ಕರ್ನಾಟಕ

karnataka

ETV Bharat / health

ಚಿಕ್ಕ ವಯಸ್ಸಿನಲ್ಲೇ ತಲೆಕೂದಲು ಬಿಳಿಯಾಯಿತೇ? ಚಿಂತೆ ಬಿಡಿ, ಇಷ್ಟು ಮಾಡಿ - GREY HAIR TO BLACK HAIR PERMANENTLY

Grey Hair To Black Hair Permanently: ಚಿಕ್ಕ ವಯಸ್ಸಿನಲ್ಲೇ ನಿಮ್ಮ ತಲೆಕೂದಲುಗಳು ಬಿಳಿಯಾಗುತ್ತಿವೆಯೇ? ಹಾಗಾದ್ರೆ, ಅವು ಈ ಆಹಾರಗಳನ್ನು ಸೇವಿಸುವುದರಿಂದ ಬೇಗನೇ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಚಿಕ್ಕ ವಯಸ್ಸಿನಲ್ಲೇ ನಿಮ್ಮ ತಲೆಕೂದಲುಗಳು ಬಿಳಿಯಾಗುತ್ತಿವೆಯೇ?
ಸಾಂದರ್ಭಿಕ ಚಿತ್ರ (ETV Bharat)

By ETV Bharat Lifestyle Team

Published : Dec 12, 2024, 9:49 PM IST

Grey Hair to Black Hair Permanently:ವಯಸ್ಸಾದಂತೆ ಕೂದಲು ಬಿಳಿಯಾಗುವುದು ಸಾಮಾನ್ಯ. ಕನಿಷ್ಠ 30 ವರ್ಷ ವಯಸ್ಸು ತಲುಪುವ ಮೊದಲೇ ಹೆಚ್ಚಿನವರ ಕೂದಲು ಬಿಳಿ ಬಣ್ಣಕ್ಕೆ ತಿರುಗಿರುತ್ತದೆ. ಹದಿಹರೆಯದ ಮಕ್ಕಳಲ್ಲೂ ಕೂದಲುಗಳು ಬೆಳ್ಳಗಾಗುತ್ತಿವೆ. ಇದು ಏಕೆ ಸಂಭವಿಸುತ್ತದೆ? ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲಿಗೆ ಕಾರಣಗಳೇನು? ಮತ್ತೆ ಕಪ್ಪು ಕೂದಲು ಬರಲು ಏನು ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ.

ತಲೆಯ ಮೇಲೆ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಕಾಣಿಸಿಕೊಂಡರೆ ಮನಸ್ಸಿಗೆ ನೋವಾಗುತ್ತದೆ. ಇದರಿಂದಾಗಿ ಕೆಲವರು ಜನರೊಂದಿಗೆ ಬೆರೆಯಲೂ ಹಿಂಜರಿಯುತ್ತಾರೆ. ಮತ್ತೆ ಕೆಲವರು ಬಿಳಿ ಕೂದಲುಗಳನ್ನು ಕೀಳುತ್ತಾರೆ. ಇನ್ನೊಂದಷ್ಟು ಜನ ಕೂದಲಿಗೆ ಬಣ್ಣ ಮತ್ತು ಮದರಂಗಿ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಕೂದಲಿಗೆ ಮತ್ತಷ್ಟು ಹಾನಿಯಾಗುತ್ತದೆ ಎಂದು ಪ್ರಮುಖ ಚರ್ಮರೋಗ ತಜ್ಞ ಡಾ.ಸಂದೀಪ್ ಎಚ್ಚರಿಕೆ ನೀಡಿದ್ದಾರೆ.

ನಾವು ತಿನ್ನುವ ಆಹಾರ ಮತ್ತು ಮಾಲಿನ್ಯದಂತಹ ಅನೇಕ ಅಂಶಗಳು ಕೂದಲಿನ ಮೇಲೆ ಪರಿಣಾಮ ಬೀರುತ್ತವೆ. ಪೌಷ್ಟಿಕಾಂಶದ ಕೊರತೆ, ಅದರಲ್ಲೂ ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಪ್ರೋಟಿನ್ ಕೊರತೆಯಿಂದ ಕೂದಲು ಬೆಳ್ಳಗಾಗಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೂದಲು ಬಿಳಿಯಾಗಲು ಕಾರಣಗಳೇನು?:

  • ಅಪೌಷ್ಟಿಕತೆ
  • ಅತಿಯಾದ ಧೂಮಪಾನ
  • ಒತ್ತಡ ಮತ್ತು ಆತಂಕ
  • ಥೈರಾಯ್ಡ್ ಸಮಸ್ಯೆ
  • ಮಧುಮೇಹ ಸಮಸ್ಯೆ
  • ತುಂಬಾ ಸೂರ್ಯನಿಗೆ ಒಡ್ಡಿಕೊಳ್ಳುವುದು
  • ರಾಸಾಯನಿಕಗಳ ಅತಿಯಾದ ಬಳಕೆ
  • ಮಾಲಿನ್ಯ

ಸೇವಿಸಬೇಕಾದ ಆಹಾರಗಳೇನು?

  • ಹಾಲು
  • ಮೊಸರು
  • ಮಾಂಸ
  • ಮೊಟ್ಟೆಗಳು
  • ಹಸಿರು ತರಕಾರಿ
  • ಧಾನ್ಯಗಳು
  • ಒಣದ್ರಾಕ್ಷಿ
  • ಒಮೆಗಾ 3 ಆಮ್ಲಗಳು

ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಇರಬೇಕು. ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿಕೊಳ್ಳಬೇಕು. ಹೊಗೆ ಮತ್ತು ಮಾಲಿನ್ಯದಿಂದ ದೂರವಿರಬೇಕು ಎಂದು ತಜ್ಞರು ಹೇಳುತ್ತಾರೆ. ವಾರಕ್ಕೆ ಎರಡು ಬಾರಿಯಾದರೂ ತಲೆ ಸ್ನಾನ ಮಾಡಬೇಕು. ಆಗಾಗ ಕೂದಲಿಗೆ ಎಣ್ಣೆ ಹಚ್ಚುವುದು ಹಾಗೂ ತಲೆಗೆ ಮಸಾಜ್ ಮಾಡುವುದು ಒಳ್ಳೆಯದು. ನೈಸರ್ಗಿಕ ಪದಾರ್ಥಗಳಾದ ಆಮ್ಲಾ ಪೌಡರ್, ದಾಸವಾಳದ ಎಣ್ಣೆ, ಕರಿಬೇವು, ಬೇವಿನ ಎಣ್ಣೆ, ಲಿಂಬೆರಸ ಕೂದಲಿಗೆ ತುಂಬಾ ಪ್ರಯೋಜನಕಾರಿ. ಕೂದಲು ಆರೋಗ್ಯವಾಗಿರುವುದರ ಜೊತೆಗೆ ಬಿಳಿಯಾಗುವುದೂ ಕೂಡ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

ಚಿಕ್ಕವಯಸ್ಸಿನಲ್ಲಿ ಕೂದಲು ಬಿಳಿಯಾಗುವುದನ್ನು ತಡೆಯಲು ಆರಂಭದಿಂದಲೇ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. 20 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕೂದಲು ಬೆಳ್ಳಗಾಗುತ್ತಿದ್ದರೆ ನೇರವಾಗಿ ಡೈ ಬಳಸದೆ ವೈದ್ಯರನ್ನು ಸಂಪರ್ಕಿಸಬೇಕು. ನಿಜವಾದ ಕಾರಣವನ್ನು ತಿಳಿದುಕೊಳ್ಳಲು ಹಾಗೂ ಸೂಕ್ತ ಪರಿಹಾರಗಳನ್ನು ಪ್ರಯತ್ನಿಸಲು ಸೂಚಿಸಲಾಗುತ್ತದೆ. ರಾಸಾಯನಿಕಗಳನ್ನು ಒಳಗೊಂಡಿರುವ ಆ್ಯಂಟಿ ಡ್ಯಾಂಡ್ರಫ್ ಶ್ಯಾಂಪೂಗಳನ್ನು ವಾರಕ್ಕೆ ಎರಡು ಬಾರಿ ಹೆಚ್ಚು ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಓದುಗರಿಗೆ ಪ್ರಮುಖ ಸೂಚನೆ:ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:ಗುಲಾಬಿ ಚಹಾ ಗೊತ್ತೇ?: ಇದನ್ನು ಹೀಗೆ ತಯಾರಿಸಿ, ಆರೋಗ್ಯ ಲಾಭಗಳು ಹಲವು

ABOUT THE AUTHOR

...view details