Cleft Lip & Cleft Palate Treatment Timeline:ಮೇಲಿನ ತುಟಿಯಲ್ಲಿನ ಸೀಳನ್ನು ಕ್ಲೆಫ್ಟ್ ಲಿಪ್ ಮತ್ತು ಕ್ಲೆಫ್ಟ್ ಪ್ಯಾಲೆಟ್ ಎಂದು ಕರೆಯಲಾಗುತ್ತದೆ. ಈ ಸಮಸ್ಯೆಯು ತಾಯಿಯ ಗರ್ಭದಲ್ಲಿರುವ ಮಗುವಿನಲ್ಲಿ ಕಾಣಿಸುತ್ತದೆ. ಮಗುವು ಹುಟ್ಟುವಾಗಲೇ ಈ ತೊಂದರೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆನುವಂಶಿಕ ದೋಷಗಳು ಮತ್ತು ಅಂಗಾಂಶ ಬೆಳವಣಿಗೆಯಲ್ಲಿನ ಸಮಸ್ಯೆಗಳಿಂದಾಗಿ ಇಂತಹ ಸೀಳು ತುಟಿಯೊಂದಿಗೆ ಮಗು ಜನಿಸುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ಕ್ಲೆಫ್ಟ್ ಲಿಪ್ ಎಂದು ಕರೆಯುತ್ತಾರೆ. ಅಂಗುಳವು ಸಹ ಇದೇ ರೀತಿಯ ಸೀಳನ್ನು ಹೊಂದಿದೆ ಮತ್ತು ಇದನ್ನು ಕ್ಲೆಫ್ಟ್ ಪ್ಯಾಲೆಟ್ ಎಂದು ಕರೆಯಲಾಗುತ್ತದೆ. ಇವೆರಡೂ ಆನುವಂಶಿಕ ಅಸ್ವಸ್ಥತೆಗಳಾಗಿದ್ದು, ಇದು ತಾಯಿಯ ಗರ್ಭದಲ್ಲಿ ಅಸಹಜ ಅಂಗಾಂಶ ಬೆಳವಣಿಗೆಯನ್ನು ಉಂಟುಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.
ಈ ಕುರಿತು ಖ್ಯಾತ ಚರ್ಮರೋಗ ತಜ್ಞೆ ಸ್ವಪ್ನಾ ಪ್ರಿಯಾ ಪ್ರತಿಕ್ರಿಯಿಸಿ, ಈ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ವಯಸ್ಸಿನಲ್ಲೂ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಈ ಶಸ್ತ್ರಚಿಕಿತ್ಸೆಯಿಂದ ಮಾತನಾಡುವಲ್ಲಿ ಆಗುವ ಸಮಸ್ಯೆಯನ್ನು ಸುಧಾರಿಸುತ್ತದೆ. ಮುಖದಲ್ಲಿನ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಸರಿಯಾದ ಚಿಕಿತ್ಸೆಯಿಂದ ಸೀಳು ತುಟಿ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ತಿಳಿಸಿದರು.
ಈ ಸಮಸ್ಯೆ ಯಾವಾಗ ಸಂಭವಿಸುತ್ತದೆ?:ಸಾಮಾನ್ಯವಾಗಿ ಆರರಿಂದ ಒಂಬತ್ತು ವಾರಗಳ ಅವಧಿಯಲ್ಲಿ ಭ್ರೂಣದಲ್ಲಿ ಅಂಗುಳವು ರೂಪುಗೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ, ಕೆಲವರಲ್ಲಿ ಅಂಗುಳದ ಅಂಗಾಂಶ ಪೂರ್ಣವಾಗಿ ರೂಪುಗೊಳ್ಳದೇ ಇರುವುದರಿಂದ ಮೂಗು ಮತ್ತು ಬಾಯಿಯ ನಡುವೆ ಅಂತರವಿರುತ್ತದೆ ಎನ್ನುತ್ತಾರೆ ವೈದ್ಯರು. ವಿಶ್ವದಾದ್ಯಂತ ಪ್ರತಿ 1,000 ನವಜಾತ ಶಿಶುಗಳಲ್ಲಿ 1ರಿಂದ 25 ಮಕ್ಕಳಲ್ಲಿ ಈ ತೊಂದರೆ ಕಂಡುಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸುತ್ತಾರೆ.
ಶಸ್ತ್ರಚಿಕಿತ್ಸೆ ಯಾವಾಗ ಅಗತ್ಯ:ಸೀಳು ತುಟಿ ಮತ್ತು ಸೀಳು ಅಂಗಳವು ಮಗು ಹುಟ್ಟಿನಿಂದಲೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಉತ್ತಮ ಫಲಿತಾಂಶ ಕಾಣಬಹುದು ಎನ್ನುತ್ತಾರೆ ಸಂಶೋಧಕರು. ಕರೋಲಿನ್ಸ್ಕಾ ಯೂನಿವರ್ಸಿಟಿ ಹಾಸ್ಪಿಟಲ್ ನಡೆಸಿದ ಅಧ್ಯಯನವು ಸೀಳು ಅಂಗುಳಿನ ಸಂದರ್ಭದಲ್ಲಿ ಇದು ಹೆಚ್ಚು ಮುಖ್ಯವಾಗಿದೆ ಎಂದು ಬಹಿರಂಗಪಡಿಸಿತು. 12 ತಿಂಗಳ ವಯಸ್ಸಿನಲ್ಲಿ ಸೀಳು ತುಟಿ ಮತ್ತು ಸೀಳು ಅಂಗಳ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಹೋಲಿಸಿದರೆ ಆರು ತಿಂಗಳಲ್ಲಿ ಚಿಕಿತ್ಸೆ ಮತ್ತು ಸರಿಪಡಿಸಿದ ಮಕ್ಕಳು ತಮ್ಮ ಮಾತು ಮತ್ತು ಭಾಷಾ ಕೌಶಲ್ಯವನ್ನು ಸುಧಾರಿಸಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಎನ್‌ಎಲ್‌ಎಂ ಕೂಡ ಇದನ್ನು ಸ್ಪಷ್ಟಪಡಿಸಿದೆ. (ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
6 ತಿಂಗಳ ಮಕ್ಕಳಲ್ಲಿ:ಯಾವ ವಯಸ್ಸಿನಲ್ಲಿ ಉತ್ತಮ ಫಲಿತಾಂಶ ಸಿಗುತ್ತೆ ಎಂಬುದರ ಬಗ್ಗೆ ಇದುವರೆಗೆ ಹೆಚ್ಚಿನ ಪುರಾವೆಗಳಿಲ್ಲ. ಈ ಸಂದರ್ಭದಲ್ಲಿ, ಇತ್ತೀಚಿನ ಕರೋಲಿನ್ಸ್ಕಾ ವಿಶ್ವವಿದ್ಯಾಲಯದ ಆಸ್ಪತ್ರೆಯ ಅಧ್ಯಯನವು ಮಾರ್ಗದರ್ಶನ ನೀಡುತ್ತಿದೆ. ಈ ಸಂಶೋಧನೆಯಲ್ಲಿ, ಕೆಲವು ಮಕ್ಕಳು 6 ತಿಂಗಳುಗಳಲ್ಲಿ ಮತ್ತು ಇತರರು 12 ತಿಂಗಳುಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆರು ತಿಂಗಳ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳಲ್ಲಿ ಬಾಯಿ ಮತ್ತು ಮೂಗಿನ ಹೊಳ್ಳೆಗಳನ್ನು ಬೇರ್ಪಡಿಸುವ ಸ್ನಾಯು ವೆಲೋಫಾರ್ಂಜಿಯಲ್ ಸ್ಪಿಂಕ್ಟರ್ ಮಾತನಾಡುವ ಮತ್ತು ನುಂಗುವ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಅನ್ನೋದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.