ಹೈದರಾಬಾದ್: ಇದು ಹೇಳಿ ಕೇಳಿ ಬೇಸಿಗೆ ಕಾಲ. ಅಂದ ಹಾಗೆ ಈ ಸಮಯದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಹಾಗಾಗಿ ಅನೇಕ ಜನರು ರಜೆಯ ಮೇಲೆ ಸಂಬಂಧಿಕರು, ಬಂಧು ಬಾಂಧವರು, ಆಪ್ತರು, ಮಿತ್ರರನ್ನು ಬೇಟಿ ಮಾಡಲು ಹೋಗುತ್ತಾರೆ. ರಜೆಗಳು ಬಂತೆಂದರೆ ಪ್ರಯಾಣವು ಶುರು ಆಗೇ ಆಗುತ್ತದೆ. ಆದರೆ, ಹೊರಗೆ ಹೋಗಬೇಕೆಂದರೆ ಬಿರು ಬೇಸಿಗೆ ಕಾಟ ಬೇರೆ ಇರುತ್ತದೆ. ಮತ್ತೊಂದು ಕಡೆ ಕಣ್ಣು ರೆಪ್ಪೆಗಳ ಭಯ ಕೂಡಾ ಆರಂಭವಾಗುತ್ತದೆ. ಬೇಸಿಗೆಯಲ್ಲಿ ಅನೇಕ ಜನರು ಕಣ್ಣು ಕೆಂಪಾಗುವಿಕೆ ಅಥವಾ ಕಣ್ಣುರಿಯಿಂದ ಬಳಲುತ್ತಾರೆ. ಇದನ್ನು "ಗುಲಾಬಿ ಕಣ್ಣು" ಎಂದೂ ಕರೆಯಲಾಗುತ್ತದೆ. ಈ ಕಣ್ಣುರಿ ಸಮಸ್ಯೆ ನಿಮ್ಮ ಬೇಸಿಗೆ ರಜೆಯ ವಿನೋದಕ್ಕೆ ಅಡ್ಡಿಯಾಗುತ್ತದೆ. ಇದಕ್ಕೆ ಕಾರಣಗಳೇನು, ಲಕ್ಷಣಗಳೇನು ಮತ್ತು ತಡೆಗಟ್ಟುವ ಕ್ರಮಗಳನ್ನು ತಿಳಿದುಕೊಳ್ಳುವುದು ಉತ್ತಮ.
ಸಾಮಾನ್ಯವಾಗಿ, ಕಣ್ಣುರಿ ವೈರಸ್ಗಳು, ಬ್ಯಾಕ್ಟೀರಿಯಾಗಳು ಮತ್ತು ಅಲರ್ಜಿಗಳಿಂದ ಉಂಟಾಗುತ್ತವೆ. ವಿಶೇಷವಾಗಿ ಬೇಸಿಗೆಯಲ್ಲಿ, ಪರಾಗ ಮತ್ತು ಅಚ್ಚು ಮುಂತಾದ ಅಲರ್ಜಿಗಳು ಹೆಚ್ಚು ಕಾಡುತ್ತವೆ. ಬಿಸಿ ವಾತಾವರಣದಿಂದಾಗಿ, ಅವು ಹೆಚ್ಚಾಗುತ್ತವೆ ಮತ್ತು ಕಣ್ಣಿನ ಅಲರ್ಜಿಯನ್ನು ಉಂಟುಮಾಡುತ್ತವೆ. ಪರಿಣಾಮ, ಕಣ್ಣು ಕೆಂಪಾಗುವುದು, ಊತ ಮತ್ತು ಉರಿ ಕೂಡಾ ಉಂಟಾಗುತ್ತದೆ. ಬೇಸಿಗೆ ಬಿಸಿಲಿನಲ್ಲಿ ಹೆಚ್ಚು ಸಮಯ ಹೊರಗಡೆ ಕಳೆಯುವುದು ಮತ್ತು ಇತರರೊಂದಿಗೆ ಹೆಚ್ಚು ಸಮಯ ವ್ಯಯ ಮಾಡುವುದರಿಂದ ಕಣ್ಣಿನ ಸೋಂಕು ವೈರಸ್ ಮತ್ತು ಬ್ಯಾಕ್ಟೀರಿಯಾಗಳ ರೂಪದಲ್ಲಿ ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಈಜುಕೊಳಗಳು ಮತ್ತು ಕಡಲತೀರಗಳು ನಿಮ್ಮ ಕಣ್ಣಿನ ಊತ, ಉರಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಕಣ್ಣು ಕೆಂಪಾಗುವಿಕೆಯ ಲಕ್ಷಣಗಳು
- ಕಣ್ಣು ಗುಲಾಬಿ ಬಣ್ಣಕ್ಕೆ ತಿರುಗುವುದು ಮತ್ತು ಕಣ್ಣಲ್ಲಿ ಸದಾ ನೀರು ಆಡುತ್ತಿರುತ್ತದೆ.
- ಕಣ್ಣು ಊದಿಕೊಂಡ ಕಣ್ಣುರೆಪ್ಪೆಗಳನ್ನು ಬಡಿಯಲು ಕಷ್ಟವಾಗುತ್ತದೆ
- ಕಣ್ಣುಗಳಲ್ಲಿ ಸುಡುವಿಕೆ, ನೋವು ಮತ್ತು ಸ್ವಲ್ಪ ತುರಿಕೆ ಇರುತ್ತದೆ.
- ಬೆಳಕನ್ನು ನೋಡಲು ಕಷ್ಟವಾಗುತ್ತದೆ.
ಕಣ್ಣುರಿತದ ವಿಧಗಳು:
1.ವೈರಸ್ನಿಂದ ಕಣ್ಣು ಕೆಂಪಾಗುವಿಕೆ;ಇದು ತುಂಬಾ ಸಾಮಾನ್ಯವಾದ ಸಮಸ್ಯೆ ಆಗಿದೆ. ಚಿಕಿತ್ಸೆ ಇಲ್ಲದೇ ಎರಡು ವಾರಗಳಲ್ಲಿ ಕಡಿಮೆಯಾಗುತ್ತದೆ. ಇದರಿಂದ ಪರಿಹಾರ ಪಡೆಯಲು ಕಣ್ಣುಗಳ ಮೇಲೆ ಒದ್ದೆ ಬಟ್ಟೆಯನ್ನು ಇಡಬೇಕು. ಇದನ್ನು ದಿನವಿಡೀ ನಾಲ್ಕೈದು ಬಾರಿ ಮಾಡಬಹುದು.