ಕರ್ನಾಟಕ

karnataka

ETV Bharat / health

ಮನೆಯಲ್ಲಿ ನೊಣಗಳ ಕಾಟ ಹೆಚ್ಚಾಗಿದೆಯೇ?: ಹೀಗೆ ಮಾಡಿದ್ರೆ ಖಂಡಿತಾ NOಣ! - Tips To Get Rid Of Houseflies - TIPS TO GET RID OF HOUSEFLIES

ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ನೊಣಗಳ ಕಾಟ ಕಡಿಮೆಯಾಗುತ್ತಿಲ್ಲ ಎಂಬುದು ಹಲವರ ಗೋಳು. ಆದರೆ, ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದಲೇ ನೀವು ಈ ನೊಣಗಳಿಂದ ಬಚಾವಾಗಬಹುದು.

ನೊಣಗಳ ಕಾಟ
ನೊಣಗಳ ಕಾಟ (ETV Bharat)

By ETV Bharat Karnataka Team

Published : Jul 2, 2024, 10:28 AM IST

ಮಳೆಗಾಲ ಬಂತೆಂದರೆ ಸಾಕು, ಮನೆಗಳಲ್ಲಿ ನೊಣಗಳೇ ನೊಣಗಳು. ಅಡುಗೆ ಮನೆ, ಸ್ನಾನಗೃಹ, ಹಾಲ್ ಹೀಗೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತವೆ. ತಿನ್ನುವ ಆಹಾರದ ಮೇಲೂ ಕುಳಿತುಕೊಂಡು ಕಿರಿಕಿರಿ ಉಂಟುಮಾಡುತ್ತವೆ. ನೊಣಗಳು ಕುಳಿತ ಆಹಾರ ಸೇವನೆಯಿಂದ ಕಾಲರಾ, ಭೇದಿಯಂತಹ ಅನೇಕ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಆದಾಗ್ಯೂ, ಕೆಲವರು ಈ ನೊಣಗಳನ್ನು ಹಿಮ್ಮೆಟ್ಟಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಸ್ಪ್ರೇಗಳನ್ನು ಬಳಸುತ್ತಾರೆ. ಆದರೆ ನೆನಪಿರಲಿ, ಅತಿಯಾದ ರಾಸಾಯನಿಕ ಸ್ಪ್ರೇ ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದಲೂ ಆರೋಗ್ಯ ಸಮಸ್ಯೆಗಳು ಎದುರಾಗಬಹುದು!. ಹಾಗಾಗಿ, ಮನೆಯಲ್ಲೇ ಸಿಗುವ ನೈಸರ್ಗಿಕ ವಸ್ತುಗಳಿಂದ ನೊಣ ಮತ್ತು ಸೊಳ್ಳೆಗಳನ್ನು ಸುಲಭವಾಗಿ ತೊಡೆದು ಹಾಕಬಹುದು.

ಉಪ್ಪು ನೀರು:ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ತುಂಬಿಸಿ ಅದಕ್ಕೆ ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವ ಸಿಂಪಡಿಸಿ. ಬಳಿಕ ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ಒರೆಸಿದರೂ ಉತ್ತಮ ಫಲಿತಾಂಶ ಸಿಗುತ್ತದೆ.

ಕರ್ಪೂರ ಪುಡಿ:ಆರತಿಗೆ ಬಳಸುವ ಕರ್ಪೂರದ ಉಂಡೆಗಳನ್ನು ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿ. ನೊಣಗಳು ಕಾಣಿಸುವ ಸ್ಥಳಗಳಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಒಂದೇ ಒಂದು ನೊಣವೂ ಕಾಣಿಸುವುದಿಲ್ಲ!. 2013ರಲ್ಲಿ 'ಜರ್ನಲ್ ಆಫ್ ಎಂಟಮಾಲಜಿ'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೊಣಗಳನ್ನು ಹಿಮ್ಮೆಟ್ಟಿಸಲು ಕರ್ಪೂರ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕರ್ಪೂರದ ಪುಡಿ ಎರಚಿದ ಜಾಗದಲ್ಲಿ ನೊಣಗಳ ಸಂಖ್ಯೆ ಗಣನೀಯವಾಗಿ ತಗ್ಗಿರುವುದು ಕೂಡ ಸಂಶೋಧನೆಯಲ್ಲಿ ಗೊತ್ತಾಗಿದೆ. ಈ ಸಂಶೋಧನೆಯಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರೂ ಭಾಗಿಯಾಗಿದ್ದರು.

ತುಳಸಿ ಎಲೆಯ ಪೇಸ್ಟ್:ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೀರಿನೊಂದಿಗೆ ಬೆರೆಸಿ ಮತ್ತು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ದಿನಕ್ಕೆರಡು ಬಾರಿ ಸಿಂಪಡಿಸಿ. ಹೀಗೆ ಮಾಡಿದರೆ ನೊಣಗಳು ಬರುವುದೇ ಇಲ್ಲ.

ದಾಲ್ಚಿನಿ ಪುಡಿ: ದಾಲ್ಚಿನಿ ನೊಣಗಳನ್ನು ಹಿಮ್ಮೆಟ್ಟಿಸಲು ತುಂಬಾ ಉಪಯುಕ್ತ. ಮೊದಲು ಕೆಲವು ದಾಲ್ಚಿನಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿ. ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಈ ಪುಡಿಯನ್ನು ಸ್ವಲ್ಪ ಸಿಂಪಡಿಸಿ. ದಾಲ್ಚಿನಿ ಘಾಟಿಗೆ ನೊಣಗಳು ಮನೆಯೊಳಗಡೆ ಪ್ರವೇಶ ಮಾಡಲ್ಲ.

ಹಾಲು ಮತ್ತು ಮೆಣಸು:ಒಂದು ಲೋಟ ಹಾಲಿಗೆ ಒಂದು ಚಮಚ ಕರಿಮೆಣಸು ಮತ್ತು 2 ಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಚಿಕ್ಕ ಪಾತ್ರೆಗೆ ಹಾಕಿಕೊಳ್ಳಿ. ನೊಣಗಳಿರುವ ಸ್ಥಳದಲ್ಲಿ ಆ ಪಾತ್ರೆಯನ್ನು ಇರಿಸಿ. ಅಷ್ಟೇ, ಆ ಪಾತ್ರೆಯೊಳಗೆ ನೊಣಗಳು ಬಿದ್ದು ಸಾಯುತ್ತವೆ.

ವಿನೆಗರ್:ಒಂದು ಬಟ್ಟಲಿನಲ್ಲಿ ಆ್ಯಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀಲಗಿರಿ ಎಣ್ಣೆ ಸೇರಿಸಿ. ನಂತರ ಈ ದ್ರವವನ್ನು ಸ್ಪ್ರೇ ಬಾಟಲಿಗೆ ತುಂಬಿಸಿ, ನೊಣಗಳು ಹೆಚ್ಚಿರುವಲ್ಲಿ ಸಿಂಪಡಿಸಿ. ದಿನಕ್ಕೆರಡು ಬಾರಿ ಸಿಂಪಡಿಸಿದರೆ ಸಾಕು ನೊಣಗಳು ಮನೆಯೊಳಗೆ ಸುಳಿಯುವುದಿಲ್ಲ.

ಬಿರಿಯಾನಿ ಎಲೆಗಳು:ಮನೆಯಲ್ಲಿ ನೊಣಗಳು ಹೆಚ್ಚಾದಾಗ ಎರಡು ಬಿರಿಯಾನಿ ಎಲೆಗಳನ್ನು ಸುಟ್ಟು ಹಾಕಿ. ಈ ಎಲೆಗಳ ಹೊಗೆಯಿಂದಲೂ ನೊಣಗಳು ಓಡಿಹೋಗುತ್ತವೆ.

ಇದನ್ನೂ ಓದಿ:ಕೂದಲು ಕಪ್ಪಾಗಬೇಕೇ? ತ್ವಚೆಯೂ ಹೊಳೆಯಬೇಕೇ? ಆಲೂಗಡ್ಡೆಯ ಹಲವು ಪ್ರಯೋಜನ ತಿಳಿಯಿರಿ - Health Benefits Of Potatoes

ABOUT THE AUTHOR

...view details