ಹೈದರಾಬಾದ್:ದೇಹಕ್ಕೆ ಅವಶ್ಯಕವಾದ ವಿಟಮಿನ್ ಸುಲಭವಾಗಿ ಸಿಗುವುದು ಸೂರ್ಯನ ಬಿಸಿಲಿನಿಂದ. ಇದು ಮೂಳೆಗಳ ಬಲಗೊಳಿಸಲು ಬೇಕಾದ ಅಗತ್ಯ ವಿಟಮಿನ್ ಆಗಿದೆ. ಆದರೆ, ಇದೇ ಸೂರ್ಯನ ನೇರಳಾತೀತ ತ್ವಚೆ ಹಾಳು ಮಾಡದಂತೆ ಇರಲಿ ಎಂದು ಸನ್ಸ್ಕ್ರೀನ್ ಬಳಕೆ ಮಾಡುತ್ತೇವೆ. ಈ ಸನ್ಸ್ಕ್ರೀನ್ ಬಳಕೆಯು ವಿಟಮಿನ್ ಡಿ ಉತ್ಪಾದನೆಯಲ್ಲಿ ತೊಡಕಾಗುತ್ತದೆಯಾ ಎಂಬ ಕುರಿತು ಪ್ರೊ ಟಿಮ್ ಸ್ಪೆಕ್ಟೊರ್ ಪೋಸ್ ಇದೀಗ ಹಲವರಲ್ಲಿ ವಾದ ವಿವಾದಕ್ಕೆ ಕಾರಣವಾಗುತ್ತದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸನ್ಸ್ಕ್ರೀನ್ ಬಳಕೆ ಬಗ್ಗೆ ಪರ - ವಿರೋಧದ ಚರ್ಚೆಗೆ ಕಾರಣವಾಗಿದೆ.
ಫಿಲ್ಟರ್ನಂತೆ ಕಾರ್ಯ ನಿರ್ವಹಿಸಲಿದೆ ಸನ್ಸ್ಕ್ರೀನ್ ಲೋಷನ್: ಕೋಶ ಮೇಲೆ ಕೆಲವು ಪ್ರಕ್ರಿಯೆ ತೋರುತ್ತದೆ. ಇದು ವಿಟಮಿನ್ ಡಿ3 ಮೊಲೆಕ್ಯೂಲ್ನಂತಹ ಕೊಲೆಸ್ಟ್ರೋಲ್ ಆಗಿ ರೂಪಿಸುತ್ತದೆ. ಕೊಲೆಸ್ಟ್ರಾಲ್ ತರಹದ ಅಣುವನ್ನು ವಿಟಮಿನ್ ಡಿ 3 ಆಗಿ ಪರಿವರ್ತಿಸುವ ಕೆಲವು ಪ್ರಕ್ರಿಯೆಗಳು ನಮ್ಮ ಚರ್ಮದ ಕೋಶಗಳಲ್ಲಿ ಸಂಭವಿಸುತ್ತವೆ. ಇದೇ ಕಾರಣಕ್ಕೆ ಯುವಿಬಿ ರೇಡಿಯೇಷನ್ಗೆ ವಿಟಮಿನ್ ಡಿ ಉತ್ಪಾದನೆ ಅಗತ್ಯವಾಗಿದೆ. ಸನ್ಸ್ಕ್ರಿನ್ ಬಳಕೆಯು ವಿಟಿಮಿನ್ ಬಿ ಸಂಶ್ಲೇಷಣೆಯನ್ನು ತಡೆಯುತ್ತದೆ. ಕಾರಣ ಸನ್ಸ್ಕ್ರೀನ್ ಯುವಿ ರೇಡಿಯೇಷನ್ ಪ್ರತಿಕ್ರಿಯಿಸುವಲ್ಲಿ ಫಿಲ್ಟರ್ ರೀತಿ ಕಾರ್ಯ ನಿರ್ವಹಿಸುತ್ತದೆ. ಸನ್ಸ್ಕ್ರೀನ್ನಲ್ಲಿ ಅತಿ ಹೆಚ್ಚಿನ ಸೂರ್ಯ ರಕ್ಷಣಾ ಅಂಶ (ಎಸ್ಪಿಎಫ್) ಇದ್ದು, ಇದು ಸನ್ ಬರ್ನ್ ತಡೆಯುವಲ್ಲಿ ಉತ್ತಮವಾಗಿದೆ.