ನವದೆಹಲಿ: ಅಪರೂಪದ ಮತ್ತು ಮಾರಣಾಂತಿಕ ಅಪ್ಲಾಸ್ಟಿಕ್ ಅನಿಮೀಯ (ರಕ್ತ ಹೀನತೆ) ಪ್ರಕರಣಗಳು ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಗಮನಾರ್ಹವಾಗಿ ಹೆಚ್ಚಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಅಪ್ಲಾಸ್ಟಿಕ್ ಅನಿಮೀಯ ಎಂಬುದು ವಿರಳ ಮತ್ತು ಗಂಭೀರ ರಕ್ತದ ಸಮಸ್ಯೆಯಾಗಿದೆ. ಬೋನ್ ಮ್ಯಾರೊ (ಮೂಳೆ ಮಜ್ಜೆ) ಹಾನಿಗೆ ಒಳಗಾದಾಗ ಇದು ಸಂಭವಿಸುತ್ತದೆ. ಈ ವೇಳೆ, ಹೊಸ ರಕ್ತದ ಕೋಶ ಮತ್ತು ಪ್ಲೇಟ್ಲೆಟ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದು ರಕ್ತ ಹೀನತೆ ಮತ್ತು ಥ್ರಂಬೋಸೈಟೋಪೆನಿಯಾಕ್ಕೆ ಕಾರಣವಾಗುತ್ತದೆ. ಈ ಜೀವ ಬೆದರಿಕೆ ಪರಿಸ್ಥಿತಿ ರೋಗಿಯ ಗಂಭೀರ ಸೋಂಕಾದ ರಕ್ತಸ್ರಾವ ಮತ್ತು ಇತರ ಸಂಕೀರ್ಣ ಅಪಾಯಕ್ಕೆ ಕಾರಣವಾಗುತ್ತದೆ.
ಈ ಅಪರೂಪದ ಪರಿಸ್ಥಿತಿ ಪೋಷಕರಿಂದ ಮಕ್ಕಳಿಗೆ ಹರಡುತ್ತದೆ. ಇದು ಹಲವು ಸಮಯಗಳ ಕಾಲದ ಬಳಿಕ ಅಭಿವೃದ್ಧಿ ಆಗುತ್ತದೆ. ಇದು ಅಪ್ಲಾಸ್ಟಿಕ್ ಅನಿಮೀಯಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಆದರೆ, ಕೆಲವು ಪ್ರಕರಣಗಳಲ್ಲಿ ಇದು ಪರಿಸರದ ವಿಷ ಅಥವಾ ರಾಸಾಯನಿಕ, ಕಿಮೋಥೆರಪಿ ಅಥವಾ ರೇಡಿಯೇನ್ ಚಿಕಿತ್ಸೆ ಮತ್ತು ವಯಸ್ಸಿನ ಕಾರಣದಿಂದ ಉಲ್ಬಣವಾಗಿರುವುದು ಕಂಡು ಬಂದಿದೆ.
ಈ ಅಪ್ಲಾಟಿಕ್ ಅನಿಮೀಯವನ್ನು ಇಡಿಯೋಪಥಿಕ್ ಅಪ್ಲಾಸ್ಟಿಕ್ ಅನಿಮೀಯ ಆಗಿದ್ದು, ಇದು ಭಾರತೀಯರಿಗೆ ಹೆಚ್ಚು ಪರಿಣಾಮ ಬೀರುತ್ತಿದೆ. ಯುರೋಪ್, ಅಮೆರಿಕಕ್ಕೆ ಹೋಲಿಕೆ ಮಾಡಿದಾಗ ಭಾರತ ಮತ್ತು ನೈಋತ್ಯ ಏಷ್ಯಾದಲ್ಲಿ 3 ರಿಂದ 4 ಪಟ್ಟು ಹೆಚ್ಚಿದೆ ಎಂದು ದೆಹಲಿ ಇಂದ್ರಪ್ರಸ್ಥ ಅಪೋಟೋ ಆಸ್ಪತ್ರೆಯ ಸೆಂಟರ್ ಫಾರ್ ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್ ಅಂಡ್ ಸೆಲ್ಯೂಲಾರ್ ಥೆರಪಿ ನಿರ್ದೇಶಕ ಡಾ ಗೌರವ್ ಕರ್ಯಾ ತಿಳಿಸಿದ್ದಾರೆ.
ಯುರೋಪ್ನಲ್ಲಿ ಪ್ರತಿ ವರ್ಷ2 ರಿಂದ 3 ಮಿಲಿಯನ್ ಅಪ್ಲಾಟಿಕ್ ಅನಿಮೀಯ ಪ್ರಕರಣಗಳು ಕಂಡು ಬಂದರೆ, ಏಷ್ಯಾದಲ್ಲಿ ಇದರ ಪ್ರಮಾಣ ಹೆಚ್ಚಿದೆ. ಭಾರತದಲ್ಲಿ ಇದರ ಈ ಪ್ರಕರಣಗಳು ಎಷ್ಟಿದೆ ಎಂಬ ನಿಖರ ವರದಿ ತಿಳಿದಿಲ್ಲ. ಈ ಅಪ್ಲಾಟಿಕ್ ಅನಿಮೀಯಕ್ಕೆ ಇರುವ ಚಿಕಿತ್ಸೆ ಸ್ಟೆಂ ಸೆಲ್ ಟ್ರಾನ್ಸ್ಪ್ಲಾಂಟೆಷನ್ (ಕಾಂಡ ಕೋಶ ಕಸಿ ಚಿಕಿತ್ಸೆ) ಆಗಿದೆ ಎಂದು ಎಫ್ಎಐಎಂಎನ ಹಿರಿಯ ವೈದ್ಯ ಡಾ ರಿಶಿ ರಾಜ್ ಸಿನ್ಹಾ ತಿಳಿಸಿದ್ದಾರೆ.
ತಜ್ಞರು ಹೇಳುವಂತೆ ಈ ರೋಗದ ಯಶಸ್ವಿ ನಿರ್ವಹಣೆ ಎಂದರೆ ಆರಂಭಿಕ ಹಂತದಲ್ಲೇ ಪತ್ತೆಯಾಗಿದೆ. ಕಾಂಡ ಕೋಶ ಕಸಿ ಅಥವಾ ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್ ಜೀವ ಬೆದರಿಕೆ ಒಡ್ಡುವ ಅಪ್ಲಾಟಿಕ್ ಅನಿಮೀಯ ಶಮನಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಇನ್ನು ಗುರುಗಾಂವ್ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್ಸುಟಿಟ್ಯೂಟ್ ಹೆಮಟೋಲಾಜಿ ಮತ್ತು ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್ನ ಪ್ರಧಾನ ನಿರ್ದೇಶಕ ಡಾ ರಾಹುಲ್ ಭಾರ್ಗವಾ ಮಾತನಾಡಿ, ಭಾರತದಲ್ಲಿ ಪ್ರತಿ ವರ್ಷ 20 ಸಾವಿರ ರೋಗಿಗಳು ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ರೋಗದ ಕುರಿತು ಕಡಿಮೆ ನಿಧಿ, ಜಾಗೃತಿ ಮತ್ತು ಬೋನ್ ಮ್ಯಾರೊ ಟ್ರಾನ್ಸಪ್ಲಾಂಟ್ಗೆ ಬೇಕಾದ ಸೌಲಭ್ಯ ಇಲ್ಲದಿರುವುದಾಗಿದೆ. ಇದು ಬಡ ರೋಗಿಗಳಿಗೆ ಹೆಚ್ಚಿನ ಪರಿಣಾಮ ಹೊಂದಿದೆ.
ಆಯುಷ್ಮಾನ್ ಭಾರತ್ನಡಿ ಈ ಇಮ್ಯುನೊಸಪ್ರೆಸಿವ್ ಚಿಕಿತ್ಸೆ ಸೇರಿಸಬೇಕಿದೆ. ಭಾರತದಲ್ಲಿ ಹೆಚ್ಚಿನ ಬಿಎಂಟಿ ಕೇಂದ್ರವನ್ನು ತರೆಯಬೇಕಿದೆ. ಬಡವರಿಗೆ ಬಿಎಂಟಿ ಚಿಕಿತ್ಸೆ ಉಚಿತವಾಗಿ ಸಿಗಬೇಕು ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಬಿಎಂಟಿ ಕೇಂದ್ರವನ್ನು ತೆರೆಯಬೇಕಿದೆ ಎಂದರು.
ಇದನ್ನೂ ಓದಿ:ಸ್ಮರಣೆ, ಅರಿವಿನ ಸಮಸ್ಯೆಗೆ 'ಸ್ಲೀಪ್ ಅಪ್ನಿಯಾ' ಕಾರಣ: ಇದರ ಬಗ್ಗೆ ಗೊತ್ತೇ?