ಹೈದರಾಬಾದ್: ಮಿದುಳು ಕ್ಯಾನ್ಸರ್ ಎಂಬುದು ಮಾರಾಣಾಂತಿಕವಾಗಿದ್ದು, ಇದಕ್ಕೆ ಹೊಸ ಚಿಕಿತ್ಸೆ ವಿಧಾನವೊಂದನ್ನು ಅಭಿವೃದ್ಧಿಗೊಳಿಸುವಲ್ಲಿ ಐಐಟಿ ದೆಹಲಿ ಒಂದು ಹೆಜ್ಜೆ ಮುಂದೆ ಸಾಗಿದೆ. ಗ್ಲಿಯೊಬ್ಲಾಸ್ಟೊಮಾ ರೀತಿಯ ಕ್ಯಾನ್ಸರ್ ಗೆಡ್ಡೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಇಲಿಗಳ ಮೇಲೆ ನಡೆಸಲಾದ ಪೂರ್ವಭಾವಿ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಈ ಕುರಿತು ಸಂಪೂರ್ಣ ವಿವರಣೆಯನ್ನು ಸಂಸ್ಥೆ ತಿಳಿಸಿದೆ.
ಸದ್ಯ ರೋಗಿಗಳಲ್ಲಿ ಗ್ಲಿಯೊಬ್ಲಾಸ್ಟೊಮಾ ಟ್ಯೂಮರ್ ಅನ್ನು ತೆಗೆದು ಹಾಕಲು ಸರ್ಜರಿ ಮತ್ತು ರೇಡಿಯೇಷನ್ ಕಿಮೋಥೆರಪಿಯಂತಹ ಚಿಕಿತ್ಸೆಗಳನ್ನು ವೈದ್ಯಕೀಯ ಪದ್ಧತಿಯಲ್ಲಿ ಬಳಕೆ ಮಾಡಲಾಗುತ್ತಿದೆ, ಆದರೆ, ಈ ಚಿಕಿತ್ಸೆಗಳ ಬಳಿಕ ರೋಗಿಗಳು ಬದುಕುಳಿಯುವ ಸಾಧ್ಯತೆ ಕೇವಲ 12 - 18 ತಿಂಗಳಾಗಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ರೋಗಿಗಳ ದೀರ್ಘ ಉಳಿಯುವಿಕೆಗಾಗಿ ಹೊಸ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಅಧ್ಯಯನದ ಫಲಿತಾಂಶವನ್ನು ಪ್ರಖ್ಯಾತ ಜರ್ನಲ್ ಆದ ಬಯೋಮೆಟಿರಿಯಲ್ಸ್ನಲ್ಲಿ ಪ್ರಕಟಿಸಲಾಗಿದೆ. ಇಲ್ಲಿನ ಬಯೋ ಮಡಿಕಲ್ ಇಂಜಿನಿಯರಿಂಗ್ನ ಸಹಾಯಕ ಪ್ರಾಧ್ಯಾಪಕರಾದ ಜಯಂತ್ ಭಟ್ಟಾಚಾರ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ವಿದ್ಯಾರ್ಥಿ ವಿಧಿತ್ ಗೌರ್ ಪ್ರಾಥಮಿಕ ಅಧ್ಯಯನ ನಡೆಸಿದ್ದಾರೆ,
ವಿಧಿತ್ ಈ ಗಡ್ಡೆಯ ಚಿಕಿತ್ಸೆಗಾಗಿ ಇಮ್ಯೂನೊಸೊಮ್ಸ್ ಎಂಬ ವಿನೂತನ ನ್ಯಾನೊ ಫಾರ್ಮ್ಯೂಲೇಷನ್ ಅನ್ನು ಅಭಿವೃದ್ಧಿ ಮಾಡಿದ್ದಾರೆ. ಇದು ಶಕ್ತಿಯುತ ಆಂಟಿಬಾಡಿ ಸಿಡಿ 40 ಜೊತೆಗೆ ಆರ್ಆರ್ಎಕ್ಸ್- 001 ಎಂಬ ಸಣ್ಣ ನ್ಯೂಕ್ಲಿಯರ್ ಪ್ರತಿಬಂಧಕ ಸಂಯೋಜಿಸಿದ್ದಾರೆ. ಇದು ಮಿದುಳಿನ ಟ್ಯೂಮರ್ ಚಿಕಿತ್ಸೆಯ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಟ್ಯೂಮರ್ ಸಂಪೂರ್ಣವಾಗಿ ಮರೆಯಾಗಿದೆ. ಜೊತೆಗೆ ಮಿದುಳಿನ ಕ್ಯಾನ್ಸರ್ ವಿರುದ್ಧ ಹೋರಾಡಲು ಶಕ್ತಿಶಾಲಿಯಾದ ಪ್ರತಿರಕ್ಷಣಾ ವ್ಯವಸ್ಥೆ ಕೂಡ ಅಭಿವೃದ್ಧಿಯಾಗಿದೆ. ಮೂರು ತಿಂಗಳ ಅಂತರದ ಬಳಿಕ ಸಹಾಯಕ ಪ್ರಧ್ಯಾಪಕ ಭಟ್ಟಾಚಾರ್ಯ ನೇತೃತ್ವದ ಸಂಶೋಧಕರ ತಂಡ, ಪ್ರಯೋಗಕ್ಕೆ ಒಳಪಡಿಸಿದ ಇಲಿಗೆ ಗ್ಲಿಯೊಬ್ಲಾಸ್ಟೊಮ ಕೋಶವನ್ನು ನೀಡಿ ಮತ್ತೆ ಪ್ರಯೋಗ ನಡೆಸಿದ್ದಾರೆ.
ಆದರೆ, ಹೊಸ ಟ್ಯೂಮರ್ ಅಭಿವೃದ್ಧಿಯಾಗಿಲ್ಲ ಎಂದು ಐಐಟಿ ದೆಹಲಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಜಯಂತ್ ಭಟ್ಟಾಚಾರ್ಯ, ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಫಲಿತಾಂಶವು ನಮ್ಮನ್ನು ಮತ್ತಷ್ಟು ಉತ್ಸಾಹಿ ಆಗಿಸಿದೆ. ಅಲ್ಲದೇ ಈ ಫಲಿತಾಂಶದಿಂದಾಗಿ ಗ್ಲಿಯೊಬ್ಲಾಸ್ಟೊಮಾ ಹೊಂದಿರುವ ರೋಗಿಗಳಿಗೆ ಈ ವಿಧಾನದ ಚಿಕಿತ್ಸೆ ಬಳಕೆ ಮಾಡುವ ಮೂಲಕ ಮಾನವ ಪ್ರಯೋಗ ನಡೆಸುವ ಕುರಿತು ತಿಳಿಸಿದ್ದಾರೆ.
ಇದನ್ನೂ ಓದಿ: ರಕ್ತ ಪರೀಕ್ಷೆ ಮೂಲಕ ಕ್ಯಾನ್ಸರ್, ಅಲ್ಝೈಮರ್ ಪತ್ತೆ: ವಿನೂತನ ಪರೀಕ್ಷೆ ಹಾದಿಯಲ್ಲಿ ವಿಜ್ಞಾನಿಗಳು