ICMR's 25 Health Tips:ಹೊಸ ವರ್ಷದಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (NIN) 25 ಆರೋಗ್ಯ ಸಲಹೆಗಳ ಸಮಗ್ರ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಈ ಟಿಪ್ಸ್ಗಳನ್ನು ಪಾಲಿಸುವ ಮೂಲಕ ನೀವು ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮದ ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸಬಹುದಾಗಿದೆ.
ಐಸಿಎಂಆರ್ & ಎನ್ಐಎನ್ ನೀಡಿದ ಹೆಲ್ತ್ ಟಿಪ್ಸ್:
1. ಆಹಾರ ಪದ್ಧತಿ:
- ವೈವಿಧ್ಯಮಯ ಆಹಾರಕ್ರಮ ಅನುಸರಿಸಿ: ಎಲ್ಲಾ ಅಗತ್ಯ ಪೋಷಕಾಂಶಗಳ ಸೇವನೆ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಆಹಾರಕ್ರಮದಲ್ಲಿ ವೈವಿಧ್ಯಮಯ ಆಗಿರಿಸಬೇಕಾಗುತ್ತದೆ.
- ದೇಹವನ್ನು ಹೈಡ್ರೇಟೆಡ್ ಆಗಿರಿಸಿ:ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯಬೇಕು.
- ಋತುಮಾನಗಳಲ್ಲಿ ಲಭಿಸುವ ಆಹಾರಗಳನ್ನು ಆಯ್ಕೆ ಮಾಡಿ: ಋತುಮಾನಗಳಲ್ಲಿ ಲಭಿಸುವ ಅಥವಾ ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚು ಪೌಷ್ಟಿಕ ಹಾಗೂ ನೈಸರ್ಗಿಕವಾಗಿವೆ. ಇವುಗಳನ್ನು ಮಿಸ್ ಮಾಡದೇ ಸೇವಿಸಿ.
- ಕೆಫೀನ್ ಮಿತಿವಾಗಿ ಸೇವಿಸಿ: ಕೆಫೀನ್ ಹೆಚ್ಚು ಸೇವಿಸುವ ಬದಲು ಪೌಷ್ಟಿಕಾಂಶವಿರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
- ನೇರವಾಗಿ ಪ್ರೋಟೀನ್ ಸೇವಿಸಿ:ನಿಮ್ಮ ಊಟದಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ಕಡಿಮೆ ಕೊಬ್ಬಿನ ನೇರ ಮಾಂಸವನ್ನು ಆಯ್ಕೆ ಮಾಡಿ.
- ಉಪ್ಪಿನ ಬಳಕೆ ಕಡಿಮೆ ಮಾಡಿ:ನಿಮ್ಮ ಆಹಾರದ ಸುವಾಸನೆ ಹೆಚ್ಚಿಸಲು ಲವಂಗ, ದಾಲ್ಚಿನ್ನಿ ಹಾಗೂ ಕಾಳುಮೆಣಸಿನಂತಹ ಮಸಾಲೆಗಳನ್ನು ಬಳಕೆ ಮಾಡಿ.
- ಸಕ್ಕರೆ ಸೇವನೆ ಕಡಿಮೆ ಮಾಡಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆಯನ್ನು ಸೇವಿಸುವುದನ್ನು ಮಿತಗೊಳಿಸುವುದು ಮುಖ್ಯ.
- ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ:ನೈಸರ್ಗಿಕ, ಕನಿಷ್ಠ ಸಂಸ್ಕರಿಸಿದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
- ವಿವಿಧ ಎಣ್ಣೆಗಳನ್ನು ಬಳಕೆ ಮಾಡಿ:ಸಮತೋಲಿತ ಪೋಷಣೆಗಾಗಿ ವಿವಿಧ ರೀತಿಯ ಎಣ್ಣೆಗಳನ್ನು ಮಿತವಾಗಿ ಬಳಕೆ ಮಾಡಿ.
- ಜ್ಯೂಸ್ಗಳಿಗಿಂತ ತಾಜಾ ಹಣ್ಣುಗಳು ಸೇವಿಸಿ: ಜ್ಯೂಸ್ಗಳನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬಹುದು. ಇವುಗಳಲ್ಲಿ ಉತ್ತಮವಾದ ಫೈಬರ್ ಹಾಗೂ ಪೋಷಕಾಂಶಗಳು ಇರುತ್ತವೆ.
2. ಆಹಾರ ತಯಾರಿಕೆ & ನೈರ್ಮಲ್ಯ
- ಆಹಾರದ ಉತ್ಪನ್ನಗಳ ಮೇಲೆ ಲೇಬಲ್ ಓದಿ: ಆಹಾರದ ಉತ್ಪನ್ನಗಳ ಮೇಲೆ ಲೇಬಲ್ನಲ್ಲಿರುವ ಅಂಶಗಳನ್ನು ಮಿಸ್ ಮಾಡದೇ ಓದಬೇಕಾಗುತ್ತದೆ. ಪ್ಯಾಕ್ ಮಾಡಿದ ಆಹಾರಗಳ ಪೌಷ್ಟಿಕಾಂಶದ ಅಂಶವನ್ನು ಅರ್ಥಮಾಡಿಕೊಳ್ಳಿ.
- ಕಚ್ಚಾ ಧಾನ್ಯಗಳನ್ನು ಸೇವಿಸಿ: ಪಾಲಿಶ್ ಮಾಡದ ಧಾನ್ಯಗಳು ಸಂಸ್ಕರಿಸಿದ ಆಹಾರಗಳಿಗಿಂತ ಆರೋಗ್ಯಕರವಾಗಿವೆ.
- ಮನೆಯಲ್ಲಿ ಬೇಯಿಸಿದ ಊಟಕ್ಕೆ ಆದ್ಯತೆ ಕೊಡಿ: ಮನೆಯಿಂದ ಹೊರಗೆ ದೊರೆಯುವ ಆಹಾರಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ.
- ಕಚ್ಚಾ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕಿಸಿ: ಉತ್ತಮ ಆರೋಗ್ಯದ ಸುರಕ್ಷತೆಗಾಗಿ ಕಚ್ಚಾ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕಿಸಬೇಕು.
- ಹುದುಗಿಸಿದ ಆಹಾರಗಳನ್ನು ಆಯ್ಕೆ ಮಾಡಿ:ಹುದುಗಿಸಿದ ಆಹಾರಗಳನ್ನು ಆರಿಸಿಕೊಳ್ಳಿ. ಇವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.