ಹೈದರಾಬಾದ್: ಮೂತ್ರಪಿಂಡ ಎಂಬುದು ದೇಹ ಪ್ರಮುಖ ಅಂಗವಾಗಿದ್ದು, ಇದಕ್ಕೆ ಹಾನಿಯಾದರೆ, ಜೀವಕ್ಕೆ ಕುತ್ತಾಗುತ್ತದೆ. ದೇಹದ ರಕ್ತ ಶುದ್ಧೀಕರಣ ಮತ್ತು ತ್ಯಾಜ್ಯ ಹೊರ ಹಾಕಲು ಇದು ಅಗತ್ಯವಾಗಿದೆ. ಕಿಡ್ನಿ ಸರಿಯಾಗಿ ಕೆಲಸ ಮಾಡಿದ್ದಲ್ಲಿ ಮಾತ್ರ ಇತರ ಅಂಗಾಂಗಗಳು ಉತ್ತಮವಾಗಿರುತ್ತದೆ. ಇಲ್ಲದೇ ಹೋದಲ್ಲಿ ಅಪಾಯ. ಮೂತ್ರಪಿಂಡ ನಷ್ಟವಾದಲ್ಲಿ ಕಾಲಿನ ಊತ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಎಚ್ಚರವಹಿಸುವುದು ಅವಶ್ಯಕ. ಮೂತ್ರಪಿಂಡದ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೆಲವು ಆಹಾರಗಳು ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಕಿಡ್ನಿಗೆ ಆರೋಗ್ಯ ಕಾಪಾಡುವ ಆಹಾರಗಳಿವು
ನಿಂಬೆ ನೀರು: ತಜ್ಞರು ಹೇಳುವಂತೆ ನಿಂಬೆ ಜ್ಯೂಸ್ ಯೂರಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಮಲಿನ ಅಂಶ ಹೊರ ಹೋಗಿ, ಕಿಡ್ನಿ ಆರೋಗ್ಯ ಸುಧಾರಣೆಯಾಗುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಮೂತ್ರಪಿಂಡದಲ್ಲಿ ಕಲ್ಲು ರೂಪುಗೊಳ್ಳುವುದನ್ನು ತಪ್ಪಿಸುತ್ತದೆ.
ಕ್ಯಾನ್ಬೆರ್ರಿಸ್: ತಜ್ಞರು ಹೇಳುವಂತೆ ಇದು ಕೂಡ ಮೂತ್ರಪಿಂಡ ಶುದ್ದವಾಗಿರಿಸಲು ಇದು ಪರಿಣಾಮಕಾರಿಯಾಗಿದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ಸ್, ಪ್ರೊಂಥೋಸೈನಿಡಿಯನ್ಸ್ ಕಿಡ್ನಿಯನ್ನು ಬ್ಯಾಕ್ಟೀರಿಯಾ ಬೆಳವಣಿಗೆಯಿಂದ ರಕ್ಷಿಸುತ್ತದೆ. ಜೊತೆಗೆ ಸೋಂಕಿನಿಂದ ರಕ್ಷಿಸಿ, ಮೂತ್ರ ಸಂಬಂಧಿ ಸೋಂಕು ತಡೆಯುತ್ತದೆ.
ಹಸಿರು ತರಕಾರಿ - ಸೊಪ್ಪು: ಹಸಿರು ಆಹಾರ ಪದಾರ್ಥಗಳಲ್ಲಿ ಖನಿಜಾಂಶ ಮತ್ತು ಆ್ಯಂಟಿ ಆಕ್ಸಿಡೆಂಟ್ ಇದೆ. ವಿಶೇಷವಾಗಿ ಕಾಲೆ, ಪಾಲಕ್, ಲೆಟ್ಯೂಸ್ನಲ್ಲಿ ಮೂತ್ರಪಿಂಡದ ಆರೋಗ್ಯ ಹೆಚ್ಚುತ್ತದೆ. ಜೊತೆಗೆ ಇದರಲ್ಲಿ ಮೆಗ್ನಿಶಿಯಂ ಇದ್ದು, ಇದು ಕಿಡ್ನಿ ಸ್ಟೋನ್ ಆಗುವುದನ್ನು ತಡೆಯುತ್ತದೆ.
ಶುಂಠಿ: ಊರಿಯೂತ ಗುಣ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳು ಇದರಲ್ಲಿದ್ದು, ಇದು ಮೂತ್ರಪಿಂಡದಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಊರಿಯೂತವನ್ನು ಕಡಿಮೆ ಮಾಡಿ, ಮೂತ್ರಪಿಂಡ ನಿರ್ವಹಣೆ ಮಾಡುತ್ತದೆ. ಜೊತೆಗೆ ರಕ್ತದ ಪರಿಚಲನೆಯನ್ನು ಸರಳಗೊಳಿಸುತ್ತದೆ.