ಹೈದರಾಬಾದ್: ಹವಾಮಾನ ಬದಲಾವಣೆಯ ಪರಿಣಾಮವಾಗಿ ಜಗತ್ತಿನ ಸುಮಾರು ಅರ್ಧ ಬಿಲಿಯನ್ಗಿಂತ ಹೆಚ್ಚಿನ ಮಕ್ಕಳು ಪ್ರತಿ ವರ್ಷ ತೀವ್ರ ತಾಪಮಾನಕ್ಕೆ ಗುರಿಯಾಗುತ್ತಿದ್ದಾರೆ. ಈ ಶಾಖ ಪ್ರಮಾಣವು ಅವರ ಅಜ್ಜ-ಅಜ್ಜಿಯಂದಿರು ಎದುರಿಸಿದ್ದಕ್ಕಿಂತ ಹೆಚ್ಚಿದೆ. ಇದು ಮಾರಣಾಂತಿಕ ಪರಿಣಾಮಗಳ ಎಚ್ಚರಿಕೆಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಯು ನಿರಂತರವಾಗಿ ಜಗತ್ತಿನಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಕಳೆದ 60 ವರ್ಷಗಳ ಹಿಂದಿನದ್ದಕ್ಕೆ ಹೋಲಿಕೆ ಮಾಡಿದಾಗ 466 ಮಿಲಿಯನ್ ಮಕ್ಕಳು ಅಥವಾ ಐದರಲ್ಲಿ ಒಂದು ಮಗುವು ಪ್ರತಿ ವರ್ಷ ಶಾಖ ದುಪ್ಪಟ್ಟು ಆಗುತ್ತಿರುವ ಪ್ರದೇಶಗಳಲ್ಲಿ ಬದುಕುತ್ತಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಏಜೆನ್ಸಿ ಯುನಿಸೆಫ್ ತಿಳಿಸಿದೆ.
ಸಣ್ಣ ಮಕ್ಕಳ ದೇಹವು ವಯಸ್ಕರಂತೆ ಅಲ್ಲ. ಅವರು ತೀವ್ರ ಶಾಖಕ್ಕೆ ಒಡ್ಡಿಕೊಂಡಾಗ ದುರ್ಬಲವಾಗುತ್ತಾರೆ ಎಂದು ಯುನಿಸೆಫ್ನ ಮುಖ್ಯ ವಕೀಲ ಲಿಲೆ ಕ್ಯಾಪ್ರನಿ ಎಎಫ್ಪಿಗೆ ತಿಳಿಸಿದ್ದಾರೆ. ಅಲ್ಲದೇ ಈ ತೀವ್ರ ಶಾಖವು ಗರ್ಭಿಣಿಯರಿಗೆ ಅಪಾಯನ್ನುಂಟು ಮಾಡುತ್ತದೆ. ತೀವ್ರ ಶಾಖದ ಪರಿಣಾಮವಾಗಿ ಶಾಲೆಗಳನ್ನು ಬಲವಂತವಾಗಿ ಮುಚ್ಚಿಸಬೇಕಾಗುತ್ತದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈಗಾಗಲೇ 80 ಮಿಲಿಯನ್ ಮಕ್ಕಳು ಇದರ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದರು.
ಯುನಿಸೆಫ್ ತೀವ್ರ ಶಾಖವನ್ನು 35 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಗುರಿಯಾಗಿಸಿಕೊಂಡಿದೆ. 1960ರಿಂದ 2020-2024ರ ವರೆಗಿನ ಸಾಮಾನ್ಯ ತಾಪಮಾನವನ್ನು ಹೋಲಿಕೆ ಮಾಡಿದೆ. ಇಂತಹ ಬಿಸಿ ದಿನಗಳು ಹವಾನಿಯಂತ್ರಣದಂತಹ (ಎಸಿ) ಹೆಚ್ಚಿನ ತಾಪಮಾನವನ್ನು ನಿಭಾಯಿಸುವ ವಿಧಾನಗಳು ಇಡೀ ಜಗತ್ತಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಗಮನಿಸಿದೆ. ಈ ಬಿಸಿಲ ತಾಪಮಾನಕ್ಕೆ ಪಶ್ಚಿಮ ಮತ್ತು ಕೇಂದ್ರ ಆಫ್ರಿಕಾದ ಮಕ್ಕಳು ಹೆಚ್ಚು ಒಳಗಾಗುತ್ತಿದ್ದಾರೆ. ಈ ಪ್ರದೇಶದ 123 ಮಿಲಿಯನ್ ಅಂದರೆ ಶೇ. 39ರಷ್ಟು ಮಕ್ಕಳು ಈ ಪ್ರತಿ ವರ್ಷ 95 ಡಿಗ್ರಿ ಫ್ಯಾರನ್ಹೀಟ್ ಬಿಸಿಲಿನ ತಾಪಮಾನಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ.
ಅಧಿಕ ಮಟ್ಟದಲ್ಲಿ ಮಾಲಿ ಮಕ್ಕಳು ಒಳಗಾಗುತ್ತಿದ್ದಾರೆ. ಇಲ್ಲಿ ಎಸಿ ಎಂಬುದು ಮಿಲಿಯಾಂತರ ಜನರಿಗೆ ಕೈಗೆಟುಕದ ಸಾಧನವಾಗಿದ್ದು, ಅವರು ಫ್ಯಾನ್ನಲ್ಲಿಯೇ ಉಳಿಯಬೇಕಿದೆ. ಇಲ್ಲಿ 200 ದಿನಗಳ ಕಾಲ 35 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನ ಹೊಂದಿದೆ. ಲ್ಯಾಟಿನ್ ಅಮೆರಿಕದಲ್ಲೂ 48 ಮಿಲಿಯನ್ ಮಕ್ಕಳು ಕೂಡ 60ವರ್ಷಗಳ ಹಿಂದಿಗಿಂತ ಈಗ ದುಪ್ಪಟ್ಟು ಶಾಖಕ್ಕೆ ಒಳಗಾಗುತ್ತಿದ್ದಾರೆ.