Benefits Of Pista Dry Fruit: ಒಣ ಹಣ್ಣುಗಳು ಆರೋಗ್ಯಕರ ಸ್ನಾಕ್ಸ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಒಣ ಹಣ್ಣುಗಳನ್ನು ಜನರು ತಪ್ಪದೇ ನಿತ್ಯ ಸೇವನೆಗೆ ಮುಂದಾಗುತ್ತಿದ್ದಾರೆ. ಕೆಲವರು ರಾತ್ರಿ ನೆನಸಿ ಬೆಳಗೆ ತಿಂದರೆ, ಮತ್ತೆ ಕೆಲವರು ಸಂಜೆ ಕುರುಕಲಾಗಿ ಬಳಕೆ ಮಾಡುತ್ತಾರೆ. ಡ್ರೈ ಫ್ರೂಟ್ಸ್ನಲ್ಲಿ ಪಿಸ್ತಾಗೆ ವಿಶೇಷ ಸ್ಥಾನವಿದೆ. ಕಾರಣ ರುಚಿ. ಇದರ ಹೊರತಾಗಿ ಇದು ಅನೇಕ ಆರೋಗ್ಯ ಪ್ರಯೋಜನ ಹೊಂದಿದೆ. ದಿನಕ್ಕೆ 10 ರಿಂದ 12 ಪಿಸ್ತಾ ಸೇವನೆ ಮಾಡುವುದರಿಂದ ಒಟ್ಟಾರೆ ಆರೋಗ್ಯಕ್ಕೆ ಲಾಭವಾಗಲಿದೆ.
ಪ್ರಮುಖ ಪೋಷಕಾಂಶ: ಪಿಸ್ತಾದಲ್ಲಿ ಕೂಡ ಇತರ ಡ್ರೈಫ್ರೂಟ್ಸ್ನಲ್ಲಿರುವಂತೆ ಪ್ರೋಟಿನ್, ಫೈಬರ್, ವಿಟಮಿನ್ ಮತ್ತು ಖನಿಜಾಂಶವಿದೆ. ದಿನಕ್ಕೆ 10 ರಿಂದ 12 ಪಿಸ್ತಾ ಸೇವನೆ ಮಾಡುವುದರಿಂದ ಮಿದುಳಿನ ಕಾರ್ಯಾಚರಣೆ ಸುಧಾರಣೆಯಾಗಲಿದೆ. ಹಾಗೆಯೇ ದೇಹದ ಪ್ರತಿರೋಧಕ ವ್ಯವಸ್ಥೆ ಆರೋಗ್ಯಯುತವಾಗಿರುತ್ತದೆ. ಇದರಲ್ಲಿ ವಿಟಮಿನ್ ಬಿ 6 ಹಾಗೂ ಪೋಟಾಶಿಯಂ, ಮೆಗ್ನಿಶಿಯಂ ಮತ್ತು ಆಂಟಿಆಕ್ಸಿಡೆಂಟ್ ಇದ್ದು, ಇದು ಆರೋಗ್ಯವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.
ಹೃದಯಕ್ಕೆ ಉತ್ತಮ: ಆರೋಗ್ಯಯುತ ಕೊಬ್ಬುಗಳು ಇದರಲ್ಲಿ ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಹಾಗೇ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಫಲಿತಾಂಶವಾಗಿ ಹೃದಯ ರೋಗದಿಂದ ದೂರವಿಡುತ್ತದೆ.
ತೂಕ ನಿಯಂತ್ರಣ: ಪಿಸ್ತಾ ಕಡಿಮೆ ಕ್ಯಾಲೋರಿ ಹೊಂದಿದ್ದು, ಇದು ತೂಕವನ್ನು ನಿಯಂತ್ರಣದಲ್ಲಿ ಇಡುತ್ತದೆ. ಇದರಲ್ಲಿನ ಪ್ರೋಟಿನ್ ಮತ್ತು ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುವ ಹಿನ್ನೆಲೆಯಲ್ಲಿ ಹಸಿವು ಮತ್ತು ಅನಿಯಂತ್ರಿತ ಆಹಾರ ಸೇವನೆಗೆ ಮುಂದಾಗಲು ಬಿಡುವುದಿಲ್ಲ.
ರಕ್ತದ ಸಕ್ಕರೆ ಮಟ್ಟ: ಪಿಸ್ತಾದಲ್ಲಿ ಗ್ಲೆಸೆಮಿಕ್ ಸೂಚ್ಯಂಕ ಕಡಿಮೆ ಇದೆ ಹಾಗೂ ಫೈಬರ್ ಮತ್ತು ಆರೋಗ್ಯಯುತ ಕೊಬ್ಬಿದೆ. ಇದನ್ನು ನಿಯಮಿತವಾಗಿ ಸೇವನೆಯಿಂದ ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಪಿಸ್ತಾ ಉತ್ತಮ ಆರೋಗ್ಯಕರ ಸ್ನಾಕ್ಸ್ ಆಗಿದ್ದು, ಮಧುಮೇಹಿಗಳಿಗೆ ಉತ್ತಮ ಆಯ್ಕೆ.