ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆ ಅಂದರೆ ಅದು ಅತಿಯಾದ ತೂಕವಾಗಿದೆ. ಸವಾಲಿನ ಜೀವನಶೈಲಿ, ತಿನ್ನುವ ಅಭ್ಯಾಸ ಮತ್ತು ವ್ಯಾಯಾಮದ ಕೊರತೆಯು ಈ ಅನಾರೋಗ್ಯಕರ ತೂಕ ಹೆಚ್ಚಳಕ್ಕೆ ಕಾರಣವಾಗಿದೆ. ಇದಕ್ಕಾಗಿ ಯುವಜನತೆ ಬಲುಬೇಗ ತೂಕ ಕಳೆದುಕೊಳ್ಳಬೇಕು ಎಂದು ಕ್ರ್ಯಾಶ್ ಡಯಟ್ ಮೊರೆ ಹೋಗುತ್ತಿದ್ದಾರೆ.
ಕ್ರ್ಯಾಶ್ ಡಯಟ್ನಿಂದ ವೇಗವಾಗಿ ತೂಕ ಕಳೆದುಕೊಳ್ಳಬಹುದು ಎಂದು ಕೂಡ ತಜ್ಞರು ತಿಳಿಸುತ್ತಾರೆ. ಹಾಗಾದರೆ ಈ ಕ್ರ್ಯಾಶ್ ಡಯಟ್ ಎಂದರೇನು? ಇದು ಯಾರಿಗೆ ಸೂಕ್ತ, ಯಾರಿಗೆ ಸೂಕ್ತ ಎಂಬ ಕುರಿತು ಹೈದರಾಬಾದ್ನ ಖ್ಯಾತ ಪೌಷ್ಟಿಕಾಂಶ ತಜ್ಞೆಯಾಗಿರುವ ಡಾ ಜಾನಕಿ ಶ್ರೀನಾಥ್ ತಿಳಿಸಿದ್ದಾರೆ. ಹಾಗದ್ರೆ ಕ್ರಶ್ ಡಯಟ್ಗೆ ಯಾವ ನೀತಿ ಪಾಲಿಸಬೇಕು ಎಂಬ ಕುರಿತ ವಿವರ ಇಲ್ಲಿದೆ.
ಏನಿದು ಕ್ರ್ಯಾಶ್ ಡಯಟ್: ಕ್ರ್ಯಾಶ್ ಡಯಟ್ ಅನ್ನು ಜಿರೋ ಡಯಟ್ ಎಂಬ ಹೆಸರಿನಿಂದ ಕೂಡ ಪರಿಚಿತವಾಗಿದೆ. ಅಮೆರಿಕದಲ್ಲಿ ಪ್ರಖ್ಯಾತವಾಗಿರುವ ತೂಕ ಇಳಿಕೆ ವಿಧಾನ ಇದಾಗಿದೆ. ತೂಕ ಕಳೆದುಕೊಳ್ಳುವ ಜೊತೆಗೆ ವಯಸ್ಸಾದಂತೆ ತ್ವಚೆಯ ಸುಕ್ಕನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಕ್ರ್ಯಾಶ್ ಡಯಟ್ಗೆ ಕೆಲವು ನಿರ್ದಿಷ್ಟ ಆಹಾರ ಕ್ರಮದ ನಿಯಮಗಳಿವೆ. ಅದರಲ್ಲಿ 40ರಷ್ಟು ಕಾರ್ಬೋಹೈಡ್ರೇಟ್, 30ರಷ್ಟು ಕೊಬ್ಬು ಮತ್ತು 30ರಷ್ಟು ಪ್ರೋಟಿನ್ ಹೊಂದಿರುವುದು ಅಗತ್ಯವಾಗಿದೆ. ಆದಾಗ್ಯೂ ಈ ಡಯಟ್ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಈ ಡಯಟ್ನಲ್ಲೂ ಮೂರು ಹೊತ್ತಿನ ಊಟ ಮತ್ತು ಎರಡು ಸ್ನಾಕ್ಸ್ ಒಳಗೊಂಡಿರುತ್ತದೆ. ಇದು ಅಮೆರಿಕದಲ್ಲಿ ಹೆಚ್ಚು ಅನುಸರಿಸುವ ಡಯಟ್ ಇದಾಗಿದೆ.
ಭಾರತಕ್ಕೆ ಅನುಗುಣವಾಗಿ ಆಹಾರ ಸೇವನೆ: ನಮ್ಮ ದೇಶದಲ್ಲಿ ಕ್ರ್ಯಾಶ್ ಡಯಟ್ನಲ್ಲಿ ಅನ್ನ ಮತ್ತು ಎಣ್ಣೆ ಅಂಶವನ್ನು ಸಂಪೂರ್ಣವಾಗಿ ತಪ್ಪಿಸಲಾಗುವುದು. ಇದರ ಬದಲಾಗಿ, ಸಿಪ್ಪೆಗಳಿಂದ ಕೂಡಿದ ಧಾನ್ಯ- ಕಾಳುಗಳು. ಕಾರ್ಬೋಹೈಡ್ರೇಟ್ ಸಮೃದ್ಧವಾದ ಬೆಂಡೆಕಾಯಿ, ಎಲೆಕೋಸ್, ಬೀನ್ಸ್, ಟೊಮಟೊದಂತಹ ತರಕಾರಿ ಆಯ್ಕೆ ಮಾಡಲಾಗುವುದು. ಆರೋಗ್ಯಯುತ ಕೊಬ್ಬಿಗೆ ಫ್ಲೆಕ್ಸ್ಸೀಡ್ ಪುಡಿ (ಅಗಸೆ ಬೀಜ), ಎಳ್ಳು, ಬಾದಾಮಿ ಮತ್ತು ಕುಂಬಳಕಾಯಿಗಳನ್ನು ಆಹಾರದ ಕ್ರಮದ ಭಾಗವಾಗಿ ಸೇರಿಸಲಾಗುವುದು.