ಹೈದರಾಬಾದ್: ಇಂದು ಅನೇಕ ಮಂದಿ ಸಾಮಾನ್ಯ ಬದಲಾಗಿ ಡಯಟ್ ಸಾಫ್ಟ್ ಡ್ರಿಂಕ್ಸ್ ಮೊರೆ ಹೋಗುತ್ತಿದ್ದಾರೆ. ಈ ಮೂಲಕ ತಮ್ಮ ಡಯಟ್ನಲ್ಲಿ ಸಕ್ಕರೆ ಅಂಶ ಕಡಿತದ ಪಾನೀಯಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ, ಈ ಡಯಟ್ ಸಾಫ್ಟ್ ಡ್ರಿಂಕ್ಸ್ಗಳನ್ನು ದೀರ್ಘಕಾಲ ಸೇವಿಸುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಕೂಡ ಬೀರಲಿದೆ ಎಂದಿದ್ದಾರೆ ಸಂಶೋಧಕರು.
ಡಯಟ್ ಸಾಫ್ಟ್ ಡ್ರಿಂಕ್ಸ್ನಲ್ಲಿ ಸಿಹಿ: ಜನರು ಪ್ರತಿನಿತ್ಯ ಈ ರೀತಿ ಡಯಟ್ ಡ್ರಿಂಕ್ಸ್ ಸೇವಿಸುತ್ತಿದ್ದರೆ, ಅದರ ಪ್ರಮಾಣವನ್ನು ಶೇ 10 ಕ್ಕಿಂತ ಕಡಿಮೆ ಮಾಡಲು ಡಬ್ಲ್ಯೂಎಚ್ಒ ಸಲಹೆ ನೀಡಿದೆ. ಬಳಿಕ ಶೇ 5ಕ್ಕಿಂತ ಅಥವಾ ಶೇ 25ರಷ್ಟುನ್ನು ಪ್ರತಿನಿತ್ಯ ಕಡಿಮೆ ಮಾಡುವುದರಿಂದ ಹೆಚ್ಚುವರಿ ಆರೋಗ್ಯ ಲಾಭ ಪಡೆಯಬಹುದು ಎಂದಿದೆ.
ಡಯಟ್ ಸಾಫ್ಟ್ ಡ್ರಿಂಕ್ಸ್ಗಳು ಸಾಮಾನ್ಯ ಸಾಫ್ಟ್ ಡ್ರಂಕ್ಸ್ನ ರುಚಿಯನ್ನೇ ಹೊಂದಿರುವಂತೆ ಮಾಡಿದ್ದರೂ ಇದರಲ್ಲಿ ಸಕ್ಕರೆ ಇರುವುದಿಲ್ಲ. ಸಕ್ಕರೆ ಬದಲಾಗಿ ಇದರಲ್ಲಿ ಕೃತಕ ಸಿಹಿ ಬಳಕೆ ಮಾಡಲಾಗುವುದು. ಈ ಕೃತಕ ಸಿಹಿ ಆಸ್ಪರ್ಟೇಮ್, ಸಚ್ಚರೈನ್ ಸುಕ್ರಲೊಸ್ ಹೊಂದಿರುತ್ತದೆ. ಕೃತಕ ಸಿಹಿ ಹೊಂದಿರುವ ಪಾನೀಯಗಳು ಸಾಮಾನ್ಯ ಪಾನೀಯಕ್ಕಿಂತ ಹೆಚ್ಚು ಸಿಹಿಯಾಗಿರುತ್ತದೆ.
ಆಸ್ಪರ್ಟೇಮ್ ಬಗ್ಗೆ ಸಂಶೋಧಕರು ಹೇಳುವುದೇನು?: ಸಾಫ್ಟ್ ಡ್ರಿಂಕ್ಸ್ನಲ್ಲಿರುವ ಕೃತಕ ಸಿಹಿಗಳು ಸೇವನೆಗೆ ಸುರಕ್ಷಿತವಾಗಿದೆ ಎಂದು ಅಮೆರಿಕ ಮತ್ತು ಆಸ್ಟ್ರೇಲಿಯಾ ಆಹಾರ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಸಂಶೋಧಕರು ಇದರ ದೀರ್ಘ ಸೇವನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಿಯಮಿತವಾಗಿ ಇದರ ಸೇವನೆ ಮುಂದಾಗುವವರಲ್ಲಿ ಇದು ಕೆಲವು ನಿರ್ದಿಷ್ಟ ಚಯಾಪಚಯ ಪರಿಸ್ಥಿತಿಗೆ ಕಾರಣವಾಗಬಹುದು.
ಕೃತಕ ಸಿಹಿಗೆ ಬಳಕೆ ಮಾಡುವ ಆಸ್ಪರ್ಟೇಮ್ ಕ್ಯಾನ್ಸರ್ ಕಾರಕ ಬೆಳವಣಿಗೆ ಕಾರಣವಾಗಬಹುದು ಎಂದು 2023ರಲ್ಲಿ ಡಬ್ಲ್ಯೂಹೆಚ್ಒ ತಿಳಿಸಿದೆ. ಆದರೆ, ಈ ಸಂಬಂಧ ಯಾವುದೇ ನೈಜ ದೃಢವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ.
ತೂಕ ನಿರ್ವಹಣೆಗೆ ಡಯಟ್ ಸಾಫ್ಟ್ ಡ್ರಿಂಕ್ಸ್?: ಸಂಶೋಧಕರ ಪ್ರಕಾರ, ಡಯಟ್ ಸಾಫ್ಟ್ ಡ್ರಿಂಕ್ಸ್ಗಳು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂಬ ಯಾವುದೇ ಬಲವಾದ ಸಂಬಂಧ ಇಲ್ಲ. 2022ರಲ್ಲಿ ಡಬ್ಲ್ಯೂಹೆಚ್ಒ ಈ ಸಂಬಂಧ ವ್ಯವಸ್ಥಿತಿ ಪರಮಾರ್ಶೆ ನಡೆಸಿದೆ. ಈ ಯಾದೃಚ್ಛಿಕ ನಿಯಂತ್ರಣದಲ್ಲಿ ಕೃತಕ ಸಿಹಿಕಾರಕಗಳು ಕೊಂಚ ಪ್ರಮಾಣದ ತೂಕ ತಗ್ಗಿಸುವಲ್ಲಿ ಸಹಾಯ ಮಾಡಿರುವುದು ಕಂಡಿದೆ. ಆದರೆ, ಗ್ರಹಿಕೆ ಅಧ್ಯಯನದಲ್ಲಿ ಕೃತಕ ಸಿಹಿ ಸೇವನೆಯು ಹೆಚ್ಚಿನ ಬಿಎಂಐ ಅಪಾಯಕ್ಕೆ ಕಾರಣವಾಗಿದೆ.