ಕರ್ನಾಟಕ

karnataka

ETV Bharat / health

ಹವಾಮಾನ ಬದಲಾವಣೆಯಿಂದ ಮೀನಿನ ತೂಕ ನಷ್ಟ ಸಾಧ್ಯತೆ: ಅಧ್ಯಯನದಲ್ಲಿ ಬಹಿರಂಗ - ಮೀನಿನ ತೂಕ ನಷ್ಟ ಸಾಧ್ಯತೆ

ಜಾಗತಿಕ ತಾಪಮಾನದಿಂದ ಸಾಗರದ ಮೇಲ್ಮೈ ಪದರ ಬೆಚ್ಚಗಾಗುತ್ತಿದ್ದು, ಇದು ಮೀನುಗಳ ತೂಕದ ಮೇಲೆ ಪರಿಣಾಮ ಬೀರುತ್ತಿದೆ.

Climate change can chage the fish life cycle
Climate change can chage the fish life cycle

By ETV Bharat Karnataka Team

Published : Feb 28, 2024, 10:23 PM IST

ನವದೆಹಲಿ: ಹವಾಮಾನ ಬದಲಾವಣೆ ಸಾಗರ ಜೀವಿಗಳ ಮೇಲೆ ಪರಿಣಾಮ ಬೀರಲಿದ್ದು, ಜಾಗತಿಕ ತಾಪಮಾನ ಮೀನಿನ ತೂಕದ ನಷ್ಟಕ್ಕೂ ಕಾರಣವಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಜಪಾನ್​ನ ಟೋಕಿಯೋ ವಿಶ್ವವಿದ್ಯಾಲಯದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, 2010ರಲ್ಲಿ ಪಶ್ಚಿಮ ಉತ್ತರ ಫೆಸಿಫಿಕ್​ ಸಾಗರದಲ್ಲಿ ಮೀನಿನ ಆಹಾರ ತೂಕದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೆ ಕಾರಣ ಬಿಸಿಯಾಗುತ್ತಿರುವ ನೀರು ಎಂದಿದ್ದಾರೆ. ಮೊದಲ ಹಂತದಲ್ಲಿ ಜಪಾನಿನ ಸಾರ್ಡೀನ್ಸ್​ ಎಂಬ ಜಾತಿಯ ಮೀನಿನ ತೂಕದಲ್ಲಿ ಭಾರಿ ನಷ್ಟವಾಗಿದ್ದು, ಇದು ಬೇರೆ ಜಾತಿಯ ಸಮುದ್ರಾಹಾರಗಳ ನಡುವೆ ಸ್ಪರ್ಧೆ ಹೆಚ್ಚಿಸಿತು ಎಂದು ತಿಳಿಸಿದ್ದಾರೆ.

ಅಧಿಕ ತಾಪಮಾನದಿಂದ ಸಾಗರ ಮೇಲ್ಮೈ ಪದರ ಹೆಚ್ಚು ಶಾಖಕ್ಕೆ ಒಳಗಾಗುತ್ತದೆ. ಈ ಹಿಂದಿನ ಅಧ್ಯಯನದಲ್ಲೂ ದೊಡ್ಡ ಗಾತ್ರದ ಪ್ಲಾಕ್ಟನ್​ (ಒಂದು ಜಾತಿ ಮೀನು) ಸಣ್ಣ ಪ್ಲಾಕ್ಟನ್​ ಆಗಿ ಬದಲಾಗುತ್ತಿದೆ. ಜೆಲ್ಲಿಮೀನುಗಳಂತಹ ತಳಿಗಳನ್ನು ಕಡಿಮೆ ಪೌಷ್ಠಿಕಾಂಶಯುತವಾಗಿದೆ ಎಂದು ಟೋಕಿಯೋ ಯುನಿವರ್ಸಿಟಿಯ ಪ್ರೊ.ಶಿನ್​ ಇಚಿ ಹೇಳಿದ್ದಾರೆ.

ಹವಾಮಾನ ಬದಲಾವಣೆಯು ಪೈತೊಪ್ಲಾಂಕ್ಟನ್​​ ಬೆಳವಣಿಗೆ ಸಮಯ ಮತ್ತು ಉದ್ದವನ್ನು ಬದಲಾವಣೆ ಮಾಡುತ್ತದೆ. ಮೀನಿನ ಜೀವನ ಚಕ್ರದ ಅವಧಿ ಮತ್ತು ವಲಸೆ ಮೀನುಗಳಲ್ಲಿ ಕೂಡ ಇದು ಪರಿಣಾಮ ಬೀರುತ್ತದೆ ಎಂದು ಇತರೆ ಅಧ್ಯಯನಗಳು ತಿಳಿಸಿವೆ. ಇದರಿಂದ ಮೀನಿನ ಕ್ರಿಯೆ ಮತ್ತು ಸಂಪನ್ಮೂಲಗಳ ಸ್ಪರ್ಧೆಯ ಮೇಲೆ ಪರಿಣಾಮ ಉಂಟಾಗಿದೆ.

2010ರಲ್ಲಿ ಹವಾಮಾನ ಬದಲಾವಣೆ ಪರಿಣಾಮ ಸಾಗರ ಆಹಾರದ ಸ್ಪರ್ಧೆಗೆ ಕಾರಣವಾಯಿತು. ತಂಪಾದ, ಪೋಷಕಾಂಶವೂ ಸಮುದ್ರದ ಮೇಲ್ಮೈ ನೀರಿನಲ್ಲಿ ಕಾಣಲು ಸಾಧ್ಯವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನ ಫಲಿತಾಂಶವನ್ನು ಫಿಶ್ ಆ್ಯಂಡ್​ ಫಿಶರಿಸ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಭವಿಷ್ಯದ ಹವಾಮಾನ ಬದಲಾವಣೆ ಕಾಲಘಟ್ಟದಡಿಯಲ್ಲಿ ಮೀನುಗಾರಿಕೆ ಮತ್ತು ನೀತಿ ನಿರೂಪಕರು ನೀರಿನ ಸಂಪನ್ಮೂಲಗಳ ನಿರ್ವಹಣೆಗೆ ಪ್ರಯತ್ನ ನಡೆಸಬೇಕಿದೆ ಎಂದು ಅಧ್ಯಯನ ಸಲಹೆ ನೀಡಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಪ್ರಕಾರ, 2019ರಲ್ಲಿ ಜಾಗತಿಕ ಒಟ್ಟಾರೆ ಪ್ರಮಾಣದಲ್ಲಿ ಪಶ್ಚಿಮ ಉತ್ತರ ಫೆಸಿಫಿಕ್​ನಲ್ಲಿ ಕಾಲು ಭಾಗದಷ್ಟು ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗಿದೆ. ಇತ್ತೀಚಿನ ಸಂಶೋಧನೆಗಳು ಹೇಳುವಂತೆ 1980 ಮತ್ತು 2010ರ ವೇಳೆಯಲ್ಲಿ ಈ ಪ್ರದೇಶದಲ್ಲಿ ಮೀನಿನ ತೂಕದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಇದಕ್ಕಾಗಿ ಸಂಶೋಧಕರು 13 ಮೀನಿನ ತಳಿಯ ಸಂಖ್ಯೆ ಮತ್ತು ಮೀನಿನ ಗುಂಪಿನ ಆಧಾರದ ಮೇಲೆ ತನಿಖೆ ನಡೆಸಿದಾಗ, ಹಲವು ತಳಿಗಳಲ್ಲಿ ಈ ಅವಧಿಯಲ್ಲಿ ತೂಕ ಇಳಿಕೆ ಕಂಡು ಬಂದಿದೆ ಎಂದಿದ್ದಾರೆ.

ಸಂಶೋಧಕರ ತಂಡವು 1978 ಮತ್ತು 2018ರ ನಡುವೆ ನಾಲ್ಕು ಮೀನಿನ ತಳಿಯ ಆರು ಮೀನು ಸಂಖ್ಯೆ ದತ್ತಾಂಶವನ್ನು ದೀರ್ಘಾವಧಿವರೆಗೆ ಗಮನಿಸಿದ್ದಾರೆ. 13 ಮೀನಿನ ತಳಿಯ 17 ಮೀನಿನ ಸಂಖ್ಯೆಯ ದತ್ತಾಂಧವನ್ನು ಮಧ್ಯಮ ಅವಧಿವರೆಗೆ ಪರಿಶೀಲನೆ ಮಾಡಲಾಗಿದೆ. 1982 ಮತ್ತು 2014ರ ನಡುವೆ ಸಮುದ್ರದ ತಾಪಮಾನದ ದತ್ತಾಂಶವನ್ನು ಅಧ್ಯಯನ ಮಾಡಲಾಗಿದೆ. ಸಮುದ್ರದ ಮೇಲ್ಮೈ ಬದಲಾವಣೆ ಮತ್ತು ಮೇಲ್ಮೈ ಪದರವು ಪರಿಣಾಮ ಹೊಂದಿದೆಯೇ ಎಂದು ನೋಡಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ ಎರಡು ಅವಧಿಯಲ್ಲಿ 1980 ಮತ್ತು 2010ರಲ್ಲಿ ಮೀನಿನ ದೇಹ ತೂಕದಲ್ಲಿ ಕಡಿಮೆಯಾಗಿರುವುದು ಗೊತ್ತಾಗಿದೆ.

1980ರಲ್ಲಿ ಮೀನಿನ ತೂಕ ಕಡಿಮೆಯಾಗಲು ಕಾರಣ ಜಪಾನಿನ ಸಾರ್ಡೀನ್ಸ್​​ ಜಾತಿ ಮೀನಿನ ಹೆಚ್ಚಳ. ಇವು ಮೀನಿನ ತಳಿಯ ನಡುವೆ ಮತ್ತು ಆಹಾರದೊಳಗೆ ಹೆಚ್ಚಿನ ಸ್ಪರ್ಧೆಗೆ ಕಾರಣವಾಗುತ್ತದೆ. 2010ರಲ್ಲಿ ಜಪಾನಿ ಸಾರ್ಡೀನ್ಸ್​​ ಮೀನಿನ ಸಂಖ್ಯೆ ಸುಧಾರಣವಾಗಿ ಹೆಚ್ಚಳ ಆಗಿದೆ. ಇದೇ ವೇಳೆ ಮೇಲ್ಮೈ ಪದರದಿಂದ ಸಾಗರದ ಮೇಲ್ಮೈನಲ್ಲಿ ಪೋಷಕಾಂಶ ಪೂರೈಕೆ ಕಡಿಮೆಯಾಗಿದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನವಾಗಿದ್ದು, ಇದು ಹೆಚ್ಚು ಪ್ರಭಾವ ಬೀರುವ ಅಂಶವಾಗಿದೆ ಎಂದು ತಿಳಿಸಿದೆ.(ಪಿಟಿಐ)

ಇದನ್ನೂ ಓದಿ: ಹವಾಮಾನ ಬದಲಾವಣೆ, ಸಂಭಾವ್ಯ ಪರಿಹಾರೋಪಾಯಗಳು

ABOUT THE AUTHOR

...view details