ಹೈದರಾಬಾದ್: ಇಂದಿನ ಬ್ಯುಸಿ ದಿನಚರಿಯಲ್ಲಿ ಉಳಿದೆಲ್ಲಾ ದೈಹಿಕ ಚಟುವಟಿಕೆಗಳಿಗೆ ಹೋಲಿಕೆ ಮಾಡಿದಾಗ ನಡಿಗೆ ಆರಾಮದಾಯಕ. ಎಲ್ಲ ವಯೋಮಾನದವರು, ಎಲ್ಲಿಯಾದರೂ ಅಭ್ಯಾಸ ಮಾಡಬಹುದಾದ ವ್ಯಾಯಾಮ. ಆದರೂ ಅನೇಕ ಮಂದಿ ಅನೇಕ ಕಾರಣಗಳಿಂದ ಈ ಸರಳ ವ್ಯಾಯಾಮದಿಂದ ಹಿಂದೆ ಸರಿಯುತ್ತಾರೆ. ಇನ್ನು ನಡಿಗೆ ಅಭ್ಯಾಸ ಆರಂಭ ಮಾಡಿದರವರಿಗೆ ದಿನಕ್ಕೆ ಎಷ್ಟು ಹೆಜ್ಜೆ ನಡೆಯುಬೇಕು ಎಂಬ ಗುರಿ ಹೊಂದುವುದು. ಬಹುತೇಕ ಮಂದಿ ದಿನಕ್ಕೆ 10 ಸಾವಿರ ಹೆಜ್ಜೆಗಳ ಗುರಿಯನ್ನು ಹೊಂದಿರುತ್ತಾರೆ. ಆದರೆ, ಇದಕ್ಕಿಂತ ಹೆಚ್ಚಿನ ನಡಿಗೆ ಕೂಡ ಆರೋಗ್ಯಕ್ಕೆ ಒಳ್ಳೆಯದು.
ದೈನಂದಿನ ನಡಿಗೆ ಆರೋಗ್ಯ ಪ್ರಯೋಜನಕಾರಿ:ದಿನಕ್ಕೆ 10 ಸಾವಿರ ಹೆಜ್ಜೆಗಳಷ್ಟು ನಡೆಯುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಒಂದು ವೇಳೆ ನೀವು ದಿನಕ್ಕೆ 10 ಸಾವಿರ ಹೆಜ್ಜೆ ನಡೆಯುತ್ತಿದ್ದೀರಾ ಎಂದರೆ, ಒಂದು ನಿಮಿಷದಲ್ಲಿ ಎಷ್ಟು ಸ್ಟೆಪ್ಗಳನ್ನು ನಡೆಯುತ್ತಿದ್ದೀರಾ ಎಂಬುದರ ಬಗ್ಗೆ ಕೂಡ ಗಮನ ಇರುವುದು ಅವಶ್ಯ ಎಂದು ವಾಕ್ ಆಕ್ಟೀವ್ ಸಂಸ್ಥಾಪಕರು, ಕ್ರೀಡಾ ವಿಜ್ಞಾನಿಯಾಗಿರುವ ಜೊನ್ನ ಹಾಲ್ ತಿಳಿಸಿದ್ದಾರೆ. ಒಂದು ನಿಮಿಷದಲ್ಲಿ 100 ಹೆಜ್ಜೆ ನಡೆಯುವುರಿಂದ ಆರೋಗ್ಯಕ್ಕೆ ಹೆಚ್ಚು ಲಾಭ. ಒಂದು ವೇಳೆ ನಿಮಿಷದಲ್ಲಿ 125-128 ಹೆಜ್ಜೆ ನಡೆಯುತ್ತಿದ್ದೀರಾ ಎಂದರೆ, ಇನ್ನಷ್ಟು ಉತ್ತಮ ಎಂದು ಸಲಹೆ ನೀಡಿದ್ದಾರೆ.
ನಿಮಿಷದಲ್ಲಿ 100 ಹೆಜ್ಜೆಗಳಿಗಿಂತ ಹೆಚ್ಚು ನಡೆಯುವುದು ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡಲಿದೆ ಎಂದು ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ ರಿಸರ್ಚ್ ತಿಳಿಸಿದೆ. ಜೊತೆಗೆ ರೋಗ ನಿಯಂತ್ರ ಮತ್ತು ಆರೋಗ್ಯ ಕಚೇರಿ ತಿಳಿಸುವಂತೆ, ವಯಸ್ಕರರು ವಾರದಲ್ಲಿ ಕನಿಷ್ಠ 150 ನಿಮಿಷ ನಡಿಗೆ ನಡೆಯಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ. ಕಾನ್ಕೋರ್ಡಿಯಾ ಯೂನಿವರ್ಸಿಟಿ ಅಧ್ಯಯನ ತಿಳಿಸುವಂತೆ, ವ್ಯಾಯಾಮ ವ್ಯಕ್ತಿಯ ಹೃದಯ ಬಡಿತವನ್ನು ಶೇ 50 ರಿಂದ 70ರಷ್ಟು ಹೆಚ್ಚಿಸುತ್ತದೆ. ವಾಕಿಂಗ್ ಮಾಡುವ ಸಂದರ್ಭದಲ್ಲಿ ಬಡಿಯುವ ನಿಮ್ಮ ಹೃದಯವೂ ನೀವು ಪರಿಣಾಮಕಾರಿಯಾದ ರೀತಿಯಲ್ಲಿ ವಾಕ್ ಮಾಡುತಿದ್ದೀರಾ ಎಂಬುದನ್ನು ತಿಳಿಸುತ್ತದೆ.
ನಡಿಗೆಯಿಂದಾಗುವ ಪ್ರಯೋಜನ: ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ದೇಹದಲ್ಲಿನ ಗ್ಲುಕೋಸ್ ಮಟ್ಟವನ್ನು ಇದು ನಿಯಂತ್ರಿಸುತ್ತದೆ. ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಕಾಯಿಲೆ ಕಡಿಮೆ ಮಾಡುತ್ತದೆ.