣಕಾರಿ ಮತ್ತು ಯಕೃತ್ತಿನ ಸಮಸ್ಯೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಅಧಿಕ ತೂಕ ಹೊಂದಿರುವ ಜನರು ತೂಕ ಇಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.

ಹೆಚ್ಚಿನ ತೂಕವನ್ನು ತೊಡೆದುಹಾಕಲು ಅನೇಕ ಜನರು ಆಹಾರ ಮತ್ತು ವ್ಯಾಯಾಮ ಮಾಡುತ್ತಾರೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನೀವು ತೆಗೆದುಕೊಳ್ಳುವ ಕೆಲವು ಪದಾರ್ಥಗಳನ್ನು ಒಟ್ಟಿಗೆ ತೆಗೆದುಕೊಳ್ಳಬಾರದು ಎಂದುಖ್ಯಾತ ಪೌಷ್ಟಿಕತಜ್ಞ ಡಾ.ಲಹರಿ ಸುರಪನೇನಿಹೇಳಿದ್ದಾರೆ. ಆಗ ಮಾತ್ರ ನೀವು ಆರೋಗ್ಯದ ಜೊತೆಗೆ ತೂಕವನ್ನು ಕಳೆದುಕೊಳ್ಳಬಹುದು. ಹಾಗಾದರೆ ತೂಕ ಇಳಿಸಿಕೊಳ್ಳಲು ಯಾವ ಆಹಾರಗಳ ಸಂಯೋಜನೆಯನ್ನು ತೆಗೆದುಕೊಳ್ಳಬಾರದು ಎಂಬುದನ್ನು ಈಗ ತಿಳಿದುಕೊಳ್ಳೋಣ.

ಓಟ್ಸ್+ಡ್ರೈ ಫ್ರೂಟ್ಸ್:ತೂಕ ಇಳಿಸಿಕೊಳ್ಳಲು ಬಯಸುವ ಹೆಚ್ಚಿನವರು ಓಟ್ಸ್ ಅನ್ನು ನಿಯಮಿತವಾಗಿ ಸೇವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಕ್ಕರೆಯ ಪ್ರಮಾಣ ಕಡಿಮೆ ಇರುವುದು ಎಂದು ಹೇಳಬಹುದು. ಆದಾಗ್ಯೂ, ಕೆಲವರು ಪ್ರೋಟೀನ್‌ಗಾಗಿ ಓಟ್ಸ್ ಮತ್ತು ಒಣ ಹಣ್ಣುಗಳನ್ನು ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನು ಸೇವಿಸಿ ತೂಕ ಇಳಿಸಿಕೊಳ್ಳುವ ಬದಲು ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಪೌಷ್ಟಿಕತಜ್ಞ ಡಾ.ಲಹರಿ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಬಯಸುವವರು ಈ ಸಂಯೋಜನೆಯನ್ನು ಖಂಡಿತಾ ತಪ್ಪಿಸಬೇಕು ಎಂದು ಅವರು ಹೇಳಿದ್ದಾರೆ.

ಅಕ್ಕಿ+ ಆಲೂಗಡ್ಡೆ:ಇದು ತೂಕ ಇಳಿಸಿಕೊಳ್ಳಲು ಬಯಸುವವರು ಸೇವಿಸಬಾರದಾಗಿರುವ ಮತ್ತೊಂದು ಆಹಾರ ಸಂಯೋಜನೆಯಾಗಿದೆ. ಏಕೆಂದರೆ ಆಲೂಗಡ್ಡೆಯಲ್ಲಿ ಪಿಷ್ಟವು ಅಧಿಕವಾಗಿರುತ್ತದೆ. ಹಾಗಾಗಿ ಇವುಗಳನ್ನು ಅನ್ನದೊಂದಿಗೆ ಸೇರಿಸಿ ಸೇವಿಸಿದಾಗ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಈ ಎರಡನ್ನು ಒಟ್ಟಿಗೆ ತೆಗೆದುಕೊಳ್ಳದಿರುವುದು ಉತ್ತಮ ಎನ್ನುತ್ತಾರೆ ತಜ್ಞರು. ಇವುಗಳನ್ನು ಸಣ್ಣ ಪ್ರಮಾಣದಲ್ಲಿ ಪ್ರತ್ಯೇಕವಾಗಿ ಸೇವಿಸಿದಾಗ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಸೂಚಿಸಲಾಗಿದೆ.

ತಿಂಡಿಗಳು+ಪಾನೀಯಗಳು: ಹಲವರಿಗೆ ತಿಂಡಿ ತಿಂದು ಸಂಜೆ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಅದೇ.. ಟೀ, ಕಾಫಿ ಅಭ್ಯಾಸವಿಲ್ಲದ ಕೆಲವರು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಆದರೆ, ಈ ಕಾಂಬಿನೇಷನ್ ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾರೆ ಡಾ.ಲಹರಿ. ಏಕೆಂದರೆ ಇವುಗಳಲ್ಲಿರುವ ಕೆಟ್ಟ ಕೊಬ್ಬುಗಳು ಮತ್ತು ಹೆಚ್ಚಿನ ಸಕ್ಕರೆ ಅಂಶವು ದೇಹದ ತೂಕವನ್ನು ಹೆಚ್ಚಿಸಿ ಅಜೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಈ ಸಂಯೋಜನೆಯಿಂದ ದೂರವಿರುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಇವುಗಳನ್ನು ತಪ್ಪಿಸಿ!:ಈ ಆಹಾರ ಸಂಯೋಜನೆಗಳನ್ನು ತಪ್ಪಿಸುವುದು ಮಾತ್ರವಲ್ಲದೇ ಇತರ ಕೆಲವು ಆಹಾರಗಳನ್ನು ತಪ್ಪಿಸುವುದರಿಂದ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಬಹುದು. ಜಂಕ್ ಫುಡ್, ಎಣ್ಣೆಯುಕ್ತ ಆಹಾರ, ಕರಿದ ಪದಾರ್ಥಗಳು, ಸಕ್ಕರೆ ಹೆಚ್ಚಿರುವ ಆಹಾರಗಳು, ಪಾನೀಯಗಳು ಮತ್ತು ಟ್ರಾನ್ಸ್ ಕೊಬ್ಬು ಹೆಚ್ಚಿರುವ ಆಹಾರಗಳಿಂದ ಆದಷ್ಟು ದೂರವಿರುವುದು ಉತ್ತಮ ಎನ್ನುತ್ತಾರೆ ಖ್ಯಾತ ಪೌಷ್ಟಿಕತಜ್ಞ ಡಾ.ಸುರಪನೇನಿ ಲಹರಿ.

ಓದುಗರು ಗಮನಕ್ಕೆ:ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ABOUT THE AUTHOR

...view details