ಕರ್ನಾಟಕ

karnataka

ETV Bharat / health

ಕಳೆಗುಂದಿದ ಬಾತ್​ರೂಂ ನಲ್ಲಿಗಳು ಹೊಸದರಂತೆ ಪಳ ಪಳ ಹೊಳೆಯಲು ಇಲ್ಲಿವೆ ಟಿಪ್ಸ್​ - TAPS CLEANING TIPS

ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಲ್ಲಿನ ರಾಸಾಯನಿಕಗಳಿಂದಲೇ ಸ್ಟೈನ್​ಲೆಸ್​​ ಸ್ಟೀಲ್​ ನಲ್ಲಿಗಳನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸಬಹುದಾಗಿದೆ.

How to Clean Stainless Steel Taps Easily in home with household materials
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 23, 2024, 5:20 PM IST

ಹೈದರಾಬಾದ್​: ಬಾತ್​ರೂಂ, ಸಿಂಕ್​ಗಳಲ್ಲಿನ ನಲ್ಲಿಗಳು ನೀರಿನ ಶಾಖ ಸೇರಿ ಇನ್ನಿತರ ಕಾರಣದಿಂದ ದಿನ ಕಳೆದಂತೆ ಕಳೆಗುಂದುತ್ತವೆ. ಇವುಗಳನ್ನು ನಿಯಮಿತವಾಗಿ ಶುಚಿ ಮಾಡಿದರೂ, ಅದರ ಹೊಳಪು ಮಾತ್ರ ಮರೀಚಿಕೆಯಾಗುತ್ತದೆ. ಅದರಲ್ಲಿನ ಕಲೆಗಳನ್ನು ಹೋಗಲಾಡಿಸುವುದು ಅನೇಕ ಬಾರಿ ಸವಾಲಾಗುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಅನೇಕ ಪೌಡರ್​, ಕೆಮಿಕಲ್ಸ್​ ಹಾಕಿದರೂ ಪ್ರಯೋಜನವಾಗುವುದಿಲ್ಲ. ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ಚಿಂತೆ ಬೇಡ. ಮನೆಯಲ್ಲಿ ಸಿಗುವ ವಸ್ತುಗಳಿಂದಲೇ ಅವುಗಳನ್ನು ಸ್ಟೈನ್​ಲೆಸ್​ ಸ್ಟೀಲ್​ ನಲ್ಲಿಗಳನ್ನು ಮಿರಿ ಮಿರಿ ಮಿನುಗುವಂತೆ ಮಾಡಬಹುದು. ಅದಕ್ಕೆ ಮಾಡಬೇಕಾಗಿರುವುದು ಇಷ್ಟೇ.

ನಿಂಬೆ ಹಣ್ಣಿನ ರಸ:ಸಣ್ಣ ಬಟ್ಟಲಿನಲ್ಲಿ ನಿಂಬೆ ರಸವನ್ನು ತೆಗೆದುಕೊಳ್ಳಿ. ಅದಕ್ಕೆ ಒಂದಷ್ಟು ಸರ್ಫ್​​ ಪೌಡರ್​ ಹಾಕಿ ಚೆನ್ನಾಗಿ ಮಿಕ್ಸ್​ ಮಾಡಿ. ಈ ನೀರನ್ನು ಕಳೆಗುಂದಿದ ನಲ್ಲಿಗೆ ಹಾಕಿ ಚೆನ್ನಾಗಿ ಉಚ್ಚಿ, ಐದು ನಿಮಿಷ ಬಿಟ್ಟು ಅದನ್ನು ಶುಚಿ ಮಾಡಿ.

ಟೂತ್​​ಪೇಸ್ಟ್​​: ಹಲ್ಲು ಮಿಂಚುವಂತೆ ಮಾಡುವ ಟೂತ್​ಪೇಸ್ಟ್​ಗಳು ಅನೇಕ ಬಾರಿ ನಲ್ಲಿಗಳ ಹೊಳಪಿಗೂ ಸಹಾಯ ಮಾಡುತ್ತವೆ. ಹಳೆಯ ಬ್ರಶ್​ಗೆ ಟೂತ್​ಪೇಸ್ಟ್​​ ಹಾಕಿ ಅದನ್ನು ಕೊಳೆಯಾದ ನಲ್ಲಿ ಮೇಲೆ ಚೆನ್ನಾಗಿ ಉಚ್ಚಿ. ಇದಾದ ಹತ್ತು ನಿಮಿಷ ಹಾಗೇ ಬಿಟ್ಟು ನೀರಿನಿಂದ ತೊಳೆಯಿರಿ.

ವಿನೆಗರ್​​: ವಿನೆಗರ್​ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಸ್ವಲ್ಪ ನೀರು ಬೆರಸಿ. ಬಳಿಕ ಅದನ್ನು ಸ್ಪಂಜ್​​ ಅಥವಾ ಸ್ಕ್ರಬರ್​ನಿಂದ ಐದು ನಿಮಿಷ ಕಾಲ ತಿಕ್ಕಿ. ಹಾಗೇ ಬಿಡಿ. ಐದು ನಿಮಿಷದ ಬಳಿಕ ಅದನ್ನು ತೊಳೆಯಿರಿ. ಈ ರೀತಿ ವಾರಕ್ಕೆ ಒಮ್ಮೆ ಮಾಡುವುದರಿಂದ ನಲ್ಲಿ ಹೊಸ ರೂಪಾಂತರ ಪಡೆಯಲಿದೆ.

ಬೇಕಿಂಗ್​ ಸೋಡಾ, ನಿಂಬೆ ರಸ: ಮೊದಲಿಗೆ ಎರಡು ಸ್ಪೂನ್​ ಬೇಕಿಂಗ್​ ಸೋಡಾವನ್ನು ಒಂದು ಬಟ್ಟಲಿಗೆ ಹಾಕಿ, ಬಳಿಕ ಅದಕ್ಕೆ ನಿಂಬೆ ರಸ ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ನಲ್ಲಿಗೆ ಹಾಕಿ ನಿಂಬೆ ಹಣ್ಣಿನಿಂದ ತಿಕ್ಕಿ. ಇದರಿಂದ ಶೀಘ್ರದಲ್ಲೇ ಅದರ ಹೊಳಪು ಪಡೆಯಬಹುದು.

ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಲ್ಲಿನ ರಾಸಾಯನಿಕಗಳಿಂದಲೇ ಸ್ಟೇನ್​ಲೆಸ್​​ ಸ್ಟೀಲ್​ ನಲ್ಲಿಗಳನ್ನು ಪರಿಣಾಮಕಾರಿಯಾಗಿ ಶುಚಿಗೊಳಿಸುವಲ್ಲಿ ಸಹಾಯ ಮಾಡುವ ಜೊತೆಗೆ ಅಗ್ಗದ ದರದಲ್ಲಿ ಇವು ನಿಮ್ಮ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ. ಇದರಿಂದ ನಿಮ್ಮ ಮನೆಯ ಸಿಂಕ್​, ಬಾತ್​ರೂಂ ನಲ್ಲಿಗಳು ಪಳ ಪಳ ಹೊಳೆಯುವಂತೆ ಆಗುತ್ತದೆ.

ಇದನ್ನೂ ಓದಿ: ನಾನ್​ವೆಜ್​ಗೆ ಪೈಪೋಟಿ ನೀಡುವ ಸೋಯಾ ಚಂಕ್ಸ್​ ಮಸಾಲಾ ಕರಿ: ಹೀಗೆ ಮಾಡಿದರೆ ಮಟನ್​ಗಿಂತಲೂ ಟೇಸ್ಟ್​ ಜಾಸ್ತಿ!

ABOUT THE AUTHOR

...view details