ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹಾರ್ಮೋನ್ ಬದಲಾವಣೆಗಳಿಂದ ಮಹಿಳೆಯರು ಅನಗತ್ಯ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಪರಿಣಾಮ ತುಟಿ ಮೇಲೆ ಮತ್ತು ಗದ್ದದ ಮೇಲೆ ಕೂದಲು ಬೆಳೆಯುತ್ತಿದೆ. ಇದು ಅವರ ಸೌಂದರ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ಇದನ್ನು ತೆಗೆಯುವುದು ಅನೇಕ ಬಾರಿ ಕಷ್ಟವಾಗಿ ಪರಿಣಮಿಸುತ್ತದೆ. ವಾಕ್ಸಿಂಗ್ ಮೊರೆ ಹೋದರೂ ಇದು ಸುಲಭದ ಪ್ರಯಾಣವಲ್ಲ. ಇದರಿಂದ ಅಲರ್ಜಿ, ತ್ವಚೆಯಲ್ಲಿ ದದ್ದು, ಕೆರೆತ ಮತ್ತು ನೋವು ಉಂಟಾಗುತ್ತದೆ. ಈ ರೀತಿ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ರೆ ಅದಕ್ಕೆ ಪರಿಹಾರ ಮಾರ್ಗವಿದೆ. ಈ ನೈಸರ್ಗಿಕ ವಿಧಾನಗಳ ಮೂಲಕ ಈ ಕೂದಲಿನ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಬಹುದು.
ಸಕ್ಕರೆ ಮತ್ತು ನಿಂಬೆ ಜ್ಯೂಸ್: ಎರಡು ಟೇಬಲ್ ಸ್ಪೂನ್ ಸಕ್ಕರೆಗೆ 10 ಟೇಬಲ್ ಸ್ಪೂನ್ ನಿಂಬೆ ರಸವನ್ನು ಬೌಲ್ಗೆ ಹಾಕಿ. ಇದನ್ನು ಚೆನ್ನಾಗಿ ಕುದಿಸಿ, ಅದು ಗಟ್ಟಿಯಾಗುವಂತೆ ಮಾಡಿ. ತಣ್ಣಗೆ ಆದ ಬಳಿಕ ಇದನ್ನು ಮುಖದಲ್ಲಿರುವ ಕೂದಲಿನ ಪ್ರದೇಶಕ್ಕೆ ಹಚ್ಚಿ. 20 ನಿಮಿಷದ ನಂತರ ವೃತ್ತಾಕಾರವಾಗಿ ಉಜ್ಜಿ, ತೆಗೆಯಿರಿ.
ಕಾರ್ನ್ಸ್ಟ್ರಾಚ್: ಇದಕ್ಕೆ ಕೂಡ ಎರಡು ಟೇಬಲ್ಸ್ಪೂನ್ ಸಕ್ಕರೆ ಮತ್ತು ನಿಂಬೆ ರಸವನ್ನು ಬೆರೆಸಿ ಅದಕ್ಕೆ ಜೇನುತುಪ್ಪ ಬೆರಸಿ ಮಿಕ್ಸ್ ಮಾಡಿ. ಅದನ್ನು ಐದು ನಿಮಿಷ ಬಿಸಿ, ಮಾಡಿ ದಪ್ಪ ಹದಕ್ಕೆ ರೂಪಿಸಿ. ಬಳಿಕ ತಣ್ಣಗಾದ ಕಾರ್ನ್ಸ್ಟ್ರಾಚ್ ಅನ್ನು ಕೂದಲಿರುವ ಕಡೆ ಹಚ್ಚಿ, 30 ನಿಮಿಷಗಳ ಬಳಿಕ ವೃತ್ತಾಕಾರವಾಗಿ ಉಜ್ಜಿ, ಹತ್ತಿ ಬಟ್ಟೆಯಿಂದ ತೆಗೆಯಿರಿ.
ಬಾಳೆಹಣ್ಣಿನ ಜೊತೆಗೆ ಓಟ್ಮಿಲ್: ಕಳಿತ ಬಾಳೆ ಹಣ್ಣಿಗೆ ಎರಡು ಟೇಬಲ್ಸ್ಪೂನ್ ಓಟ್ಮಿಲ್ ಹಾಕಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿ. ಬಳಿಕ ಕೂದಲಿರುವ ಸ್ಥಳದಲ್ಲಿ ಹಚ್ಚಿ, 15 ನಿಮಿಷ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ.
ಅರಿಶಿಣ ಪೇಸ್ಟ್: ಅರಿಶಿಣವನ್ನು ಒಂದು ಬಟ್ಟಲಿಗೆ ಹಾಕಿ, ಅದಕ್ಕೆ ಸ್ವಲ್ಪ ನೀರು ಅಥವಾ ಹಾಲನ್ನು ಹಾಕಿ ಪೇಸ್ಟ್ ರೀತಿ ಮಾಡಿ. ಬಳಿಕ ಇದನ್ನು ಕೂದಲಿರುವ ಸ್ಥಳದಲ್ಲಿ ಚೆನ್ನಾಗಿ ಹಚ್ಚಿ, ಉಜ್ಜಿ. 20 ನಿಮಿಷದ ಬಳಿಕ ಬೆಚ್ಚಗಿನ ನೀರಿನ ಸಹಾಯದಿಂದ ಮುಖ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.
2017ರಲ್ಲಿ ಪ್ರಕಟವಾದ ಜರ್ನಲ್ ಆಫ್ ಡರ್ಮಾಟಾಲಾಜಿ ಅಂಡ್ ಕಾಸ್ಮೆಟಿಕ್ ಡರ್ಮಾಟಾಲಾಜಿಯಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ, ಅರಿಶಿಣದ ಪ್ಯಾಕ್ ಅನಗತ್ಯ ಕೂದಲನ್ನು ಪರಿಣಾಮಕಾರಿಯಾಗಿ ತೆಗೆಯಲು ಕಾರ್ಯನಿರ್ವಹಿಸುತ್ತದೆ. ದೆಹಲಿಯ ಜಾಮಿಯಾ ಹಮದ್ರ್ ಯೂನಿವರ್ಸಿಟಿಯ ಪ್ರಖ್ಯಾತ ಡರ್ಮಾಟಾಲಾಜಿಸ್ಟ್ ಡಾ ಅಮಿತ್ ಸಿಂಗ್ ಕೂಡ ಈ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಅರಿಶಿಣದಲ್ಲಿರುವ ಉರಿಯೂತ ವಿರೋಧಿ ಗುಣವು ಅನಗತ್ಯ ಕೂದಲು ತೆಗೆಯುವಲ್ಲಿ ಸಹಾಯ ಮಾಡಲಿದೆ ಎನ್ನುತ್ತಾರೆ ಅವರು.
ಕಡಲೆಕಾಯಿ ಬೀಜ: ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ, ನಿಂಬೆ ರಸ ಹಾಕಿ ಅದಕ್ಕೆ 5 ಚಮಚ ಆಲೂಗಡ್ಡೆ ರಸವನ್ನು ಸೇರಿಸಿ, ಬಳಿಕ ರಾತ್ರಿ ನೆನಸಿದ ಕಡಲೆಕಾಯಿ ಬೀಜವನ್ನು ಸೇರಿಸಿ, ಪೇಸ್ಟ್ ಮಾಡಿ. ಎಲ್ಲವನ್ನು ಚೆನ್ನಾಗಿ ಕಲಿಸಿ, ಮುಖಕ್ಕೆ ಮಸಾಜ್ ಮಾಡಿ. 30 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.
ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬದ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ:ಚಪಾತಿ ಬದಲು ಗರಿಗರಿಯಾದ ಜೋಳದ ರೊಟ್ಟಿ ತಿನ್ನಿ; ಕೆಲವೇ ದಿನಗಳಲ್ಲಿ ಬಳಕುವ ಬಳ್ಳಿಯಂತಾಗಿ!